ಹಲಸೂರು ಕೆರೆಯಿಂದ 65 ಲೋಡ್ ತ್ಯಾಜ್ಯ ಹೊರಕ್ಕೆ
ಬೆಂಗಳೂರು, ಡಿಸೆಂಬರ್ 28: ಬೆಂಗಳೂರಿನ ಹಲಸೂರು ಕೆರೆಯಿಂದ ಐದು ದಿನಗಳಲ್ಲಿ 65 ಟ್ರಕ್ ಲೋಡ್‌ನಷ್ಟು ತ್ಯಾಜ್ಯವನ್ನು ಹೊರ ತೆಗೆಯಲಾಗಿದೆ.
ಬಿಬಿಎಂಪಿಯು ಕಳೆದ ಐದು ದಿನಗಳಿಂದ ನಗರದ ಐತಿಹಾಸಿಕ ಹಲಸೂರು ಕೆರೆ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದೆ.ಪಾಲಿಕೆ ಎಂಜಿನಿಯರ್ ಮೋಹನ್ ಕೃಷ್ಣ ಈ ವಿಷಯ ತಿಳಿಸಿದ್ದು, ಆರು ತಿಂಗಳಿನಿಂದ ಹಲಸೂರು ಕೆರೆ ಅಂಗಳದ ಶೇ.40ರಷ್ಟು ಭಾಗದಲ್ಲಿ ಅಯಾಸಿಂತ್ ಕಳೆ ಬೆಳದಿತ್ತು.
ಕೆರೆ ಸ್ವಚ್ಛತೆಗೆ ಎಂಇಜಿ ಮುಂದಾದಾಗ ಪಾಲಿಕೆ ಕೂಡ ತನ್ನ ಸಿಬ್ಬಂದಿ, ಮಾರ್ಷಲ್‌ಗಳನ್ನು ಕೆರೆ ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಿ ಸಹಕಾರ ನೀಡಿದೆ ಎಂದು ತಿಳಿಸಿದ್ದಾರೆ. ಬಿಬಿಎಂಪಿ ಸಿಬ್ಬಂದಿ, ಮಾರ್ಷಲ್‌ಗಳು , ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಸೈನಿಕರ ಸಹಯೋಗದಲ್ಲಿ ಕೆರೆ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದೆ.

113 ಎಕರೆ ವ್ಯಾಪ್ತಿಯ ಕೆರೆಯನ್ನು ನೂರು ಸೈನಿಕರು, 50 ಮಾರ್ಷಲ್‌ಗಳು ಹಾಗೂ ಪಾಲಿಕೆಯ 150 ಸಿಬ್ಬಂದಿ , 10 ಬೋಟ್‌ಗಳನ್ನು ಬಳಸಿ ಸ್ವಚ್ಛಗೊಳಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ.
ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಕೆರೆ ಸ್ವಚ್ಛತಾ ಕಾರ್ಯ ಪರಿಶೀಲನೆ ನಡೆಸಿದ್ದಾರೆ. ವಲಯ ಜಂಟಿ ಆಯುಕ್ತೆ ಪಲ್ಲವಿ, ವಯಲಯ ಮುಖ್ಯ ಅಭಿಯಂತರ ಪ್ರಸಾದ್ ಹಾಜರಿದ್ದರು.












Click it and Unblock the Notifications