ಬಿಎಂಟಿಸಿ ಬಸ್‌ ಚಾಲಕರಾಗಲು ನೂಕುನುಗ್ಗಲು: ಸಾವಿರ ಹುದ್ದೆ 33 ಸಾವಿರ ಅರ್ಜಿ

Recommended Video

      ಬಿಎಂಟಿಸಿ ಬಸ್‌ ಚಾಲಕರಾಗಲು 33 ಸಾವಿರ ಅರ್ಜಿ | Oneindia Kannada

      ಬೆಂಗಳೂರು, ಜೂನ್ 27: ಬಿಎಂಟಿಸಿಯು 500 ಚಾಲಕರ ಹುದ್ದೆಗಳಿಗೆ ನೇಮಕಾತಿ ಮಾಡಲು ಉದ್ದೇಶಿಸಿತ್ತು ಅದಕ್ಕಾಗಿ ಅರ್ಜಿ ಆಹ್ವಾನಿಸಿತ್ತು. 500 ಚಾಲಕರ ಹುದ್ದೆಗಳಿಗೆ ಬರೋಬ್ಬರಿ 33 ಸಾವಿರ ಅರ್ಜಿಗಳು ಬಂದಿವೆ.

      ಕೆಲಸಕ್ಕೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆದರೆ, ಪಿಯುಸಿ, ಪದವಿ ಹೊಂದಿದವರೂ ಕೆಲಸಕ್ಕೆ ಅರ್ಜಿ ಹಾಕಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಸಂಸ್ಥೆಯು 2017ರ ಡಿಸೆಂಬರ್ 5ರಂದು 392 ಸಾಮಾನ್ಯ ಮತ್ತು ಹೈದರಾಬಾದ್‌ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗಾಗಿ 371ಜೆ ಮೀಸಲಾತಿಯಡಿಯಲ್ಲಿ 108 ಹುದ್ದೆ ಸೇರಿ ಒಟ್ಟು 500 ಚಾಲಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು.

      ಆದರೆ, ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿವೆ. ಅಧಿಕಾರಿಗಳು ಮತ್ತೆ 500 ಚಾಲಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇದೀಗ ಸಾವಿರ ಚಾಲಕರ ನೇಮಕಕ್ಕೆ ವೃತ್ತಿ ಪರೀಕ್ಷೆ ನಡೆಸಲಾಗುತ್ತಿದ್ದು, 33 ಸಾವಿರ ಅಭ್ಯರ್ಥಿಗಳ ಪೈಕಿ ಚಾಲಕರನ್ನು ಆಯ್ಕೆ ಮಾಡುವ ಸವಾಲು ಇಲಾಖೆಯ ಮುಂದಿದೆ.

      33k aspirants to 1k of BMTC drivers post

      ಪದವಿ ಮುಗಿಸಿ ಬಂದಿರುವ ಸಾವಿರಾರು ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕಲು ಆರಂಭಿಸಿದ್ದಾರೆ, ಆದರೆ ಕೆಲಸ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಅದೇ ರೀತಿ ಬಹುತೇಕ ಸರ್ಕಾರಿ ಕೆಲಸವೆಂದರೆ ಸಾಕು, ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ. 33,191 ಅರ್ಜಿಗಳು ಸಲ್ಲಿಕೆಯಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಬಿಎಂಟಿಸಿಯು ಚಾಲನಾ ವೃತ್ತಿ ಪರೀಕ್ಷೆಯನ್ನು ಕಠಿಣಗೊಳಿಸಿದೆ.

      ಕಳೆದೆರೆಡು ತಿಂಗಳಿನಿಂದ ಮಾಗಡಿ ರಸ್ತೆಯ ವಡ್ಡರಹಳ್ಳಿಯಲ್ಲಿನ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಚಾಲನಾ ಸಾಮರ್ಥ್ಯ ಪರೀಕ್ಷಿಸಲಾಗುತ್ತಿದೆ. ದೇಹದಾರ್ಢ್ಯತೆ ಪರಿಶೀಲನೆಯಲ್ಲಿ ಅರ್ಹತೆ ಪಡೆದವರನ್ನು ಚಾಲನಾ ವೃತ್ತಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಐದು ರೀತಿಯ ಚಾಲನಾ ಪರೀಕ್ಷೆ ನಡೆಯಲಿದ್ದು 50 ಅಂಕಗಳನ್ನು ನಿಗದಿಪಡಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+