ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಭರ್ಜರಿ ಗಿಫ್ಟ್‌

ಬೆಂಗಳೂರು, ಜನವರಿ 23: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಸರ್ಕಾರ ಭರ್ಜರಿ ಗಿಫ್ಟ್‌ ನೀಡುತ್ತಿದೆ.

Recommended Video

      ಮೌನಕ್ಕೆ ಶರಣಾದ ಅತ್ಯಾಚಾರಿಗಳು | Nirbhaya | Case | Convict | Oneindia Kannada

      ಮನೆ ಕಟ್ಟಿಕೊಂಡಿರುವ ಬಡವರ ಹೆಸರಿಗೆ ಸೈಟು ನೋಂದಣಿ ಮಾಡಿಕೊಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.

      20/30, 30/40 ಅಳತೆಯಲ್ಲಿ ಕಟ್ಟಿರುವ ಮನೆಗಳ ಮಾಲೀಕರಿಗೆ ಹಕ್ಕುಪತ್ರ ನೀಡಲಾಗುತ್ತದೆ. ಸುಮಾರು 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ.

      A Gift For Those Who Have Built A House On A Government Farm

      ಆ ಮನೆಗಳಿಗೆ 10 ವರ್ಷದಿಂದ 30 ವರ್ಷದ ಅವಧಿ ಆಗಿರಬೇಕು. ಎಸ್ ಸಿ, ಎಸ್ ಟಿ 5 ಸಾವಿರ ರೂಪಾಯಿ ಹಣ ಕಟ್ಟಬೇಕು, ಸಾಮಾನ್ಯ ವರ್ಗದವರಿಗೆ 10 ಸಾವಿರ ಹಣ ಕಟ್ಟಬೇಕು .ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 28ರಂದು ಸಿಎಂ ಯಡಿಯೂರಪ್ಪ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

      ಮೊದಲ ಹಂತದಲ್ಲಿ 10 ಸಾವಿರ ಜನರಿಗೆ ಅನುಕೂಲ,ರಾಜ್ಯದ ಎಲ್ಲ ಕಡೆಗಳಲ್ಲೂ ವಿಸ್ತರಣೆಯಾಗಲಿದೆ.ರಾಜ್ಯದಲ್ಲಿ ಸಕ್ರಮಕ್ಕೆ2.53 ಲಕ್ಷ ಅರ್ಜಿ ಬಂದಿವೆ ,60061 ಅರ್ಜಿಗಳಿಗೆ ಮಂಜೂರಾತಿ ಸಿಕ್ಕಿದೆ,ತಿರಸ್ಕೃತ ಪ್ರಕರಣಗಳು 1,47,465 ಅರ್ಜಗಳು ತಿರಸ್ಕೃತವಾಗಿವೆ.

      45,546 ಅರ್ಜಿಗಳನ್ನು ಇನ್ನೂ ಬಾಕಿ ಇವೆ, 20×30 ಅಳತೆಯ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗಕ್ಕೆ 2500 ಸಾವಿರ ,ಸಾಮಾನ್ಯ ವರ್ಗಕ್ಕೆ 5 ಸಾವಿರ ,30/40ಅಳತೆಯ ಮನೆಗಳಿಗೆ ಹಕ್ಕುಪತ್ರ ಪಡೆಯಲು , ಎಸ್ ಸಿ, ಎಸ್ ಟಿ ವರ್ಗಕ್ಕೆ 5000 , ಸಾಮಾನ್ಯ ವರ್ಗಕ್ಕೆ 10000 ನೀಡಬೇಕು.

      ಕ್ರಮ ಸಕ್ರಮಕ್ಕೆ 2,53,000 ಅರ್ಜಿಗಳು ಬಂದಿದ್ದವು.ಅದರಲ್ಲಿ 60,0061ಅರ್ಜಿಗಳಿಗೆ ಮಂಜೂರಾತಿ ದೊರಕಿದೆ.1,47,456 ಅರ್ಜಿಗಳನ್ನು ತಿರಸ್ಜರಿಸಲಾಗಿದೆ ಹಾಗೂ 45,456 ಅರ್ಜಿಗಳು ಬಾಕಿ ಇವೆ.

      ಎ.ಟಿ.ರಾಮಸ್ವಾಮಿ ವರದಿ ಅನ್ವಯ ಬೆಂಗಳೂರು ನಗರದಲ್ಲಿ ಆಗಿರುವ ಸರ್ಕಾರಿ ಜಮೀನು‌ ಒತ್ತುವರಿ ತೆರವಿಗೆ ಸರ್ಕಾರ ಮುಂದಾಗಿದೆ.ಅದಕ್ಕಾಗಿಯೇ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+