Bengaluru: ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಬೆಂಗಳೂರು ಮಾರ್ಚ್ 31: ಒಂದೆಡೆ ರಾಜ್ಯದಲ್ಲಿ ಚುನಾವಣಾ ಕಾವು ರಂಗೇರುತ್ತಿದ್ದರೆ ಮತ್ತೊಂದೆಡೆ ಕಾಮುಕರ ಪೈಶಾಚಿಕ ಕೃತ್ಯ ಬಯಲಾಗಿದೆ. ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಕಾಲಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ ದಾರುಣ ಘಟನೆ ನಡೆದಿದೆ.
ಪಾರ್ಕಿನಲ್ಲಿ ಕುಳಿತಿದ್ದ ಯುವತಿಯನ್ನು ಹೊತ್ತೊಯ್ದ ಕಾಮುಕರು ಕಾರಿನಲ್ಲಿ ಚಲಿಸಿದ್ದಾರೆ. ಬಳಿಕ ಕಾರಿನಲ್ಲೇ ಯುವತಿ ಮೇಲೆರಗಿದ್ದಾರೆ. ಇದೇ ಮಾರ್ಚ್ 25ರಂದು ರಾತ್ರಿ 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪಾರ್ಕ್‌ನಲ್ಲಿ ಯುವತಿ ತನ್ನ ಸ್ನೇಹಿತನೊಂದಿಗೆ ಇದ್ದಳು ಎಂದು ತಿಳಿದು ಬಂದಿದೆ. ಈ ವೇಳೆ ಸುಖಾ ಸುಮ್ಮನೆ ಗಲಾಟೆ ಮಾಡಿಕೊಂಡ ಕಾಮುಕರು ಯುವತಿಯ ಸ್ನೇಹಿತನನ್ನು ಬೆದರಿಸಿದ್ದಾರೆ. ಸ್ನೇಹಿತ ಮುಂದೆಯೇ ಯುವತಿಯನ್ನು ಎಳೆದೊಯ್ದಿದ್ದಾರೆ. ನಂತರ ಕಾರಿನಲ್ಲಿ ಆನೇಕಲ್ ನೈಸ್ ರಸ್ತೆ, ಇಂದಿರಾ ನಗರ ಸೇರಿದಂತೆ ಹಲವೆಡೆ ಸುತ್ತಾಟ ನಡೆಸಿ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಯುವತಿಯನ್ನು ಮಾರ್ಚ್ 26ರ ಬೆಳಿಗ್ಗೆ 4 ಗಂಟೆಗೆ ಮನೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಯುವತಿಯ ಸ್ಥಿತಿ ಕಂಡು ಗಾಬರಿಗೊಂಡ ಕುಟುಂಬಸ್ಥರು ಪೊಲೀಸರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.












Click it and Unblock the Notifications