ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ವಿಧಾನಸಭಾ ಚುನಾವಣೆ: 88 ಲಕ್ಷ ನೋಂದಾಯಿತ ಮತದಾರರು

|
Google Oneindia Kannada News

ಬೆಂಗಳೂರು, ಮಾರ್ಚ್1 : ಮುಂಬರುವ ವಿಧಾನ ಸಭಾ ಚುನಾವಣೆಗಯಲ್ಲಿ ಬೆಂಗಳೂರಿನ ಸುಮಾರು 88 ಲಕ್ಷ ಮತದಾರರು 28 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಬುಧವಾರ ಮತದಾರರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಈವರೆಗೆ 87,98,335 ಲಕ್ಷ ನೋಂದಾಯಿತ ಮತದಾರರಿದ್ದಾರೆ. ವಿಕಲಚೇತನ ನೋಂದಾಯಿತ ಮತದಾರರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಎಲ್ಲರಿಗೂ ಅನುಕೂಲವಾಗುವಂತೆ ಹಾಗೆಯೇ ಮತದಾನ ಕೊಠಡಿ ಕೆಳಮಹಡಿಯಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ವಿಧಾನ ಸಭಾ ಚುನಾವಣೆ : ರಾಜ್ಯದಲ್ಲಿ 72 ಲಕ್ಷ ಹೊಸ ಮತದಾರರು ವಿಧಾನ ಸಭಾ ಚುನಾವಣೆ : ರಾಜ್ಯದಲ್ಲಿ 72 ಲಕ್ಷ ಹೊಸ ಮತದಾರರು

ಪಾಲಿಕೆಯು ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸುತ್ತಿದ್ದು, ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಲಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಶೇ.1 ರಷ್ಟು ಮತದಾರರ ಭಾವಚಿತ್ರಗಳು ಕಾಣೆಯಾಗಿವೆ.ಅಂತವರನ್ನು ನಾವು ಗುರುತಿಸಲು ಸಾಧ್ಯವಾಗುತ್ತಿಲ್ಲ ಅಂತವರು ಆದಷ್ಟು ಬೇಗ ತಮ್ಮ ಭಾವಚಿತ್ರವನ್ನು ಅಪ್ ಲೋಡ್ ಮಾಡಬೇಕು ಎಂದು ಮಾಹಿತಿ ನೀಡಿದರು.

88 lakh voters will seal the fate of candidates from city

ಮುಂದಿನ 24 ಗಂಟೆಗಳೊಳಗಾಗಿ ಚುನಾವಣಾ ದಿನಾಂಕವನ್ನು ಪ್ರಕಟಿಸಲಾಗುವುದು. ಎಲ್ಲಾ ಪಕ್ಷದ ಬ್ಯಾನರ್, ಫ್ಲೆಕ್ಸ್, ಪೋಸ್ಟರ್ ಗಳನ್ನು ತೆಗೆಯಲಾಗುತ್ತದೆ. ಆದರೂ ಕಂಡುಬಂದಲ್ಲಿ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮತದಾರರ ಪಟ್ಟಿಗೆ ಕಾಂಗ್ರೆಸ್ ಶಾಸಕರಿಂದ ಅಕ್ರಮ ಹೆಸರು ಸೇರ್ಪಡೆ: ಬಿಜೆಪಿಮತದಾರರ ಪಟ್ಟಿಗೆ ಕಾಂಗ್ರೆಸ್ ಶಾಸಕರಿಂದ ಅಕ್ರಮ ಹೆಸರು ಸೇರ್ಪಡೆ: ಬಿಜೆಪಿ

English summary
close, 88 lakh, 87,98,335 to be precise-registered voters will decide the fate of the candidates contesting from 28 assembly constituencies in Bengaluru in the upcoming elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X