ಮುದ್ದಿನ ನಾಯಿ ಮರಿ ಸತ್ತಿದ್ದಕ್ಕೆ ಬೆಂಗಳೂರಿನಲ್ಲಿ ಇಬ್ಬರ ಆತ್ಮಹತ್ಯೆ!

ಬೆಂಗಳೂರು, ಸೆಪ್ಟೆಂಬರ್ 1: ತನ್ನ ಮುದ್ದಿನ ನಾಯಿ ತೀರಿಹೋಯಿತೆಂದು ಯುವತಿಯೊಬ್ಬಳು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ಆಗಸ್ಟ್ 30 ರಂದು ನಡೆದಿದೆ. ತನ್ನ ಸ್ನೇಹಿತೆ ಆತ್ಮಹತ್ಯೆ ಮಾಡಿಕೊಂಡಳು ಎಂದು ನೊಂದ ಆಕೆಯ ಸ್ನೇಹಿತನೂ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದು ನಾಯಿಯ ಸಾವು ಇಬ್ಬರ ಆತ್ಮಹತ್ಯೆಗೆ ಕಾರಣವಾದ ವಿಚಿತ್ರ ಘಟನೆ ನಡೆದಿದೆ.

ಜಮಿನಿ ಎಂಬ 19 ವರ್ಷದ ಯುವತಿ ತಾನು ಸಾಕಿದ್ದ ಜಿಮ್ಮಿ ಎಂಬ ಪಮೋರಿಯನ್ ನಾಯಿಯನ್ನು ಬಹಳ ಹಚ್ಚಿಕೊಂಡಿದ್ದಳು. ಆ ನಾಯಿ ನಾಲ್ಕು ವರ್ಷಗಳಿಂದ ಅವರೊಂದಿಗೇ ಇತ್ತು. ಆದರೆ ಕಳೆದ ಜುಲೈ ನಲ್ಲಿ ಅದು ಅನಾರೋಗ್ಯದಿಂದ ಸಾವಿಗೀಡಾಗಿತ್ತು. ಅಂದಿನಿಂದ ಖಿನ್ನತೆಗೊಳಗಾಗಿದ್ದ ಆರ್ ಪಿಎ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಜಮಿನಿಗೆ ತಂದೆ-ತಾಯಿ ಹಲವು ಬಾರಿ ಸಾಂತ್ವನ ಹೇಳಿದ್ದರು.

Aa Dog's death snatched two youths life in Bengaluru

ಆಕೆಗೆ ಜಿಮ್ಮಿ ಥರದ್ದೇ ಮತ್ತೊಂದು ತಾಯಿಯನ್ನೂ ತಂದುಕೊಟ್ಟು 'ಜಿಮ್ಮಿ' ಎಂದೇ ಹೆಸರಿಡಲಾಗಿತ್ತಾದರೂ ಜಮಿನಿ ಮಾತ್ರ ಖಿನ್ನತೆಯಿಂದ ಹೊರಬಂದಿರಲಿಲ್ಲ. ಆಗಸ್ಟ್ 30 ರ ಬುಧವಾರ ತನ್ನ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ನೇಹಿತೆಯ ಸಾವಿನ ಸುದ್ದಿ ಕೇಳಿ ಮನನೊಂದ ಆಕೆಯ ಸ್ನೇಹಿತನೂ ಬಿನ್ನಿಮಿಲ್ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಚಿಕಿತ್ಸೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+