ಬೆಂಗಳೂರಿನ ಮಳೆನೀರಲ್ಲಿ ಮೀನಿಗೆ ಬಲೆ ಬೀಸಿದ ಜನ, ವಿಡಿಯೋ ವೈರಲ್
ಧಾರಾಕಾರ ಮಳೆಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೊಡ್ಡ ಅವಾಂತರಗಳೇ ನಡೆದು ಹೋಗಿವೆ. ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿರುವುದು ವರದಿಯಾಗಿದೆ. ಹಲವು ನಿವಾಸಗಳಿಗೆ ಮಳೆ ನೀರು ನುಗ್ಗಿ, ಅಕ್ಷರಶಃ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಹಲವು ಅಪರೂಪದ ಪ್ರಸಂಗಗಳು ಕೂಡ ನಡೆದಿವೆ. ಎಲ್ಲರೂ ಮಳೆ ಬಂತಲ್ಲಪ್ಪಾ ಎಂದು ತಲೆಮೇಲೆ ಕೈಇಟ್ಟುಕೊಂಡು ಕುಳಿತಿದ್ರೆ, ಕೆಲವರು ಮಳೆನೀರಿನಲ್ಲಿ ಮೀನಿಗೆ ಬಲೆ ಬೀಸಿದ್ದಾರೆ.

ಹೌದು ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆಗಳ ಮೇಲೆಯೇ ನೀರು ರಭಸವಾಗಿ ಹರಿದಿದೆ. ಈ ವೇಳೆ ಕೆಲ ಯುವಕರು ರಸ್ತೆಯಲ್ಲಿ ಮೀನಿಗೆ ಬಲೆ ಬೀಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
In #Bengaluru:
— sustainme.in®️ (@sustainme_in) October 21, 2024
Rain effect: A few residents decide to catch fish on the streets on #RRNagar.#Bengaluru #BengaluruRains #Bangalore #BangaloreRain pic.twitter.com/aspjFBNbvh
ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಂಗಳೂರಿನ ರಸ್ತೆಗಳೆಲ್ಲ ಕೆರೆಗಳಂತೆ ನೀರು ತುಂಬಿಕೊಂಡಿದ್ದು, ಈ ವೇಳೆ ಮೀನುಗಳು ಸಹ ಕಂಡುಬಂದಿದೆ ಎನ್ನಲಾಗಿದೆ. ಮೊದಲಾದರೆ ಮೀನು ಹಿಡಿಯಲು ಕೆರೆಗೆ ಹೋಗಬೇಕಿತ್ತು. ಈಗ ಮಳೆಯೇ ಕೆರಯನ್ನು ಮನೆಬಾಗಿಲಿಗೆ ಕರೆತಂದಿದೆ. ಜೊತೆಗೆ ಮೀನುಗಳನ್ನೂ ರಸ್ತೆಗೆ ತಂದಿದೆ ಎಂದು ಖುಷ್ ಆಗಿ ಬಲೆ ಬೀಸಿದ್ದಾರೆ.
ಇನ್ನು ಈ ಬಾರಿಯ ಮಳೆಯು ಬೆಂಗಳೂರಿನಲ್ಲೇ ಅಲುಗಾಡಿಸಿದ್ದರೆ, ಈ ತಣ್ಣನೆಯ ವೆದರ್‌ನಲ್ಲಿ ಮೀನು ಹಿಡಿದು, ಬಾಯಿ ರುಚಿ ಮಾಡೋಣ ಎಂದು ಜನ ಫಿಶಿಂಗ್‌ಗೂ ಇಳಿದಿರುವುದು ಗಮನ ಸೆಳೆದಿದೆ. ಈ ವಿಡಿಯೋ ಅನ್ನು ಹಲವರು ಹಂಚಿಕೊಂಡಿದ್ದು, ಒಂದು ಕೆ.ಜಿ. ಎಷ್ಟ್ರಪ್ಪಾ ಮೀನು? ಎಂದು ಹಾಸ್ಯವಾಗಿ ಕಾಮೆಂಟ್ ಮಾಡಿದ್ದಾರೆ.
ಅಂಗಡಿಗಳಲ್ಲಿ ಸಿಗೋ ಮೀನು ಫ್ರೆಶ್ ಇರೋದಿಲ್ಲ. ಹೇಗಿದ್ರೂ ಒಳ್ಳೆ ಮೀನನ್ನೇ ಹಿಡೀತಿದೀರ. ಎಲ್ಲಿಗೆ ಬರಬೇಕು ಅಂತ ಅಡ್ರೆಸ್ ಕೊಡಿ...ಗಾಡೀಲಂತೂ ಬರೋಕಾಗಲ್ಲ, ಬೋಟ್ ಏನಾದ್ರೂ ತಗೊಂಡ್ ಬಂದು ಮೀನು ಖರೀದಿ ಮಾಡ್ತೀವಿ ಎಂದೆಲ್ಲ ಕೇಳಿಕೊಂಡಿದ್ದಾರೆ.
ಇನ್ನೂ ಕೆಲವರು ಆರ್.ಆರ್.ನಗರ್ ಫ್ರೆಶ್ ಫಿಶ್...ಯಾರಿಗೆ ಬೇಕು? ಇದು ಅಂತಿತಾ ಮೀನಲ್ಲ. ಮಳೆನೀರಿನ ಮೀನು, ಬೆಂಗ್ಳೂರ್ ಮೀನು, ರಸ್ತೆಗಳಿಗೆ ಬರುವ ಮೀನು ಎಂದೆಲ್ಲ ಹಾಸ್ಯವಾಗಿ ಜಾಹೀರಾತು ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಬೆಂಗಳೂರು ನಗರ ಜಿಲ್ಲೆಯಾದ್ಯಂತ ಮಳೆ ಹೆಚ್ಚಾದ ಕಾರಣ ಇಂದು ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಮಳೆಯಿಂದ ಯಾವುದೇ ಅನಾಹುತಗಳು ಸಂಭವಿಸಬಾರದು ಎನ್ನುವ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಆದೇಶಿಸಿದರು.
ಕೇವಲ ಅಂಗನವಾಡಿ, ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಯಿತು. ಇನ್ನು ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ ಹಾಗೂ ಐಟಿಐ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಮಳೆ ಕಾರಣಕ್ಕೆ ಈಗ ನೀಡಿರುವ ರಜೆ ಬದಲಿಗೆ ಈ ಶನಿವಾರ ಅಥವಾ ಭಾನುವಾರದಂದು ಹೆಚ್ಚುವರಿ ತರಗತಿಗಳನ್ನು ನಡೆಸುವಂತೆಯೂ ಸಲಹೆ ನೀಡಲಾಗಿದೆ. ಮಳೆ ಹೆಚ್ಚಾದ ಹಲವು ಖಾಸಗಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನೀಡಿದೆ.












Click it and Unblock the Notifications