Bengaluru: ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್‌ ಹಿಂದೇಟು ಹಾಕುವುದಕ್ಕೆ 6 ಕಾರಣ!

Bengaluru: ಕಾಂಗ್ರೆಸ್‌ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು. ಇದಾದ ಮೇಲೆ ನಡೆದಿರುವ ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ ಪಕ್ಷವು ಗೆದ್ದು ಮೆರೆದಿದೆ. ಸರ್ಕಾರದ ಮೇಲೆ ಕೇಳಿ ಬಂದಿದ್ದ ಗಂಭೀರ ಆರೋಪಗಳು ಇದೀಗ ತಣ್ಣಗಾಗಿವೆ. ಸರ್ಕಾರ ಒಂದು ಹಂತಕ್ಕೆ ಬಂದಿದೆ. ಇಷ್ಟಾದರೂ ರಾಜ್ಯದ ಪ್ರಮುಖ ಹಾಗೂ ಅತೀ ಮುಖ್ಯ ಪಾಲಿಕೆಗಳಲ್ಲಿ ಒಂದಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ನಡೆಸುವುದಕ್ಕೆ ರಾಜ್ಯ ಕಾಂಗ್ರೆಸ್‌ ಮನಸ್ಸು ಮಾಡುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಹೌದು ಬಿಬಿಎಂಪಿ ಅಂದರೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆದು ಬರೋಬ್ಬರಿ 5 ವರ್ಷಗಳಾಗಿವೆ. ಆದರೆ, ಈಗಲೂ ಒಂದೊಂದು ಕಾರಣಗಳನ್ನು ನೀಡುವ ಮೂಲಕ ಕಾಂಗ್ರೆಸ್‌ ಪಕ್ಷವು ಬಿಬಿಎಂಪಿಯ ಚುನಾವಣೆಯನ್ನು ಮುಂದೂಡುತ್ತಿದೆ. ಇನ್ನು ಇದಕ್ಕೆ ಮತ್ತೊಂದು ಮುಖ್ಯ ಕಾರಣ ಎಂದರೆ ಬೆಂಗಳೂರಿನಲ್ಲಿ ಚುನಾವಣೆಯನ್ನು ಗೆಲ್ಲುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಇಲ್ಲ ಎನ್ನುವುದು. ಹೌದು ಯಾಕೆ ಈ ಅನುಮಾನ, ಬಿಬಿಎಂಪಿ ಚುನಾವಣೆಯನ್ನು ಯಾಕೆ ನಡೆಸುತ್ತಿಲ್ಲ ಎನ್ನುವ ವಿವರ ಇಲ್ಲಿದೆ.

ಬೆಂಗಳೂರುಮಹಾನಗರ ಪಾಲಿಕೆಯ ಚುನಾವಣೆಯನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೆರಡೂ ಮುಂದೂಡಿಕೊಂಡೇ ಬಂದಿವೆ. ಇನ್ನು ಇದೀಗ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ಅಥವಾ 7 ಪಾಲಿಕೆಗಳನ್ನಾಗಿ ಮಾಡುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಜಾರಿಯ ಬಗ್ಗೆ ಚರ್ಚೆ ನಡೆದಿದೆ. ಆದರೆ, ಬೆಂಗಳೂರಿನ ಪಾಲಿಕೆಗಳನ್ನು ಏಳು ಪಾಲಿಕೆಗಳನ್ನಾಗಿ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಅಲ್ಲದೆ ಇದು ಗೊಂದಲದ ಗೂಡಾಗುವುದು ನಿಶ್ಚಿತ ಅಂತಲೇ ಹೇಳಲಾಗುತ್ತಿದೆ. ಇಷ್ಟಕ್ಕೂ ಕಾಂಗ್ರೆಸ್‌ ಬಿಬಿಎಂಪಿ ಚುನಾವಣೆಯನ್ನು ಮುಂಡೂತ್ತಿರುವುದೇಕೆ ಎನ್ನುವ ವಿವರ ಇಲ್ಲಿದೆ.

