Actor Darshan's Weight: ಜೈಲು ಸೇರಿದ ಬಳಿಕ ನಟ ದರ್ಶನ್‌ ತೂಕ ಇಳಿಕೆಯಾಗಿದ್ದೆಷ್ಟು?-ಮಾಹಿತಿ, ವಿವರ

Actor Darshan's Weight loss: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್‌ ತೂಕದಲ್ಲಿ ಇಳಿಕೆಯಾಗಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ಲಭ್ಯವಾಗಿದೆ.

ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಕೆಯನ್ನು ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ ಪ್ರಜರಣದಲ್ಲಿ ಜೈಲೈ ಸೇರಿದಾಗಿನಿಂದ ನಟ ದರ್ಶನ್‌ ತೂಕದಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಜೈಲು ಸೇರಿದಾಗಿನಿಂದಲೂ ತೂಕ ಎಷ್ಟು ಕಡಿಮೆಯಾಗಿದೆ ಹಾಗೂ ಮೊದಲಿನ ತೂಕ ಎಷ್ಟಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

Actor Darshan s Weight loss After Went to jail in murder case Know details

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ತೂಕದಲ್ಲಿ ತಿಂಗಳೊಳಗೆ 10 ಕಿಜಿಯಷ್ಟು ತೂಕ ಇಳಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ನ ಆರೋಗ್ಯದ ಬಗ್ಗೆ ಜೈಲಾಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮೆಡಿಕಲ್ ಟೆಸ್ಟ್ ವೇಳೆ 107 ಕೆ.ಜಿ. ತೂಕ ಇದ್ದ ನಟ ದರ್ಶನ್‌ ಇದೀಗ 10 ಕೆ.ಜಿ ಇಳಿಕೆಯಾಗಿದ್ದಾರೆ. ಅಂದರೆ 97 ಕ.ಜಿ ಗೆ ಇಳಿಕೆಯಾಗಿದ್ದು, ಆದ್ದರಿಂದ ಜೈಲಾಧಿಕಾರಿಗಳು ನಟ ದರ್ಶನ್‌ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಅಲ್ಲದೆ ನಿಯಮಿತ ಆರೋಗ್ಯ ತಪಾಸಣೆಗೂ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿಯಂತಾಗಲಿದ್ದಾರಾ ನಟ ದರ್ಶನ್.?: ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ತಿಳಿಯುತ್ತಿದ್ದಂತೆ, ನಟ ದರ್ಶನ್‌ ಗ್ಯಾಂಗ್‌ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿಕೊಂಡು ಬೆಂಗಳೂರಿಗೆ ಕರೆತಂದಿದೆ. ಮೊದಲಿಗೆ ರೇಣುಕಾಸ್ವಾಮಿಯನ್ನು ನಟ ದರ್ಶನ್‌ ಮನೆಗೆ ಕರೆದೊಯ್ಯಲಾಗಿದ್ದು, ಬಳಿಕ ನೇರವಾಗಿ ಪಟ್ಟಣಗೆರೆಯ ಶೆಡ್‌ಗೆ ಕೊರೆದೊಯ್ಯಲಾಗಿದೆ. ನಂತರ ಅಲ್ಲಿಗೆ ದರ್ಶನ್‌ & ಪವಿತ್ರಾ ಗೌಡ ಆಗಮಿಸಿದ್ದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿತ್ತು.

ಶೆಡ್‌ನಲ್ಲಿ ಪವಿತ್ರಾ ಗೌಡ ರೇಣುಕಾಸ್ವಾಮಿಯನ್ನು ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ನಂತರ ಆತ ನಾನ್‌ವೆಜ್‌ ತಿನ್ನಲ್ಲ ಅಂತಾ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಆಗ ನಟ ದರ್ಶನ್‌ ಆತನ ಎದೆಗೆ ಕಾಲಿನಲ್ಲಿ ಒದ್ದು ಬಲವಂತವಾಗಿ ಮಾಂಸದ ಮೂಳೆಯನ್ನು ಬಾಯಲ್ಲಿ ಇಟ್ಟಿದ್ದಾನೆ. ಅಷ್ಟೇ ಅಲ್ಲದೆ, ಕರೆಂಟ್‌ ಶಾಕ್‌ ಕೊಟ್ಟಿದ್ದಾರೆ. ನಂತರ ಅಲ್ಲಿದ್ದ ಲಾರಿಗಳಿಗೆ ಆತನನ್ನು ಪುಟ್‌ಬಾಲ್‌ ರೀತಿ ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆಗೆ ಬಿಸಾಡಿ ತಲೆಗೆ ಒಡೆದು ಭೀಕರವಾಗಿ ಹತ್ಯೆ ಮಾಡಿದ್ದಾರೆ ಅಂತಲೂ ತಿಳಿದುಬಂದಿತ್ತು.

