ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರ್ಭಯಾಳ ಬರ್ಬರ ಅತ್ಯಾಚಾರಕ್ಕೆ ಒಂದು ವರ್ಷ!

By Prasad
|
Google Oneindia Kannada News

ಬೆಂಗಳೂರು, ಡಿ. 16 : ತಮ್ಮಲ್ಲಿರುವ ಮನುಷ್ಯತ್ವವನ್ನೇ ಮರೆತು ಮೃಗಗಳಿಗಿಂತಲೂ ಹೇಯವಾಗಿ 23 ವರ್ಷದ 'ನಿರ್ಭಯಾ'ಳ ಮೇಲೆ ಮಾರಣಾಂತಿಕ ಲೈಂಗಿಕ ದೌರ್ಜನ್ಯವೆಸಗಿ ಡಿಸೆಂಬರ್ 16ಕ್ಕೆ ಸರಿಯಾಗಿ ಒಂದು ವರ್ಷ. ಈ ಒಂದು ವರ್ಷದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದಲ್ಲಿ ಏನಾದರೂ ಬದಲಾವಣೆ ಆಗಿದೆಯಾ? ಇದಕ್ಕೆ ಇಡೀ ಭಾರತ ಒಕ್ಕೊರಲ ದನಿಯಿಂದ 'ಇಲ್ಲ' ಎಂದು ಕೂಗುತ್ತದೆ. ನಿರ್ಭಯಾ ಸಮಾಧಿಯಲ್ಲಿಯೇ ಮಗ್ಗಲು ಬದಲಿಸಿ ಕನಲಿರುತ್ತಾಳೆ.

ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಆರು ಜನ ದುರುಳರು 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ, ಆಕೆಯ ಹೊಟ್ಟೆ ಮತ್ತು ಮರ್ಮಾಂಗವನ್ನು ಬಗೆದುಹಾಕಿದ್ದರು. ನಂತರ ಆಕೆ ಮತ್ತು ಆಕೆಯ ಜೊತೆಗಿದ್ದ ಸ್ನೇಹಿತನನ್ನು ಚಲಿಸುತ್ತಿದ್ದ ಬಸ್ಸಿನಿಂದಲೇ ಬೆತ್ತಲು ಸ್ಥಿತಿಯಲ್ಲಿ ಬಿಸಾಕಿದ್ದರು. ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ದೇಶದ ಯುವಜನತೆಯೇ ಸಿಡಿದುನಿಂತಿತ್ತು. [ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ]

