• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸಕ್ರಿಯ ಪ್ರಕರಣ: ದೇಶದಲ್ಲೇ 7ನೇ ಸ್ಥಾನದಲ್ಲಿದೆ ಬೆಂಗಳೂರು

|

ಬೆಂಗಳೂರು, ಮಾರ್ಚ್ 25: ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳ ಪೈಕಿ ಬೆಂಗಳೂರು 7ನೇ ಸ್ಥಾನದಲ್ಲಿದೆ ಎಂಬುದು ತಿಳಿದುಬಂದಿದೆ.

ಬೆಂಗಳೂರು ನಗರದಲ್ಲಿ ಬುಧವಾರ 1,398 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,520 ಕ್ಕೆ ಏರಿದೆ. 2020 ರ ಅಕ್ಟೋಬರ್ 11 ರ ವೇಳೆಗೆ 66,854 ರಿಂದ ಜನವರಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,000 ಕ್ಕಿಂತ ಕಡಿಮೆಯಾಗಿತ್ತು, ಆದರೆ ಕಳೆದ 10 ದಿನಗಳಿಂದ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದ್ದು, ಇದು ಕೊರೋನಾ 2ನೇ ಅಲೆ ಆತಂಕವನ್ನು ಎದುರು ಮಾಡಿದೆ.

ಹೊರಗೆ ಕಾಲಿಟ್ರೆ ಹುಷಾರ್: ಕರ್ನಾಟಕದಲ್ಲಿ ಕೊರೊನಾವೈರಸ್ ಮಾರ್ಗಸೂಚಿ!

ಮಾರ್ಚ್ 15 ರಂದು 6,454 ಪ್ರಕರಣಗಳು ವರದಿಯಾಗಿದ್ದು ಮಾರ್ಚ್ 24ರ ವೇಳೆಗೆ 11,520ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಕೋವಿಡ್ ಸ್ಥಿತಿಗತಿ ಕುರಿತು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಮಾತನಾಡಿದರು.

ಈ ನಡುವೆ ನಗರದಲ್ಲಿ ಚೇತರಿಕೆ ಪ್ರಮಾಣ ಕೂಡ ಇಳಿಕೆಯಾಗಿದೆ. ಮಾರ್ಚ್ 15 ರಂದು ಶೇ. 97.33 ರಷ್ಟಿದ್ದ ಚೇತರಿಕೆ ಪ್ರಮಾಣ ಇದೀಗ 96.18ಕ್ಕೆ ಇಳಿದಿದೆ.

ದೇಶದಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣ ಹೊಂದಿರುವ ಟಾಪ್ 10 ಜಿಲ್ಲೆಗಳ ಪೈಕಿ 9 ಜಿಲ್ಲೆಗಳು ಕೇವಲ ಮಹಾರಾಷ್ಟ್ರ ಒಂದಕ್ಕೇ ಸೇರಿವೆ. ಇನ್ನೊಂದು ಜಿಲ್ಲೆಯೆಂದರೆ ಕರ್ನಾಟಕದ ಬೆಂಗಳೂರು ನಗರ ಜಿಲ್ಲೆ. ಅದು 7ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲೂ ಕೊರೊನಾ ಅಬ್ಬರ ಮುಂದುವರೆಸಿದ್ದು, ಬುಧವಾರ ಒಟ್ಟು 2,298 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 12 ಮಂದಿ ಮಂದಿ ಸಾವನ್ನಪ್ಪಿದ್ದು, 995 ಮಂದಿ ಗುಣಮುಖರಾಗಿದ್ದಾರೆ.

ಇದೇ ವೇಳೆ ಸಕ್ರಿಯ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, 16,886ಕ್ಕೆ ತಲುಪಿದೆ. 143 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1.08 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು, ಪಾಸಿಟಿವಿಟಿ ದರ ಶೇ.2.12ರಷ್ಟು ದಾಖಲಾಗಿದೆ.

   ಕೊರೊನಾ ಕಂಟ್ರೋಲ್ ಗೆ ರಾಜ್ಯ ಸರ್ಕಾರದಿಂದ ಹೊಸ ಗೈಡ್ ಲೈನ್ಸ್..! ನಿಯಮ ಉಲ್ಲಂಘಿಸಿದ್ರೆ ದಂಡ | Oneindia Kannada

   ಕಳೆದ ನ.11ರಂದು 2,584 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಗರಿಷ್ಠ ಪ್ರಕರಣ ಬುಧವಾರ ದಾಖಲಾಗಿದೆ. ಇದೇ ರೀತಿ ಕಳೆದ ಡಿ.22ರ ಬಳಿಕ (14 ಸಾವು) ಅತೀ ಹೆಚ್ಚು ಸಾವು ಬುಧವಾರ ಸಂಭವಿಸಿದೆ.

   English summary
   Bengaluru Urban is among 10 districts across the country with the highest number of active Covid cases, according to national estimates announced in New Delhi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X