ಬೆಂಗಳೂರು ಮೂಲದ ಶಂಕಿತ ಐಸಿಸ್ ಉಗ್ರನಿಗೆ 5 ವರ್ಷ ಜೈಲು
ಬೆಂಗಳೂರು/ಶಿಮ್ಲಾ, ಜುಲೈ 27: ಬೆಂಗಳೂರು ಮೂಲದ ಶಂಕಿತ ಐಸಿಸ್ ಉಗ್ರನಿಗೆ ಎನ್ಐಎ ವಿಶೇಷ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಅಬಿದ್ ಖಾನ್ ಅಲಿಯಾನ್ ಅಬು ಮೊಹಮ್ಮದ್ ಜೈಲು ಶಿಕ್ಷೆಗೆ ಗುರಿಯಾದ ಶಂಕಿತನಾಗಿದ್ದಾನೆ. ಈತನಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವೀರೇಂದ್ರ ಸಿಂಗ್ 5000 ರೂಪಾಯಿ ದಂಡವನ್ನೂ ವಿಧಿಸಿದ್ದಾರೆ.

ಶಿಮ್ಲಾದ ಬಂಜಾರ್ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಪೌಲ್ ಸಿ ನಿಯೋ ಎಂಬ ಹೆಸರಿನಲ್ಲಿ ಈತ ವಾಸಿಸುತ್ತಿದ್ದ. 2016ರ ಡಿಸೆಂಬರ್ ನಲ್ಲಿ ಎನ್ಐಎ ಅಧಿಕಾರಿಗಳು ಈತನನ್ನು ಬಂಧಿಸಿದ್ದರು. ಬಂಧನದ ನಂತರ ಈತ ಐಸಿಸ್ ಸ್ಲೀಪರ್ ಸೆಲ್ ಗೆ ತಾನು ಕೆಲಸ ಮಾಡುತ್ತಿದ್ದುದನ್ನು ಒಪ್ಪಿಕೊಂಡಿದ್ದ ಎನ್ನಲಾಗಿದೆ.
ಈತನಿಗೆ ಆರು ಭಾಷೆಗಳು ಬರುತ್ತಿದ್ದು ಈತ ಇಂಡೋನೇಷ್ಯಾ ಮತ್ತು ಸಿರಿಯಾಗೆ ಹೋಗುವ ತನ್ನ ಯೋಜನೆಯನ್ನು ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದ. ಈತನನ್ನ ಕಂಡ ಜೈಲಿಗೆ ಹಾಕಲಾಗಿತ್ತು. ಆದರೆ ತನ್ನ ತಂದೆ ತಾಯಿಗೆ ವಯಸ್ಸಾಗಿದೆ ಕರ್ನಾಟಕ ಜೈಲಿಗೆ ಕಳುಹಿಸುವಂತೆ ಕೇಳಿಕೊಂಡಿದ್ದ ಎನ್ನಲಾಗಿದೆ.












Click it and Unblock the Notifications