ಸೋಂಕಿತರ ರಕ್ಷಣೆಗೆ ಪಲ್ಸ್ ಆಕ್ಸಿ ಮೀಟರ್ ವಿತರಿಸಿ: ಆಮ್ ಆದ್ಮಿ ಪಕ್ಷ

ಬೆಂಗಳೂರು, ಜೂನ್ 23: ರಾಜ್ಯದಲ್ಲಿ ಸೋಂಕಿತರ ಸಾವನ್ನು ತಡೆಗಟ್ಟಲು ಪಲ್ಸ್ ಆಕ್ಸಿ ಮೀಟರ್ ಗಳನ್ನು ವಿತರಿಸಲು ಆಮ್ ಆದ್ಮಿ ಪಕ್ಷದ ಒತ್ತಾಯಿಸಿದೆ.

ರಾಜ್ಯದಲ್ಲಿ ಕ್ವಾರಂಟೈನ್ ನಲ್ಲಿ ಇರುವ ಎಲ್ಲ ಕೊರೊನಾವೈರಸ್ ಸೋಂಕಿತರಿಗೂ ಪಲ್ಸ್ ಆಕ್ಸಿ ಮೀಟರ್ ಗಳನ್ನು ವಿತರಿಸಬೇಕಾಗಿದೆ. ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರವು ಈಗಾಗಲೆ ಕ್ವಾರಂಟೈನ್ ನಲ್ಲಿರುವ ಪ್ರತಿಯೊಬ್ಬ ಸೋಂಕಿತರಿಗೂ ಈ ಪಲ್ಸ್ ಆಕ್ಸಿ ಮೀಟರ್ ಗಳನ್ನು ವಿತರಿಸುತ್ತಿದೆ.

ಇದರಿಂದಾಗಿ ಕಾಲಕಾಲಕ್ಕೆ ಸೋಂಕಿತರಿಗೆ ಆಮ್ಲಜನಕ ಪೂರೈಕೆಯ ಮಟ್ಟವನ್ನು ತಾನೇ ಸ್ವತಃ ಗುರುತಿಸಿ ಕೊಳ್ಳಬಹುದಾಗಿದೆ. ಇದರಿಂದಾಗಿ ದೆಹಲಿ ರಾಜ್ಯದಲ್ಲಿ ಸೋಂಕಿತರಿಗೆ ತಕ್ಷಣದಲ್ಲಿ ಆಮ್ಲಜನಕ ಪೂರೈಕೆಯ ವ್ಯವಸ್ಥೆಯು ಸರಾಗವಾಗಿ ನಡೆಯುವುದರಲ್ಲಿ ಯಶಸ್ವಿಯಾಗುತ್ತಿದೆ .

AAP insists to distribute Pulse oximeters to prevent death of infected

ಈ ಪಲ್ಸ್ ಆಕ್ಸಿ ಮೀಟರ್ ಗಳ ಮೂಲಕ ರೋಗಿಯು ಗಂಟೆಗೊಮ್ಮೆ ತನ್ನ ಆಮ್ಲಜನಕ ಪೂರೈಕೆಯ ಮಟ್ಟವನ್ನು ತಾನೇ ಸ್ವತಃ ಪರೀಕ್ಷಿಸಿ ಕೊಳ್ಳಬಹುದಾಗಿದೆ.

ಏನಾದರೂ ರೋಗಿಗೆ ಉಸಿರಾಡಲು ತೊಂದರೆಯಾದಾಗ ಕೂಡಲೇ ಸರ್ಕಾರದ ಸಹಾಯವಾಣಿಗೆ ದೂರವಾಣಿಯ ಮೂಲಕ ತಿಳಿಸಬಹುದು. ಕೂಡಲೇ ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರೋಗಿಗೆ ಆಮ್ಲಜನಕವನ್ನು ಪೂರೈಸುತ್ತಾರೆ. ಈ ಮೂಲಕ ಸಾವಿನ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ತಡೆಗಟ್ಟಬಹುದಾಗಿದೆ.

ಈ ಮೂಲಕ ರಾಜ್ಯದಲ್ಲಿನ ವೆಂಟಿಲೇಟರ್ ಗಳ ಕೊರತೆಯನ್ನು ನೀಗಿಸಬಹುದು. ಕೂಡಲೇ ರಾಜ್ಯ ಸರಕಾರವು ಈ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ನೀತಿ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಬಸವರಾಜ ಮುದಿಗೌಡರ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+