ಲವರ್ ಮೊಬೈಲ್ ಎಗರಿಸಲು ಪ್ರೇಯಸಿಯಿಂದಲೇ ಸುಪಾರಿ! ಇಷ್ಟಕ್ಕೂ ಅದರಲ್ಲೇನಿತ್ತು ಗೊತ್ತಾ?
ಮೊದಲಿಂದಲೂ ಕೊಲೆ ಸೇರಿದಂತೆ ಇನ್ನಿತರೆ ಅಪರಾಧ ಕೃತ್ಯಗಳಿಗೆ ಸುಪಾರಿ ನೀಡಿರುವ ವಿಚಾರವನ್ನು ಕೇಳಿರುತ್ತೀರಿ. ಇದೀಗ ಪ್ರಿಯಕರನ ಮೊಬೈಲ್ ಕಿತ್ತುಕೊಳ್ಳುವಂತೆ ಪ್ರೇಯಸಿಯೇ ಸುಪಾರಿ ಕೊಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಮೊಬೈಲ್ ಪಡೆಯಲು ದೊಡ್ಡ ನಾಟಕವನ್ನೇ ಆಡಿ ಸಿಕ್ಕಿಬಿದ್ದಿದ್ದಾಳೆ.
ನಗರದ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಒಡಿಶಾ ಮೂಲದ ವಂಶಿಕೃಷ್ಣ ರೆಡ್ಡಿ ಮತ್ತು ತಮಿಳುನಾಡಿನ ಶ್ರುತಿ ಲವ್‌ನಲ್ಲಿ ಬಿದ್ದಿದ್ದರು. ಎರಡೂ ಕುಟುಂಬಗಳಿಗೆ ತಿಳಿಸಿ ಮದುವೆಯಾಗಲು ಸಹ ಮುಂದಾಗಿದ್ದರು. ಆದರೆ ಶ್ರುತಿ ಬೇರೆ ಯುವಕನ ಜೊತೆಗೆ ಮೊದಲು ಸಂಬಂಧ ಇತ್ತು ಎನ್ನುವ ವಿಚಾರವನ್ನು ವಂಶಿಕೃಷ್ಣಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ವಂಶಿ ಮದುವೆ ಬೇಡ ಎಂದು ನಿರ್ಧರಿಸಿದ್ದ.

ಈ ವಿಚಾರವಾಗಿ ಇಬ್ಬರು ನಡುವೆ ವಾಗ್ವಾದ ನಡೆದು ನಾನೊಂದು ತೀರ, ನೀನೊಂದು ತೀರ ಎನ್ನುವಂತಾಗಿದ್ದರು. ಆದರೆ, ವಂಶಿ ಮೊಬೈಲ್‌ನಲ್ಲಿ ತನ್ನ ಖಾಸಗಿ ಪೋಟೋ, ವಿಡಿಯೋಗಳು ಇರಬಹುದು ಎಂಬ ಆತಂಕದಲ್ಲಿ ಹೇಗಾದರೂ ಮಾಡಿ ವಂಶಿ ಮೊಬೈಲ್ ಚೆಕ್ ಮಾಡಬೇಕು. ಇಲ್ಲದಿದ್ದರೆ ಮುಂದೆ ನನಗೆ ಕುತ್ತು ಬರಲಿದೆ ಎಂದು ಶ್ರುತಿ ನಿರ್ಧರಿಸಿದ್ದಳು. ಆದರೆ, ನೇರವಾಗಿ ವಂಶಿ ಮೊಬೈಲ್ ಪಡೆಯುವುದು ಅಸಾಧ್ಯ ಎಂದು ದೊಡ್ಡ ಸ್ಕೆಚ್ ಹಾಕಿದ್ದಳು.
ಅದರಂತೆ ಶ್ರುತಿ ವಂಶಿಯನ್ನು ಕರೆಸಿಕೊಂಡಾಗ ಅವನ ಮೊಬೈಲ್ ಕಿತ್ತಕೊಳ್ಳಬೇಕು ಎಂದು ಕೆಲವರಿಗೆ ಪ್ಲ್ಯಾನ್ ವಿವರಿಸಿ ಸುಲಿಗೆಗೆ ಸುಪಾರಿ ನೀಡಿದ್ದಳು. ಮೊದಲಿಗೆ ತನಗೆ ಪರಿಚಯವಿದ್ದ ಮನೋಜ್ ಎಂಬಾತನನ್ನು ಕರೆಸಿ ಸುಪಾರಿ ಕೊಟ್ಟಿದ್ದಳು. ಇದಕ್ಕೆ 1 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದಳು. ಡೀಲ್ ಒಪ್ಪಿಕೊಂಡಿದ್ದ ಮನೋಜ್ ತನ್ನ ಸ್ನೇಹಿತರ ಗ್ಯಾಂಗ್ ಕಟ್ಟಿಕೊಂಡು ರೆಡಿಯಾಗಿದ್ದ.
