BMTC: ಆಧಾರ್‌ ಕಾರ್ಡ್‌ ಇದ್ದರೂ ವಿದ್ಯಾರ್ಥಿನಿಯನ್ನು ಬಸ್‌ನಿಂದ ಕೆಳಗಿಸಿಳಿದ ಬಿಎಂಟಿಸಿ ಕಂಡಕ್ಟರ್-ಕಾರಣ ಬೇರೆನೇ ಇದೆ

BMTC: ಶಕ್ತಿ ಯೋಜನೆಯಡಿ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಸಾರಿಗೆ (KSRTC, NWKSRTC, KKRTC BMTC) ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೂ ಇದೀಗ ಬೆಂಗಳೂರಿನ ಜೀವನಾಡಿ ಸಾರಿಗೆಯಾದ ಬಿಎಂಟಿಸಿ ಬಸ್‌ನಿಂದ ವಿದ್ಯಾರ್ಥಿನಿಯೊಬ್ಬರನ್ನು ಕಂಡಕ್ಟರ್‌ ಕೆಳಗಿಸಿದ ಘಟನೆ ನಡೆದಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇನ್ನೂ ಈ ಯೋಜನೆ ಆರಂಭ ಆದ್ದರಿಂದ ಉಪಯೋಗಗಳು ಆಗಿವೆ, ಸೀಟ್‌ಗಾಗಿ ಅಷ್ಟೇ ಗಲಾಟೆಗಳು ಕೂಡ ಆಗುತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ನಿಯಮದ ಪ್ರಕರಾ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬೇಕೆಂದರೆ ಕರ್ನಾಕದ ಆಧಾರ್‌ ಕಾರ್ಡ್‌ ತೋರಿಸಬೇಕಾಗುತ್ತದೆ. ಇಲ್ಲದಿದ್ದರೆ, ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ.

A Girl student showed Tamil language Aadhaar card to BMTC conductor

ಬೆಂಗಳೂರು ವಿಳಾಸ ಇರುವ ಆಧಾರ್ ಕಾರ್ಡ್ ತಮಿಳಿನಲ್ಲಿದೆ ಎನ್ನುವ ಕಾರಣಕ್ಕೆ ಬಿಎಂಟಿಸಿ ಕಂಡಕ್ಟರ್ ತನ್ನನ್ನು ಬಸ್‌ನಿಂದ ಇಳಿಸುವಂತೆ ಒತ್ತಾಯಿಸಿದ್ದಾರೆ ಎಂದು 20 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬರು ಆರೋಪ ಮಾಡಿದ ಘಟನೆ ನಡೆದಿದೆ. ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಮೂರನೇ ವರ್ಷದ ಬಿಕಾಂ ವಿದ್ಯಾರ್ಥಿನಿ ಶಿವಾಜಿನಗರದಿಂದ ಲಿಂಗರಾಜಪುರದ ಮನೆಗೆ ತೆರಳಲು ಬಿಎಂಟಿಸಿ ಬಸ್ ಹತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಆದರೆ, ಪ್ರಯಾಣದ ಕೆಲವೇ ಸಮಯದಲ್ಲಿ, ಶಕ್ತಿ ಯೋಜನೆಯಡಿ ಉಚಿತ ಟಿಕೆಟ್‌ಗಾಗಿ ಆಕೆಯ ಆಧಾರ್ ಕಾರ್ಡ್ ಅನ್ನು ತೋರಿಸಿದಾಗ, ಕಂಡಕ್ಟರ್ ಡಾಕ್ಯುಮೆಂಟ್ ಅಮಾನ್ಯವಾಗಿದೆ. ಯಾಕೆಂದರೆ ಅದು ತಮಿಳು ಭಾಷೆಯಲ್ಲಿದೆ ಮತ್ತು ಕನ್ನಡದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ದಾಖಲೆ ನಕಲಿ ಅಂತಲೂ ಶಂಕೆ ವ್ಯಕ್ತಪಡಿಸಿದ್ದಾರೆ.

ಬಸ್‌ನಲ್ಲಿ ಕಾಣಿಸಿಕೊಂಡ ಹಾವು: ಬಿಎಂಟಿಸಿ ಬಸ್‌ ಹಿಂಬದಿಯ ಗ್ಲಾಸ್‌ನಲ್ಲಿ ನಾಗರ ಹಾವು ಕಾಣಿಸಿಕೊಂಡಿದ್ದರು, ಇದನ್ನು ಕಂಡ ಪ್ರಯಾಣಿಕರು ಹೌಹಾರಿದ್ದಾರೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬಿಎಂಟಿಸಿ ಹಿಂಬದಿ ಗ್ಲಾಸ್‌ನಲ್ಲಿ ಸಿಲುಕಿಕೊಂಡಿದ್ದ ನಾಗರ ಹಾವನ್ನು ಬಸ್‌ನ ಹಿಂಬದಿ ಬರುತ್ತಿದ್ದ ಕ್ಯಾಂಟರ್ ಚಾಲಕ ನೋಡಿಕೊಂಡಿದ್ದಾನೆ. ಬಳಿಕ ಪ್ರಯಾಣಿಕರು ನೋಡಿ ಭಯಗೊಂಡಿದ್ದಾರೆ. ಡಿಪೋ‌ 29 ಕೆ.ಆರ್ ಪುರಂ ಮಾರ್ಗದ ಎಲೆಕ್ಟ್ರಿಕಲ್ ಬಸ್‌ನಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಇನ್ನು ಚಾಲಕ ಈ ವಿಷಯ ತಿಳಿಯುತ್ತುದ್ದಂತೆ ಬಸ್ ನಿಲ್ಲಿಸಿದ್ದು, ಬಳಿಕ ಗಾಬರಿಗೊಂಡ ಪ್ರಯಾಣಿಕರು ಬಸ್‌ನಿಂದ ಕೆಲಗಡೆ ಇಳಿದಿದ್ದಾರೆ. ನಂತರ ಸಿಲುಕಿದ್ದ ನಾಗರಾಜನನ್ನು ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕೆ.ಆರ್ ಮಾರ್ಕೆಟ್‌ನಿಂದ ಕೆ.ಆರ್ ಪುರಂಗೆ ಸುಮಾರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸ್‌ ಬಂದಿದ್ದು, ಆಗ ಮತ್ತೆ ಡಿಪೋದಲ್ಲಿ ಬಸ್ ಪರಿಶೀಲಿಸಲಾಗಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+