ಅರೆ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದ ನಿರ್ಭಯಾಳ ಸ್ಥಿತಿ ನೋಡಿ ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಬಳಗವೇ ಬೆಚ್ಚಿಬಿದ್ದಿತ್ತು. ಇಂಥ ಅಮಾನುಷ ಅತ್ಯಾಚಾರ ಜೀವಮಾನದಲ್ಲಿ ಕಂಡಿಲ್ಲ ಎಂದು ವೈದ್ಯರು ಮಮ್ಮಲಮರುಗಿದ್ದರು. ಇಡೀ ದೇಶದಾದ್ಯಂತ ಜನರು ರೊಚ್ಚಿಗೆದ್ದಿದ್ದರು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯೇ ವಿಧಿಸಬೇಕೆಂದು ಕೂಗು ಎಬ್ಬಿಸಿದ್ದರು. ಬದುಕೇ ಬದುಕುತ್ತೇನೆ ಎಂದಿದ್ದ ನಿರ್ಭಯಾ ಹದಿನೈದು ದಿನಗಳ ಹೋರಾಟ ನಡೆಸಿ ಕೊನೆಗೆ ಡಿಸೆಂಬರ್ 30ರಂದು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ಆಗಸ್ಟ್ 31ರಂದು ಓರ್ವ ಅಪ್ರಾಪ್ತ ವಯಸ್ಕ ಆರೋಪಿಗೆ ತ್ವರಿತಗತಿಯ ಸಾಕೇತ್ ನ್ಯಾಯಾಲಯ 3 ವರ್ಷ ಸಜೆ, ಉಳಿದ ನಾಲ್ಕು ಆರೋಪಿಗಳಿಗೆ ಸೆಪ್ಟೆಂಬರ್ 13ರಂದು ಗಲ್ಲು ಶಿಕ್ಷೆ ವಿಧಿಸಿತ್ತು. ಒಬ್ಬ ಆರೋಪಿ ಜೈಲಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇಡೀ ದೇಶದಾದ್ಯಂತ ಭಾರೀ ಸಂಚಲನವೆಬ್ಬಿಸಿದ್ದ ಈ ಪ್ರಕರಣದಿಂದಾಗಿ ಕೇಂದ್ರ ಸರಕಾರ ಮಹಿಳೆಯರ ರಕ್ಷಣೆಗೆ ಒಂದು ಸಾವಿರ ಕೋಟಿ ರು. ಹಣವನ್ನು ನಿಗದಿಪಡಿಸಿದ್ದು ಬಿಟ್ಟರೆ ಮತ್ತಾವ ಸಾಧನೆಯೂ ಆಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ಫಂಡ್ ಇನ್ನೂ ಸರಿಯಾಗಿ ಬಳಕೆಯಾಗಿಲ್ಲ. [ನ್ಯಾ ಯೋಗೇಶ್ ಹೇಳಿದ್ದೇನು?]

ಈ ಸಂದರ್ಭದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಯುವತಿಯ ತಂದೆ, ಈ ಒಂದು ವರ್ಷದಲ್ಲಿ ಸಮಾಜದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮಹಿಳೆಯ ವಿರುದ್ಧ ಹೆಚ್ಚಾಗುತ್ತಿರುವ ಅಪರಾಧಗಳೇ ಇದಕ್ಕೆ ಸಾಕ್ಷಿ ಎಂದು ಕೆಂಡ ಕಾರಿದ್ದಾರೆ. ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಮುಂಬೈನಲ್ಲಿ ಪತ್ರಕರ್ತೆಯ ಮೇಲೆ ಐವರು ಎಸಗಿದ ಬರ್ಬರ ದೌರ್ಜನ್ಯಗಳೇ ನಮ್ಮ ದಟ್ಟದರಿದ್ರ ವ್ಯವಸ್ಥೆಗೆ ಕನ್ನಡಿ ಹಿಡಿದಿವೆ. ಇದೇ ರೀತಿ ಟ್ವಿಟ್ಟಿಗರು ಇಡೀ ವ್ಯವಸ್ಥೆಯ ಮೇಲೆ ಹರಿಹಾಯುತ್ತಿದ್ದಾರೆ. [ಚಲಿಸುತ್ತಿರುವ ವಾಹನದಲ್ಲಿ ನಡೆದ ಅತ್ಯಾಚಾರಗಳು]

ಬಾಲಿವುಡ್ ನಟಿ ಪೂನಂ ಪಾಂಡೆ

ನಿರ್ಭಯಾ ಮೇಲೆ ಅತ್ಯಾಚಾರ ಸಂಭವಿಸಿ ಒಂದು ವರ್ಷ ಕಳೆದು ಹೋಗಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ. ನಿರ್ಭಯಾಳಿಗೆ ಸೆಲ್ಯೂಟ್.

ಆಕೆಯನ್ನು ನಿಜವಾದ ಹೆಸರಿಂದ ಯಾಕೆ ಕರೆಯಬಾರದು?

