ಬಿಬಿಎಂಪಿ ಆಸ್ಪತ್ರೆಯಲ್ಲಿ ಜ.1 ಜನಿಸುವ ಮೊದಲ ಹೆಣ್ಣು ಮಗುವಿಗೆ 5 ಲಕ್ಷ

ಬೆಂಗಳೂರು, ಡಿಸೆಂಬರ್ 30 : ಹೊಸ ವರ್ಷದಂದು ಅಂದರೆ ಜನವರಿ 1, 2018ಕ್ಕೆ ಬೆಂಗಳೂರಿನ ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹೆಣ್ಣುಮಗುವಿನ ಶಿಕ್ಷಣಕ್ಕಾಗಿಯೇ ಐದು ಲಕ್ಷ ರುಪಾಯಿ ಹಣ ಠೇವಣಿ ಇಡಲು ನಿರ್ಧರಿಸಲಾಗಿದೆ. ಈ ಹಣವು ಮಗು ಹಾಗೂ ಬೆಂಗಳೂರಿನ ಆಯುಕ್ತರ ಜಂಟಿ ಖಾತೆಯಲ್ಲಿ ಇರುತ್ತದೆ.

ಈ ವಿಚಾರದ ಬಗ್ಗೆ ಬೆಂಗಳೂರಿನ ಮೇಯರ್ ಸಂಪತ್ ರಾಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ಪತ್ರೆಯ ಪೈಕಿ ಯಾವುದಾದರೊಂದರಲ್ಲಿ ಜನವರಿ ಒಂದರ ಹೊಸ ವರ್ಷದಂದು ಜನಿಸುವ ಮೊದಲ ಹೆಣ್ಣುಮಗು ಹಾಗೂ ಬೆಂಗಳೂರು ಆಯುಕ್ತರ ಜಂಟಿ ಹೆಸರಿನಲ್ಲಿ ಐದು ಲಕ್ಷ ರುಪಾಯಿ ಠೇವಣಿ ಇಡಲಾಗುವುದು.

5 lakhs to 1st girl child born in 2018 in any BBMP hospital

ಆ ಹಣದಲ್ಲಿ ಹೆಣ್ಣುಮಗುವಿನ ಶಿಕ್ಷಣದ ಖರ್ಚನ್ನು ನೋಡಿಕೊಳ್ಳಲಾಗುವುದು. ಈ ವಿಚಾರವಾಗಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಮೇಯರ್ ಸಂಪತ್ ರಾಜ್ ಮಾಹಿತಿ ನೀಡಿದ್ದಾರೆ. ಅಪರೂಪದ ಕ್ರಮ ಎನಿಸಿಕೊಂಡಿರುವ ಇದರ ಅನುಕೂಲ ಪಡೆಯುವ ಹೆಣ್ಣುಮಗು ಯಾವುದು ಎಂದು ಕಾದುನೋಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+