6 Reasons Why Congress is Delaying Bengaluru BBMP Elections

ಕಾಂಗ್ರೆಸ್‌ಗೆ ಗೆಲ್ಲುವ ಪೂರಕ ವಾತಾವರಣ ಇಲ್ಲ: ಬಿಬಿಎಂಪಿಯ ಚುನಾವಣೆಯನ್ನು ಕಾಂಗ್ರೆಸ್‌ ಮುಂದೂಡುತ್ತಿರುವುದಕ್ಕೆ ಮುಖ್ಯ ಕಾರಣ ಬೆಂಗಳೂರಿನ ಚುನಾವಣೆಯನ್ನು ಈಗ ನಡೆಸಿದರೆ ಗೆಲ್ಲುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷ ಇಲ್ಲ ಎನ್ನುವುದೇ ಆಗಿದೆ. ಅಲ್ಲದೆ ಹಲವು ಕಾರಣಗಳಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ನಡೆಸುವುದು ಕಾಂಗ್ರೆಸ್‌ ಪಕ್ಷಕ್ಕೆ ಬೇಕಾಗಿಲ್ಲ ಎಂದು ಹೇಳಲಾಗುತ್ತಿದೆ.

ಬೆಲೆ ಏರಿಕೆ, ನಗರ ಸಮಸ್ಯೆ: ರಾಜ್ಯ ಕಾಂಗ್ರೆಸ್‌ ಸರ್ಕಾರವು ಕರ್ನಾಟಕದ ವಿವಿಧ ಸೇವೆಗಳ ಬೆಲೆ ಏರಿಕೆ ಮಾಡಿದೆ. ಅದರಲ್ಲೂ ಬೆಂಗಳೂರಿನ ಜನರ ಮೇಲೆ ಪರಿಣಾಮ ಬೀರುವಂತಹ ಹಲವು ಸೇವೆಗಳ ಬೆಲೆ ಏರಿಕೆ ಮಾಡಲಾಗಿದೆ. ಮುಖ್ಯವಾಗಿ ಸಾರಿಗೆಗೆ ಸಂಬಂಧಿಸಿದಂತೆ ಬಿಎಂಟಿಸಿ ಹಾಗೂ ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ಹಲವು ಪಟ್ಟು ಹೆಚ್ಚಳ ಮಾಡಲಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಮಳೆ ಬಂದಾಗ ಬೆಂಗಳೂರಿನ ಸಮಸ್ಯೆಗಳು ವಿಪರೀತವಾಗಿವೆ. ಅಲ್ಲದೆ ಮುಖ್ಯವಾಗಿ ಟ್ರಾಫಿಕ್‌ ಜಾಮ್‌ ಹಾಗೂ ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ಸಿಗದೆ ವಾಹನ ಸವಾರರು ಹಾಗೂ ಜನ ಗರಂ ಆಗಿದ್ದಾರೆ.

ಬಿಜೆಪಿ ಹಿಡಿತ: ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರು ಇದ್ದಾರೆ. ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆ ಹೆಚ್ಚಾಗಿದ್ದರೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.

ಶಾಸಕರಿಗೇ ಇಷ್ಟವಿಲ್ಲ: ಮತ್ತೊಂದು ಪ್ರಮುಖ ಕಾರಣವೆಂದರೆ ಬೆಂಗಳೂರಿನ ಚುನಾವಣೆಯನ್ನು ನಡೆಸುವುದು ಬೆಂಗಳೂರಿನ ಕೆಲವು ಶಾಸಕರಿಗೆ ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಬೆಂಗಳೂರಿನ ಚುನಾವಣೆ ನಡೆದರೆ ಪಾಲಿಕೆಯ ಸದಸ್ಯರು, ಮೇಯರ್‌ ಹಾಗೂ ಉಪಮೇಯರ್‌ ಬರಲಿದ್ದಾರೆ. ಸ್ಥಾಯಿ ಸಮಿತಿಗಳು ರಚನೆ ಆಗಲಿವೆ. ಇದರಿಂದ ಶಾಸಕರ ಅಧಿಕಾರ ಅಥವಾ ಅವಕಾಶ ಕಡಿಮೆಯಾಗುತ್ತದೆ ಎನ್ನುವ ಲೆಕ್ಕಾಚಾರವೂ ಇದೆ ಎಂದು ಹೇಳಲಾಗಿದೆ. ಅಲ್ಲದೆ ಇನ್ನೊಂದು ವಿಷಯವೆಂದರೆ ಬಿಬಿಎಂಪಿ ಚುನಾವಣೆ ಸಂಬಂಧ ಕೇಸ್‌ ಸಹ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+