ಆರು ವರ್ಷಗಳಲ್ಲೇ ಜನವರಿಯಲ್ಲಿ ಅಧಿಕ ಚಳಿ ಕಂಡ ಬೆಂಗಳೂರು

ಬೆಂಗಳೂರು, ಜನವರಿ 16: ಆರು ವರ್ಷಗಳಲ್ಲೇ ಅತಿ ಹೆಚ್ಚು ಚಳಿಯನ್ನು 2019ರ ಜನವರಿಯಲ್ಲಿ ಬೆಂಗಳೂರು ಈ ಬಾರಿ ಕಂಡಿದೆ. ಬೆಂಗಳೂರಲ್ಲಿ ಈಗ ಕನಿಷ್ಠ 11.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ನಗರದಲ್ಲಿ ಗರಿಷ್ಠ 29.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 14.5 ಡಿಗ್ರಿ ಸೆಲ್ಸಿಯಸ್,ಕೆಐಎನಲ್ಲಿ ಗರಿಷ್ಠ 27.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 11.3 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್‌ನಲ್ಲಿ ಗರಿಷ್ಠ 28.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 13.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಜನವರಿ 2ರಂದು ನಗರದಲ್ಲಿ ಕನಿಷ್ಠ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿತ್ತು. ಇದಾದ ಬಳಿಕ ಕನಿಷ್ಠ ತಾಪಮಾನ 13-15 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲೇ ಏರಿಳಿತವಾಗುತ್ತಿತ್ತು.

6 Year low temperature recorded in Bengaluru

ಜನವರಿಯಲ್ಲಿ ಸಾಮಾನ್ಯವಾಗಿ ಕನಿಷ್ಠ ತಾಪಮಾನ ಸರಾಸರಿ 15.8 ಡಿಗ್ರಿ ಸೆಲ್ಸಿಯಸ್ ಇಉತ್ತದೆ. ಚಳಿಗಾಲದಲ್ಲಿ ಜನವರಿಯಲ್ಲೇ ಅತಿ ಹೆಚ್ಚು ಚಳಿ ದಾಖಲಾಗುತ್ತದೆ. ಜ.15ರ ಚಳಿ ಕಳೆದ ಆರು ವರ್ಷದ ದಾಖಲೆ ಮುರಿದಿದೆ. 2012ರ ಜ.16ರಂದು ನಗರದಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ಕುಸಿದಿತ್ತು.

ಇದಾದ ಬಳಿಕ 2019 ಜ.2ರಂದು ಕನಿಷ್ಠ ತಾಪಮಾನ 12.4ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಜನವರಿ 19ರವರೆಗೆ ಕನಿಷ್ಠ ತಾಪಮಾನ 13-14 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 29-30 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಾವಣಗೆರೆಯಲ್ಲಿ ಅತಿ ಕನಿಷ್ಠ ತಾಪಮಾನ 9.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+