ನಟ, ಕಾಂಗ್ರೆಸ್ ಮುಖಂಡ ಅರ್ಜುನ್ ದೇವ್‌ರನ್ನು ಕೊಲ್ಲಲು ಸುಪಾರಿ, ದೂರು
ಬೆಂಗಳೂರು, ಮಾರ್ಚ್ 24: ಕನ್ನಡದ ಯುಗಪುರಷ ಚಿತ್ರದ ನಾಯಕ ಮತ್ತು ಕಾಂಗ್ರೆಸ್ ಸ್ಥಳೀಯ ಮುಖಂಡನೆಂದು ಗುರುತಿಸಿಕೊಂಡಿರುವ ಅರ್ಜುನ್ ದೇವ್ ಅವರು 'ತಮ್ಮನ್ನು ಕೊಲ್ಲಲು ಸುಪಾರಿ ನೀಡಲಾಗಿದೆ' ಎಂದು ಬ್ಯಾಟರಾಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕಾಶಿಫ್ ಎಂಬಾತ ಸುಪಾರಿ ಪಡೆದಿದ್ದು, ನನ್ನ ಮನೆಯ ಸುತ್ತ-ಮುತ್ತಾ ಮತ್ತು ನನ್ನ ಚಲನ ವಲನಗಳ ಮೇಲೆ ಆತ ನಿಗಾವಹಿಸಿದ್ದಾನೆ ಎಂದು ಅರ್ಜುನ್ ದೇವ್ ಕೊಟ್ಟಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾಶಿಫ್ ಎಂಬಾತ ತನ್ನ ಮನೆಯ ಬಳಿ ಬಂದಿದ್ದನ್ನು, ತನ್ನನ್ನು ಹಿಂಬಾಲಿಸುತ್ತಿರುವುದುದನ್ನು ಗಮನಿಸಿರುವುದಾಗಿ ಹೇಳಿರುವ ಅರ್ಜುನ್ 'ತಮಗೆ ರಕ್ಷಣೆ ನೀಡಬೇಕು' ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಅರ್ಜುನ್ ದೂರು ನೀಡಿರುವ ಕಾಶಿಫ್ ಎಂಬಾತನ ಮೇಲೆ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಕೊಲೆ ಪ್ರಯತ್ನದಂತಹಾ ಗಂಭೀರ ಪ್ರಕರಣಗಳು ಎಚ್.ಎ.ಎಲ್ ಠಾಣೆ ಸೇರಿದಂತೆ ಹಲವು ಠಾಣೆಗಳಲ್ಲಿ ದಾಖಲಾಗಿದೆ. ಅರ್ಜುನ್ ದೇವ್ ದೂರು ಸ್ವೀಕರಿಸಿರುವ ಬ್ಯಾಟರಾಯನಪುರ ಪೊಲೀಸರು ಕಾಶೀಪ್‌ನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.












Click it and Unblock the Notifications