75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವ: ಪೊಲೀಸ್ ಇಲಾಖೆಯಲ್ಲಿ ಪೂರ್ವಭಾವಿ ಸಭೆ
ಬೆಂಗಳೂರು: 75 ನೇ ಅಮೃತ ಸ್ವತಂತ್ರಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆ ಕಾರ್ಯಕ್ರಮ ಭದ್ರತೆ ರೂಪುರೇಷ ಕುರಿತಂತೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಸಭೆ ನಡೆಸಿದರು. ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು. ಹೆಚ್ಚುವರಿ ಪೊಲೀಸ್ ಆಯುಕ್ತರುಗಳು, ಡಿಸಿಪಿಗಳು, ಅಗ್ನಿಶಾಮಕದಳ ಅಧಿಕಾರಿಗಳು, ಮೂರು ಸೇನೆಯ ಬೆಂಗಳೂರು ಮುಖ್ಯಸ್ಥರುಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಬೆಂಗಳೂರಿನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಉದ್ದೇಶಿಸಿರುವ ಕಾರಾಣದಿಂದ ಅಮೃತ ಸ್ವಾತಂತ್ರ್ಯೋತ್ಸವದಲ್ಲಿ ಬಂದೋಬಸ್ತ್, ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು. ಇನ್ನೂ ಕೋವಿಡ್‌ನಿಂದ ಕಳೆದ ಎರಡು ವರ್ಷದಿಂದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ವಿಜೃಂಬಣೆಯಿಂದ ನಡೆದಿರಿಲಿಲ್ಲ. ಈ ಹಿನ್ನೆಲೆ ಈ ಬಾರಿ 75ನೇ ಅಮೃತ ಸ್ವತಂತ್ರೋತ್ಸವನ್ನು ಅದ್ಧೂರಿಯಾಗಿ ನೆರೆವೇರಿಸಲು ಸರ್ಕಾರ ಸಜ್ಜಾಗಿದೆ. ಆದ್ದರಿಂದ ಭದ್ರತೆ ಮತ್ತು ಬಂದೋಬಸ್ತ್ ಕುರಿತಂತೆ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿದರು.

ನಗರ ಪೊಲೀಸ್ ಆಯುಕ್ತರಿಂದ ಮಾಣಿಕ್ ಶಾ ಮೈದಾನ ವೀಕ್ಷಣೆ
ನಗರ ಪೊಲೀಸ್ ಆಯುಕ್ತರು ಪ್ರತಾಪ್ ರೆಡ್ಡಿ ಸಹ ಮಾಹಿಕ್ ಶಾ ಪೆರೇಡ್ ಮೈದಾನವನ್ನು ಖುದ್ದು ವೀಕ್ಷಣೆಯನ್ನು ಮಾಡಲಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡರಿಗೆ ಯಾವ ರೀತಿಯಲ್ಲಿ ಬಂದೋಬಸ್ತ್ ಕಾರ್ಯಕ್ರಮವನ್ನು ಕೈಗೊಳ್ಳಬೇಕು ಎಂಬುದನ್ನು ಸಹ ಸೂಚನೆಯನ್ನು ನೀಡಲಿದ್ದಾರೆ.












Click it and Unblock the Notifications