ಡಿಸೆಂಬರ್ 16ರಂದು ಅತ್ಯಾಚಾರಕ್ಕೊಳಗಾದ ಯುವತಿಯ ಹೆಸರು ಜ್ಯೋತಿ ಎಂದು ಎಲ್ಲರಿಗೂ ಗೊತ್ತು. ಈಗಲೂ ಏಕೆ ಆಕೆಯನ್ನು ನಿರ್ಭಯಾ ಎಂದು ಕರೆಯಬೇಕು? ಈಗಲಾದರೂ ತನ್ನ ಹೆಸರಿನಿಂದಲೇ ಕರೆಯಿಸಿಕೊಳ್ಳಲು ಆಕೆಗೆ ಹಕ್ಕು ಇಲ್ಲವೆ?

ಏನೇನೋ ಕರೆದು ಆಕೆಯನ್ನು ಅವಮಾನಿಸಬೇಡಿ

ಆ ಯುವತಿಯನ್ನು ಜ್ಯೋತಿ ಸಿಂಗ್ ಪಾಂಡೆ ಎಂದಲೇ ಕರೆಯಿರಿ. ಮಾಧ್ಯಮಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಇಟ್ಟ ಹೆಸರನ್ನೇ ಈಗಲೂ ಕರೆದು ಆಕೆಯನ್ನು ಅವಮಾನಿಸಬೇಡಿ.

ಬಾಲಿವುಡ್ ನಟಿ ಅದಿತಿ ರಾವ್ ಹೈದರಿ

ಅಂದು ನಡೆದ ಘಟನೆ ಭಾರತದಲ್ಲಿ ಮತ್ತೆಂದೂ ನಡೆಯಬಾರದು. ಆಕೆಯ ಪಾಲಕರಿಗೆ ಇನ್ನಷ್ಟು ಪ್ರೀತಿ ಮತ್ತು ಶಕ್ತಿ ದೊರೆಯಲಿ.

ನೀನ್ಯಾವತ್ತೂ ಹೃದಯದಲ್ಲಿ ನೆಲೆಸಿರುತ್ತೀ

ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನೀನು ಯಾವತ್ತೂ ನನ್ನ ಹೃದಯದಲ್ಲಿ ನೆಲೆಸಿರುತ್ತೀ. ನಿನ್ನ ನೆನಪಲ್ಲಿ ಇವತ್ತು ಒಂದು ಕ್ಯಾಂಡಲ್ ಬೆಳಗುತ್ತೇನೆ - ಮಲ್ಲಿಕಾ ಶೇರಾವತ್.

ಸ್ವಾಮಿ ಬ್ರಹ್ಮಚಿತ್ ಹೇಳುವ ಮಾತಿದು

ಬಲವಾದ ಅತ್ಯಾಚಾರ ವಿರೋಧಿ ಕಾನೂನು ರಚಿಸಿ, ಜಾರಿಗೆ ತಂದು ಅತ್ಯಾಚಾರ ತಡೆಯುವುದೇ ಆಗಿದ್ದರೆ ಅಮೆರಿಕಾದಲ್ಲಿ ಪ್ರತಿವರ್ಷ ಎರಡೂವರೆ ಲಕ್ಷ ಅತ್ಯಾಚಾರಗಳು ಆಗುತ್ತಿರಲಿಲ್ಲ!

ರವಿಶಂಕರ್ ಗುರೂಜಿ ಟ್ವೀಟ್

ಸಮಾಜದಲ್ಲಿ ಮಹಿಳೆಯರಿಗೆ ನೀಡುವ ಸ್ಥಾನಮಾನವೇ ಸಮಾಜ ಬಲಿಷ್ಠವಾಗಿದೆಯೆ, ಸೌಹಾರ್ದಯುತವಾಗಿದೆ ಎಂದು ತಿಳಿಸುತ್ತದೆ. ಇಲ್ಲದಿದ್ದರೆ...

English summary
Exactly a year after the brutal rape of Nirbhaya, 23-year-old paramedical student, we can see the same situation in India, as far as security of women is concerned. Though 4 culprits were sentenced to death, crime against women continue unabated. Tweeples vent ire on the society and govt for it's inaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X