ಬೆಂಗಳೂರಿಗೆ ವಿದೇಶದಿಂದ ಬಂದವರ ಪತ್ತೆಗೆ 500 ಜನರ ತಂಡ

ಬೆಂಗಳೂರು, ಮಾರ್ಚ್ 23 : ಬೆಂಗಳೂರು ನಗರದಲ್ಲಿ ಕೊರೊನಾ ಹರಡುವುದನ್ನು ತಡೆಯಲು ಬಿಬಿಎಂಪಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿದೇಶದಿಂದ ಬಂದವರನ್ನು ಪತ್ತೆ ಹಚ್ಚಲು 500 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಆರೋಗ್ಯ ಇಲಾಖೆ, ಬಿಬಿಎಂಪಿ, ಬೆಂಗಳೂರು ಪೊಲೀಸರು ಸೇರಿ ಬೆಂಗಳೂರಿಗೆ ಆಗಮಿಸಿದ ವಿದೇಶಿಯರನ್ನು ಹುಡುಕುತ್ತಿದ್ದಾರೆ. ನಗರಕ್ಕೆ ಬಂದವರ ಮನೆಗೆ ಭೇಟಿ ನೀಡಿ home quarantineಗೆ ಕಡ್ಡಾಯವಾಗಿ ಒಳಪಡಬೇಕು ಎಂದು ಸೀಲ್ ಹಾಕಿ ಬರುತ್ತಿದ್ದಾರೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 30 ಸಾವಿರ ಜನರು ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗಿದೆ. ಈಗ ಅವರ ಮನೆಗೆ ಭೇಟಿ ನೀಡಿ home quarantineನಲ್ಲಿರಬೇಕು ಎಂದು ಸೂಚನೆ ನೀಡಲಾಗುತ್ತಿದೆ.

Teams Will Knocked Door Who Returned To Bengaluru

14 ದಿನ ಕಳೆದ ಬಳಿಕ ತಂಡ ಪುನಃ ಅವರ ಮನೆಗೆ ಭೇಟಿ ನೀಡಲಿದೆ. ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಇವೆಯೇ? ಎಂದು ಪರಿಶೀಲನೆ ನಡೆಸಲಿದೆ. ವಿದೇಶದಿಂದ ಬಂದವರ ಕೈ ಮೇಲೆ ಸೀಲ್‌ಗಳನ್ನು ಹಾಕಲಾಗುತ್ತಿದೆ.

ಬಿಬಿಎಂಪಿ ರಚನೆ ಮಾಡಿರುವ ತಂಡದಲ್ಲಿ ಒಬ್ಬ ಆಯುಷ್ ಡಾಕ್ಟರ್, ಒಂದು ಆಂಬ್ಯುಲೆನ್ಸ್, ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸ್ ಸಿಬ್ಬಂದಿ ಇರುತ್ತಾರೆ. ಪ್ರತಿ ತಂಡಕ್ಕೆ ಒಂದು ವೈರ್‌ ಲೆಸ್ ಸೆಟ್ ನೀಡಲಾಗಿದೆ. home quarantineನಲ್ಲಿರುವವರು ಮನೆಯಿಂದ ಹೊರ ಬಾರಬಾರದು ಎಂದು ಸೂಚನೆ ನೀಡಲಾಗುತ್ತಿದೆ.

home quarantine ಸೀಲ್ ಕೈಯಲ್ಲಿ ಇರುವವರು ನಿಮ್ಮ ಬಡಾವಣೆಗಳಲ್ಲಿ ಓಡಾಡುತ್ತಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ಜನರಲ್ಲಿ ಮನವಿ ಮಾಡಿದೆ. home quarantine ತಪ್ಪಿಸಿ ಹೊರ ಬಂದರೆ ಅವರನ್ನು ಸಮೀಪದ quarantine ವ್ಯವಸ್ಥೆ ಇರುವ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ.

ಒಬ್ಬರು ಕ್ಯಾನಿನೆಟ್ ದರ್ಜೆ ಸಚಿವರು, ಒಬ್ಬರು ಐಎಎಸ್ ಅಧಿಕಾರಿ ನೇತೃತ್ವದ ಟಾಸ್ಕ್‌ ಪೋರ್ಸ್‌ಗೆ ತಂಡ ಮಾಹಿತಿಗಳನ್ನು ನೀಡುತ್ತಿದೆ. ಬಿಬಿಎಂಪಿ ಮೇಯರ್ ಮತ್ತು ಆಯುಕ್ತರು ಸಹ ಮಾಹಿತಿಗಳನ್ನು ಪಡೆಯುತ್ತಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+