ರವೀಂದ್ರ ಕಲಾಕ್ಷೇತ್ರಕ್ಕೆ 50: 50 ನಾಟಕಗಳ ಪ್ರದರ್ಶನ

ಬೆಂಗಳೂರು,ಡಿ.1: ರವೀಂದ್ರ ಕಲಾಕ್ಷೇತ್ರಕ್ಕೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಡಿ.1ರಿಂದ ಹತ್ತು ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ ಸಂಸ ಬಯಲು ರಂಗ ಮಂದಿರದಲ್ಲಿ ‘ಬೆಂಗಳೂರು ನಾಟಕೋತ್ಸವ' ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ರಂಗಭೂಮಿ ಬೆಳವಣಿಗೆಯಲ್ಲಿ ರವೀಂದ್ರ ಕಲಾಕ್ಷೇತ್ರದ ಕೊಡುಗೆ ಅಪಾರ. ರಾಷ್ಟ್ರದಲ್ಲೇ ಉತ್ಕೃಷ್ಟ ರಂಗಮಂದಿರವೆಂಬ ಹೆಗ್ಗಳಿಕೆಗೆ ರವೀಂದ್ರ ಕಲಾಕ್ಷೇತ್ರ ಪಾತ್ರವಾಗಿದೆ. ರವೀಂದ್ರನಾಥ್ ಠಾಗೂರರ ಸವಿನೆನಪಿಗಾಗಿ 1963ರಲ್ಲಿ ಉದ್ಘಾಟನೆಯಾದ ಕಲಾ ಕ್ಷೇತ್ರ ಸುವರ್ಣ ಸಂಭ್ರಮದ ದಿನದಂದು ವಿಶಿಷ್ಟ ಸಾಂಸ್ಕೃತಿಕ ದಾಖಲೆಯಾಗಿ ಉಳಿಯಬೇಕೆಂಬ ಆಶಯದೊಂದಿಗೆ ನಾಟಕ ಬೆಂಗಳೂರು, ಹವ್ಯಾಸಿ ರಂಗ ತಂಡಗಳ ಬಳಗ ನಾಟಕೋತ್ಸವ ನಡೆಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಬೆಂಗಳೂರು ನಾಟಕೋತ್ಸವ ಕಾರ್ಯಕ್ರಮ ವಿಧ್ಯುಕ್ತವಾಗಿ ಡಿ.1ರ ರವಿವಾರ ಸಂಜೆ 6ಕ್ಕೆ ಉದ್ಘಾಟನೆಯಾಗಲಿದೆ. ಉದ್ಘಾಟನೆಯನ್ನು ಖ್ಯಾತ ರಂಗಕರ್ಮಿ ಪ್ರಸನ್ನ ನೆರವೇರಿಸಲಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕಿ ಡಾ.ಬಿ.ಜಯಶ್ರೀ, ಡಾ.ಬಿ.ಎಲ್.ಶಂಕರ್, ಐಎಎಸ್ ಅಧಿಕಾರಿ ಕೆ.ಆರ್.ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಶೇಷ ಅತಿಥಿಗಳಾಗಿ ವಿದ್ವಾನ್ ಆರ್.ಕೆ.ಶ್ರೀಕಂಠನ್, ಡಾ.ಮಾಯಾರಾವ್, ಡಾ.ರಾಜೀವ್ ತಾರಾನಾಥ್, ಸಿ.ಎಚ್.ಲೋಕನಾಥ್, ಡಾ.ವಿಜಯಾ, ಡಾ.ಸಿದ್ದಲಿಂಗಪಟ್ಟಣ ಶೆಟ್ಟಿ, ಪರಮಶಿವನ್, ವೆಂಕಟಾಚಲಪತಿ, ಬೆಳಗಲ್ ವೀರಣ್ಣ , ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

40 ತಂಡಗಳು ಒಟ್ಟಿಗೆ ಸೇರಿ ಸರಕಾರ ಯಾವುದೇ ಅನುದಾನವಿಲ್ಲದೇ ಈ ನಾಟಕೋತ್ಸವ ಆಯೋಜಿಸಲಾಗಿದೆ. ಹತ್ತು ದಿನಗಳ ಕಾಲ ನಡೆಯುವ ನಾಟಕೋತ್ಸವಕ್ಕೆ ಪ್ರತಿ ನಾಟಕಕ್ಕೆ 50ರೂ. ಟಿಕೆಟ್ ನಿಗದಿಪಡಿಸಲಾಗಿದೆ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ ತಿಳಿಸಿದರು.

50 plays to mark 50 years of Kalakshetra

ನಾಟಕಗಳ ಪಟ್ಟಿ: ಮುಸ್ಸಂಜೆಯ ಕಥಾಪ್ರಸಂಗ, ಗಿರಿಜಾ ಕಲ್ಯಾಣ, ಉರುಗವ್ವ, ತುಘಲಕ್, ನಮ್ಮಾಳಗೊಬ್ಬ ನಾಜೂಕಯ್ಯ, ಟ್ರೆಡ್ ಮಿಲ್, ಮಂಟೇಸ್ವಾಮಿ ಕಥಾ ಪ್ರಸಂಗ, ಗೋರ, ಒಂದಾನೊಂದು ಕಾಲದಲ್ಲಿ, ಅನಭಿಜ್ಞ ಶಾಕುಂತಲ.

ತಂಡಗಳು: ರೂಪಾಂತರ, ಅದಮ್ಯ, ರಂಗ ಸಂಸ್ಕೃತಿ, ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್, ಸಮುದಾಯ, ನಟರಂಗ, ರಂಗ ವರ್ತುಲ, ಪ್ರಯೋಗರಂಗ, ಅಭಿನಯ ತರಂಗ, ರಂಗ ಪಯಣ, ಪ್ರಸಂಗ

* ಡಿಸೆಂಬರ್ 2 ರಿಂದ 11ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ, ವಾರ್ತಾ ಇಲಾಖೆ ಸಹಕಾರದಿಂದ ಈ 'ನಾಟಕ ಬೆಂಗಳೂರು' ಉತ್ಸವ ಆಯೋಜನೆಗೊಂಡಿದೆ.

ಇದಲ್ಲದೆ ಮಾರ್ಚ್ 9ರ ತನಕ ಒಟ್ಟು 50 ವಿಶಿಷ್ಟ ನಾಟಕಗಳ ಮೂಲಕ ರವೀಂದ್ರ ಕಲಾಕ್ಷೇತ್ರದ 50ನೇ ಹುಟ್ಟುಹಬ್ಬ ಆಚರಣೆಗೆ ಹವ್ಯಾಸಿ ರಂಗ ಕಲಾವಿದರು ಸಜ್ಜಾಗಿದ್ದಾರೆ. ಬಿಇಎಲ್, ಬಿಇಎಂಎಲ್, ಮೈಕೋ ಕಲಾ ಕೇಂದ್ರ, ಶಾಲೆ ಕಾಲೇಜುಗಳುಮ್ ಕಾರ್ಪೋರೇಟ್ ಜಗತ್ತಿನ ಹವ್ಯಾಸಿ ಕಲಾವಿದರ ತಂಡಗಳು ಕೂಡಾ ಈ ಉತ್ಸವದಲ್ಲಿ ಪಾಲ್ಗೊಳ್ಳಲಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+