ಹಾಗೆಯೇ ನಟ ದರ್ಶನ್‌ & ಪವಿತ್ರಾ ಗೌಡ ಮಾಡಿದ ತಪ್ಪಿಗೆ ಬೇರೆಯವರ ಮಕ್ಕಳು ಇದೀಗ ಜೈಲು ಸೇರಿದ್ದು, ಅವರ ಕುಟುಂಬಗಳು ಬೀದಿದೆ ಬಿದ್ದು ಕಣ್ಣೀರಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದರ್ಶನ್‌ ಒಬ್ಬ ಉತ್ತಮ ನಟ ಅಂತಲೂ ಹೆಸರು ಮಾಡಿದ್ದು, ಈತ ಸಮಾಜಕ್ಕೆ ಮಾದರಿಯಾಗಬಹುದಿತ್ತು. ಆದರೆ ಇದೀಗ ಈತನಿಂದ ನಮ್ಮ ಕಟುಂಬಗಳು ಬೀದಿಗೆ ಬರುವಂತಾಗಿವೆ ಎಂದು ಜೈಲು ಸೇರಿರುವ ಆರೋಪಿಗಳ ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇಷ್ಟೆಲ್ಲಾ ಆದರೂ ಕೂಡ ಅಂಧಾಭಿಮಾನಿಗಳು ನಮ್ಮ ಬಾಸ್‌.. ಡಿ ಬಾಸ್‌ ಅಂತಾ ಹುಚ್ಚರಂತೆ ಮೆರೆಯುತ್ತಿದ್ದಾರೆ. ಇವರಿಗೆಲ್ಲ ಹೇಳೋದು ಒಂದೇ ಮಾತು ಮೊದಲು ನಿಮ್ಮ ತಂದೆ, ತಾಯಿಗೆ ನೀವು ಹಿರೋಗಳಾಗಿ. ಸಮಾಜಕ್ಕೆ ಉತ್ತಮ ಕೊಡುಗೆ ಕೊಟ್ಟಿರುವ ತುಂಬಾ ಜನ ಮಹಾನುಭಾವರಿದ್ದಾರೆ. ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವ ಮೂಲಕ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ. ಸಾಮಾನ್ಯವಾಗಿ ದೊಡ್ಡ ಸಾಧನೆ ಮಾಡಿದಂತಹ ನಾಯಕ, ನಟರು ತಪ್ಪುಗಳನ್ನು ಮಾಡಿರುತ್ತಾರೆ ಇಲ್ಲ ಅಂತಲ್ಲ. ಮತ್ತೆ ಆ ತಪ್ಪುಗಳನ್ನು ತಿದ್ದಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಮಾದರಿಯಾಗಿದ್ದನ್ನು ನಾವು ನೋಡಿರುತ್ತೇವೆ.

ಆದರೆ ಮಾಡಿದ ತಪ್ಪನ್ನೇ ಮತ್ತೆ ಮಾಡಿಕೊಂಡು, ಎಷ್ಟು ಬಾರಿ ಯಾರೇ ಬುದ್ಧಿವಾದ ಹೇಳಿದರೂ ಕೂಡ ತಿದ್ದಿಕೊಳ್ಳದೇ, ನಡೆದಿದ್ದೇ ದಾರಿ ಎನ್ನುವವರು ಮಾತ್ರ ಯಾವತ್ತಿಗೂ ಸಮಾಜಕ್ಕೆ ಕಂಟಕನೇ ಅನ್ನುವುದನ್ನು ಮರೆಯಬೇಡಿ. ಹಾಗಂತ ರೇಣುಕಾಸ್ವಾಮಿ ಮಾಡಿದ್ದು ಸರಿಯಂತಲ್ಲ, ಆತ ಒಂದು ಹೆಣ್ಣಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದು ದೊಡ್ಡ ತಪ್ಪೇ. ಹಲವು ಮಾರ್ಗಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಇಲ್ಲದಿದ್ದರೆ, ಆ ಜಿಲ್ಲೆಯ ಎಸ್ಪಿ ಅವರಿಗೆ ಹೇಳಿ ಆತನಿಗೆ ವಾರ್ನ್‌ ಮಾಡಿಸಬಹುದಿತ್ತು. ಅದನ್ನು ಬಿಟ್ಟು ಕೊಲ್ಲುವ ಹಂತಕ್ಕೆ ಹೋಗಿರುವುದು ಕೂಡ ದೊಡ್ಡ ಅಪರಾಧವೆ.

ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದರ್ಶನ್‌ ಬಗ್ಗೆ ಅಂಧಾಭಿಮಾನಿಗಳು ಜೈಕಾರ ಹಾಕುತ್ತಿದ್ದರೆ, ಮತ್ತೊಂದೆಡೆ ಬಹುತೇಕ ಮಂದಿ ಸಾಮಾಜಿಕ ಜಾಲತಾಣಗಲ್ಲಿ ರೇಣುಕಾಸ್ವಾಮಿಯಂತೆ ಆಗ್ತಾರೆ ಅಂತಲೂ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಾಗಲೇ ದರ್ಶನ್‌ ಮುಖ ಬಾಡಿಹೋದ ಬಾಳೆಹಣ್ಣಿನ ಸಿಪ್ಪೆಯಂತಾಗಿದೆ. ಇನ್ನು ಇದೀಗ ಜೈಲು ಸೇರಿದ್ದು, ಸೊರಗಿ ರೇಣುಕಾಸ್ವಾಮಿಯಂತೆ ಆಗಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+