ಟ್ವಿಟರ್‌ನಲ್ಲಿ ಡಿ.ರೂಪಾರ ಸಹಾಯ ಯಾಚಿಸಿದ ಅತ್ಯಾಚಾರ ಸಂತ್ರಸ್ತೆ

Recommended Video

      ರೂಪ ಡಿ ಮೌದ್ಗೀಲ್ ಬಳಿ ಟ್ವಿಟ್ಟರ್ ನಲ್ಲಿ ಸಹಾಯ ಅತ್ಯಾಚಾರ ಸಂತ್ರಸ್ತೆ | Oneindia Kannada

      ಬೆಂಗಳೂರು, ಫೆಬ್ರವರಿ 07: ಐಪಿಎಸ್ ಅಧಿಕಾರಿ ಡಿ.ರೂಪ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರು. ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಜೊತೆಗೆ, ಇಲಾಖೆ ಕಡೆಯಿಂದ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶಗಳು, ಇಲಾಖೆ ಮಾಹಿತಿಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ.

      ಸಾರ್ವಜನಿಕರೊಂದಿಗೆ ಸಂವಹನಕ್ಕೂ ಸಾಮಾಜಿಕ ಜಾಲತಾಣವನ್ನು ರೂಪಾ ಅವರು ವೇದಿಕೆಯಾಗಿ ಬಳಸುತ್ತಿದ್ದಾರೆ. ಇಂದೂ ಸಹ ಡಿ.ರೂಪ ಅವರು ಸೈಬರ್ ಜಾಗೃತಿ ಮೂಡಿಸುವ ಟ್ವೀಟ್‌ ಒಂದನ್ನು ಮಾಡಿದ್ದಾರೆ. ಯಾವುದೊ ಪ್ರಮುಖ ಸುದ್ದಿ ಸಂಸ್ಥೆಯ ಲಿಂಕ್ ನಂತೆ ಕಾಣುವ ಫೇಕ್ ಲಿಂಕ್‌ಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ ಈ ಬಗ್ಗೆ ಜಾಗೃತೆ ವಹಿಸಿ ಎಂದು ರೂಪಾ ಟ್ವೀಟ್‌ ಮಾಡಿದ್ದಾರೆ.

      ಆದರೆ ಪ್ರಮುಖ ವಿಷಯ ಇನ್ನೊಂದಿದೆ. ರೂಪಾ ಅವರ ಟ್ವೀಟ್‌ಗೆ ಡೆಬ್ಲಿನಾ ಎಂಬ ಹೆಸರಿನ ಮಹಿಳೆ ಚಿತ್ರ ಹೊಂದಿರುವ ಖಾತೆಯಿಂದ ಪ್ರಕ್ರಿಯೆ ಬಂದಿದ್ದು ಆಕೆಯು ತಾನು ಕಷ್ಟದಲ್ಲಿದ್ದು ಸಹಾಯ ಮಾಡಿರೆಂದು ಕೋರಿದ್ದಾಳೆ. ಇದಕ್ಕೆ ಮರುಪ್ರತಿಕ್ರಿಯೆ ನೀಡಿರುವ ರೂಪಾ ಅವರು ಯಾವ ರೀತಿಯ ಸಹಾಯ ಎಂದು ಕೇಳಿದ್ದಾರೆ. ಆಗ ಆ ಮಹಿಳೆ ತಾನು ಅತ್ಯಾಚಾರ ಸಂತ್ರಸ್ಥೆ ಆಗಿದ್ದು, ಹೆಣ್ಣು ಮಗು ಎಂಬ ಕಾರಣಕ್ಕೆ ಒತ್ತಾಯದ ಗರ್ಭಪಾತ ಸಹ ಮಾಡಿಸಲಾಗಿದೆ ನನಗೆ ನ್ಯಾಯ ಕೊಡಿಸಿ ಎಂದು ಗೋಗರೆದಿದ್ದಾರೆ.

      ಡೆಬ್ಲಿನಾ ಖಾತೆಯಿಂದ ಈ ಹಿಂದೆ ಕಿರಣ್ ಬೇಡಿ ಅವರಿಗೂ ಇಂತಹದೇ ದೂರು ಹೋಗಿದೆ, ಕಣ್ಣು ಮತ್ತು ಕೈ ಬೆರಳಿಗೆ ಗಾಯಗಳಾಗಿರುವ ಚಿತ್ರ ಹಾಗೂ ದೂರು ಪ್ರತಿಯೊಂದನ್ನು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿ ಕಿರಣ್ ಬೇಡಿ ಅವರಿಗೆ ಡೆಬ್ಲಿನಾ ಟ್ಯಾಗ್ ಮಾಡಿದ್ದಾರೆ.

      ದೂರು ಪ್ರತಿಯಲ್ಲಿ ವರದಕ್ಷಿಣೆ ತಡೆ ಕಾಯ್ದೆಯನ್ವಯ ಕೇಸು ದಾಖಲಿಸಿರುವುದಾಗಿ ನಮೂದಿಸಲಾಗಿದೆ. ಬೆಂಗಳೂರಿನ ಮಡಿವಾಳ, ಬಿಟಿಎಂ ಎರಡನೇ ಹಂತದಲ್ಲಿ ಘಟನೆ ನಡೆದಿರುವುದಾಗಿ ನಮೂದಿಸಲಾಗಿದೆ. ದೂರು ದಾಖಲಿಸಿರುವ ದಿನಾಂಕ 01/02/2018.

      ಸಾಮಾಜಿಕ ಜಾಲತಾಣಗಳಲ್ಲಿ ಬರುವ ದೂರುಗಳನ್ನೂ ಗಂಭೀರವಾಗಿ ಪರಿಗಣಿಸುವ ಡಿ.ರೂಪಾ ಅವರು ಡೆಬ್ಲಿನಾ ಅವರ ದೂರಿಗೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೊ ಕಾದು ನೋಡಬೇಕು. ಸಂತ್ರಸ್ತೆಗೆ ನ್ಯಾಯ ಸಿಗಲೇ ಎಂಬುದೆ ಎಲ್ಲರ ಹಾರೈಕೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+