ಕೋವಿಡ್; ಬೆಂಗಳೂರಲ್ಲಿ ಸಾವು, ಸಕ್ರಿಯ ಪ್ರಕರಣದಲ್ಲಿ ಇಳಿಕೆ
ಬೆಂಗಳೂರು, ನವೆಂಬರ್ 06: ಬೆಂಗಳೂರು ನಗರದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ. ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಇಳಿಮುಖವಾಗುತ್ತಿದೆ.
ಗುರುವಾರ ಬೆಂಗಳೂರು ನಗರದಲ್ಲಿ 1627 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 9. ನಗರದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 3,45,134ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16,716.
ಅಕ್ಟೋಬರ್ 9ರಂದು 57 ಜನರು, ಅಕ್ಟೋಬರ್ 17ರಂದು 14 ಮಂದಿ ಕೋವಿಡ್ ಸೋಂಕಿತರು ನಗರದಲ್ಲಿ ಮೃತಪಟ್ಟಿದ್ದರು. ನವೆಂಬರ್ 5ರಂದು ಕೇವಲ 9 ಜನರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ.

ಸೆಪ್ಟೆಂಬರ್ 28ರಂದು ನಗರದಲ್ಲಿ 9 ಜನರು ಕೋವಿಡ್‌ನಿಂದ ಮೃತಪಟ್ಟಿದ್ದರು. ಆದರೆ, ಸೆಪ್ಟೆಂಬರ್ 29ರಂದು 67 ಜನರು ಮೃತಪಟ್ಟಿದ್ದರು. ಇದುವರೆಗೂ ಬೆಂಗಳೂರು ನಗರದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 3,926.
ಕೋವಿಡ್ ಕೇರ್ ಸೆಂಟರ್; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ನಿರ್ಮಾಣ ಮಾಡಿದ ಕೋವಿಡ್ ಕೇರ್ ಸೆಂಟರ್‌ಗಳ ಸಂಖ್ಯೆ 4ಕ್ಕೆ ಇಳಿಕೆಯಾಗಿದೆ. ನಗರದಲ್ಲಿನ ಜನರು ಹೋ ಐಸೋಲೇಷನ್‌ನಲ್ಲಿಯೇ ಚಿಕಿತ್ಸೆ ಪಡೆಯಲು ಬಯಸುತ್ತಿದ್ದಾರೆ.
ಹಜ್ ಭವನ, ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಎಚ್‌ಎಎಲ್‌ನಲ್ಲಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ 247 ಸೋಂಕಿತರು ಇದ್ದಾರೆ. 581 ಹಾಸಿಗೆಗಳು ಇನ್ನೂ ಖಾಲಿ ಇವೆ.












Click it and Unblock the Notifications