ಎಚ್1ಎನ್1 ರಾಜ್ಯದಲ್ಲಿ ಏಳು ಬಲಿ, 618 ಪ್ರಕರಣ ದಾಖಲು
ಬೆಂಗಳೂರು, ಮಾರ್ಚ್ 6: ಮತ್ತೆ ಸುದ್ದಿಯಾಗುತ್ತಿರುವ ಎಚ್1ಎನ್1 ಮಾರಿಗೆ ರಾಜ್ಯದಲ್ಲಿ ಇದುವರೆಗೆ 7 ಜನ ಮೃತಪಟ್ಟಿದ್ದಾರೆ. ಒಟ್ಟು 618 ಮಂದಿಯಲ್ಲಿ ಈಗಾಗಲೇ ಸೋಂಕು ದೃಢವಾಗಿದ್ದು, ಬೆಂಗಳೂರಿನಲ್ಲೇ 350ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಟ್ಯಾಮಿ ಫ್ಲ್ಯೂ ಮಾತ್ರೆಗಳನ್ನು ಪೂರೈಸಲಾಗಿದ್ದು, ಆರೋಗ್ಯ ಇಲಾಖೆ ರೋಗ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎಚ್1ಎನ್1 ನಿಂದಾಗಿ ಬೆಂಗಳೂರು, ಶಿವಮೊಗ್ಗದಲ್ಲಿ, ಉಡುಪಿಯಲ್ಲಿ ತಲಾ ಇಬ್ಬರು ಸಾವಿಗೀಡಾಗಿದ್ದರೆ, ಮೈಸೂರಿನಲ್ಲಿ ಒಬ್ಬರು ಅಸುನೀಗಿದ ಘಟನೆ ವರದಿಯಾಗಿದೆ.












Click it and Unblock the Notifications