ಮತ್ತೊಂದೆಡೆ ಶ್ರುತಿ ವಂಶಿಗೆ ಕರೆ ಮಾಡಿ ತನ್ನೊಂದಿಗೆ ಮಾತನಾಡಬೇಕು ಎಂದು ಭೋಗನಹಳ್ಳಿಯ ಒಂದು ಸ್ಥಳಕ್ಕೆ ಕರೆಸಿಕೊಂಡಿದ್ದಳು. ಕೆಲ ಹೊತ್ತು ಇಬ್ಬರೂ ಮಾತನಾಡಿದ್ದರು. ಬಳಿಕ ಅಲ್ಲಿದ್ದ ಬೈಕ್ ಮೇಲೆ ಹೊರಟಿದ್ದಾಗ ಮೊದಲೇ ಪ್ಲ್ಯಾನ್ ಮಾಡಿದಂತೆ ಮನೋಜ್ ಗ್ಯಾಂಗ್ ಕಾರಿನಲ್ಲಿ ಹಿಂಬಾಲಿಸಿತ್ತು. ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದು, ವಂಶಿ ಮೇಲೆ ಗಲಾಟೆ ಶುರು ಮಾಡಿದ್ದ ಗ್ಯಾಂಗ್, ಅನುಮಾನ ಬರದಂತೆ ಶ್ರುತಿ ಹಾಗೂ ವಂಶಿ ಮೊಬೈಲ್‌ಗಳನ್ನು ಕಿತ್ತುಕೊಂಡು ಹೊರಟು ಹೋದರು.

ಈ ವಿಚಾರವಾಗಿ ವಂಶಿ ಪೊಲೀಸರಿಗೆ ದೂರು ಕೊಡೋಣ ಎಂದು ಹೇಳಿದಾಗ ಶ್ರುತಿ ಬೇಡ ಎಂದಿದ್ದಳು. ಬೆಂಗಳೂರಿನಲ್ಲಿ ಇದೆಲ್ಲ ಕಾಮನ್, ಪೊಲೀಸ್ ಕಂಪ್ಲೆಂಟ್ ಎಲ್ಲ ಬೇಡ ಎಂದು ಮ್ಯಾನೇಜ್ ಮಾಡಿದ್ದಳು. ಆದರೂ ಒಪ್ಪದ ವಂಶಿ ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಶುರು ಮಾಡಿದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಆಗ ಶ್ರುತಿಯೇ ತಮಗೆ ಈ ರೀತಿ ಮಾಡುವಂತೆ ಸುಪಾರಿ ನೀಡಿದ್ದ ವಿಚಾರವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬಳಿಕ ಶ್ರುತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಇಡೀ ನಾಟಕವನ್ನು ವಿವರಿಸಿದ್ದಾಳೆ.
ವಂಶಿ ಮೊಬೈಲ್ ಕಸಿದಿದ್ದ ಆರೋಪಿಗಳು ಲಾಕ್ ತೆರೆಯಲು ಸಾಧ್ಯವಾಗಿಲ್ಲ. ಪಾಸ್‌ವರ್ಡ್ ಕೂಡ ಶ್ರುತಿ ಹೇಳಿದಂತೆ ಸರಿಯಾಗಿರಲಿಲ್ಲ. ಹೀಗಾಗಿ ಮೊಬೈಲ್ ನಾಶ ಮಾಡಲು ಮುಂದಾಗಿ ಕೊನೆಗೆ ಸಿಂಗಸಂದ್ರ ಕೆರೆಯಲ್ಲಿ ಮೊಬೈಲ್ ಎಸೆದು ಎಸ್ಕೇಪ್ ಆಗಿದ್ದರು.
ಎಚ್‌ಎಸ್‌ಆರ್ ಲೇಔಟ್‌ನ ಮನೋಜ್ ಕುಮಾರ್, ಸುರೇಶ್ ಕುಮಾರ್, ಹೊನ್ನಪ್ಪ ಹಾಗೂ ವೆಂಕಟೇಶ್ ಹಾಗೂ ಶ್ರುತಿಯನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಶ್ರುತಿ ಸೇರಿ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಂದು ಮೊಬೈಲ್‌ಗಾಗಿ ಇಷ್ಟು ದೊಡ್ಡ ನಾಟಕವೇ ನಡೆದಿದೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications