ಬೆಂಗಳೂರು ರಸ್ತೆಯಲ್ಲಿ ಪ್ರಯಾಣಿಕರನ್ನು ಬೆಚ್ಚಿಬೀಳಿಸುತ್ತಿದ್ದ 7 'ದೆವ್ವ'ಗಳ ಬಂಧನ!

ಬೆಂಗಳೂರು, ನವೆಂಬರ್ 13: ದೆವ್ವ, ಭೂತಗಳಂತೆ ವೇಷಧರಿಸಿಕೊಂಡು ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ 7 ಯೂಟ್ಯೂಬರ್ಸ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರದ ಶರೀಫ್ ನಗರದಲ್ಲಿ ಭಾನುವಾರ ಮತ್ತು ಸೋಮವಾರ ರಾತ್ರಿ ಹಾದಿಯಲ್ಲಿ ಬರುವ ಪ್ರಯಾಣಿಕರನ್ನೆಲ್ಲ ಇದ್ದಕ್ಕಿದ್ದಂತೆ ಬಂದು ಈ ಏಳು ಜನ ಹೆದರಿಸುತ್ತಿದ್ದರು.

ಕಳ್ಳತನ ಮಾಡುವುದಕ್ಕಾಗಿ ಪ್ರಯಾಣಿಕರನ್ನು ಹೆದರಿಸುತ್ತಿರಬಹುದು ಎಂಬ ಅನುಮಾನದ ಮೇಲೆ ಪೊಲೀಸರು ಅವರಲ್ಲಿ ಒಬ್ಬನನ್ನು ಬಂಧಿಸಿದ್ದರು. ಆತನ ಬಳಿ ವಶಪಡಿಸಿಕೊಂಡ ಫೋನ್ ನಲ್ಲಿ ಸಾಕಷ್ಟು ವಿಡಿಯೋಗಳು ಪತ್ತೆಯಾಗಿದ್ದು, ಅವುಗಳಲ್ಲಿ ಈ ಏಳು ಜನ ದೆವ್ವ, ಭೂತಗಳಂತೆ ವೇಷ ಧರಿಸಿಕೊಂಡ ವಿಡಿಯೋಗಳೇ ತುಂಬಿದ್ದವು. ಇವುಗಳನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡುವುದಕ್ಕಅಗಿಯೇ ಚಿತ್ರೀಕರಿಸಲಾಗುತ್ತಿತ್ತು.

7 YouTubers arrested for Dressing As Ghosts In Bengaluru

18- 25 ವರ್ಷ ವಯಸ್ಸಿನ ಈ ಏಳು ಜನರನ್ನೂ ಪೊಲೀಸರು ಬಂಧಿಸಿದ್ದಾರೆ. ಇವರಿಂದಾಗಿ ಎರಡು ದಿನ ದ್ವಿಚಕ್ರವಾಹನ, ಆಟೋಗಳಿಗೆ ಈ ಹಾದಿಯಲ್ಲಿ ಬರುವುದಕ್ಕೇ ಭಯವಾಗುವಂಥ ಸನ್ನಿವೇಶ ನಿರ್ಮಾಣವಾಗಿತ್ತು.

"ಅವರು ತಮಾಷೆಗಾಗಿಯೇ ಇದನ್ನು ಮಾಡಿದ್ದರೂ ಮಧ್ಯರಾತ್ರಿ ರಸ್ತೆಯಲ್ಲಿ ವೇಗವಾಗಿ ಬರುವ ಪ್ರಯಾಣಿಕರನ್ನು ಹೀಗೆ ಹೆದರಿಸುವುದು ತೀರಾ ಅಪಾಯಕಾರಿ" ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+