Police Jobs: ಬೆಂಗಳೂರು ನಗರ ಪೊಲೀಸ್‌ನಲ್ಲಿ ಬರೋಬ್ಬರಿ 3,800 ಹುದ್ದೆಗಳು ಖಾಲಿ ಇವೆ!

ಬೆಂಗಳೂರು, ಮೇ. 28: ಸರ್ಕಾರಿ ಉದ್ಯೋಗಕ್ಕಾಗಿ ಜನ ಜಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಕೆಲಸಗಾರರ ಅಗತ್ಯ ಇದ್ದರೂ ಕೂಡ ಮಾನವ ಸಂಪನ್ಮೂಲ ಇಲ್ಲದೆ ಸರ್ಕಾರಿ ಕಚೇರಿಗಳು ನಲುಗುತ್ತಿವೆ. ಆದರೂ ಕೂಡ ಸರ್ಕಾರ ಹಲವೆಡೆ ನೇಮಕಾತಿ ಪ್ರಕ್ರಿಯೆ ನಡೆಸದೆ ಇಬ್ಬರಿಗೂ ಅನ್ಯಾಯ ಮಾಡುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೆ ಇವೆ. ದಿನ ದಿನಕ್ಕೂ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಜನಸಂಖ್ಯೆ ಹೆಚ್ಚಾರೂ ಪೊಲೀಸ್ ಮತ್ತು ಸಾರ್ವಜನಿಕ ಅನುಪಾತದಲ್ಲಿನ ಅಸಮತೋಲನ ಮಾತ್ರ ಹಾಗೆ ಉಳಿದಿದೆ. ಜನಸಂಖ್ಯೆಗೆ ತಕ್ಕಂತೆ ಪೊಲೀಸರ ಸಂಖ್ಯೆ ಹಾಗೆಯೇ ಬದಲಾಗದೆ ಉಳಿದಿದೆ.

3 800 Vacancies in Bengaluru city police

3,814 ಪೊಲೀಸ್ ಸಿಬ್ಬಂದಿ ಹುದ್ದೆಗಳು ಖಾಲಿ

ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ಅಗತ್ಯ ಹೆಚ್ಚಿದ್ದರೂ, ಹೆಚ್ಚಿನ ವೆಚ್ಚದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರಣ ಸರ್ಕಾರವು ಪೊಲೀಸರನ್ನು ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಪ್ರಸ್ತುತ ಬೆಂಗಳೂರು ಸಿಟಿ ಪೊಲೀಸ್‌ ಇಲಾಖೆಯಲ್ಲಿ 1,825 ಪೊಲೀಸ್ ಕಾನ್ಸ್‌ಟೇಬಲ್‌ಗಳು (ಪಿಸಿಗಳು) ಮತ್ತು 347 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳು (ಪಿಎಸ್‌ಐಗಳು) ಸೇರಿದಂತೆ 3,814 ಹುದ್ದೆಗಳು ಖಾಲಿ ಇವೆ.

ಇಷ್ಟು ಹುದ್ದೆಗಳು ಖಾಲಿ ಇರುವಾಗ, ಸಿಬ್ಬಂದಿ ಕೊರತೆಯು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಪೊಲೀಸ್ ಇಲಾಖೆಗೆ ವಿವಿಧ ಸವಾಲುಗಳಿಗೆ ಒಡ್ಡುತ್ತಿದೆ. ಖಾಲಿ ಹುದ್ದೆಗಳನ್ನು ಬಿಟ್ಟರೂ ಕೂಡ, ನಗರದ ಪ್ರಸ್ತುತ 1.4 ಮಿಲಿಯನ್ ಜನಸಂಖ್ಯೆಗೆ ಇರುವ ಪೊಲೀಸ್ ಬಲ ಯಾವ ಮೂಲೆಗೂ ಸಾಕಾಗುವುದಿಲ್ಲ!.

ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (BPR&D) ಪ್ರಕಾರ, ಪ್ರತಿ 1 ಲಕ್ಷ ಜನಸಂಖ್ಯೆಗೆ 170 ಸಿವಿಲ್ ಪೊಲೀಸರ ಅಗತ್ಯವಿದೆ. ಹೀಗಾಗಿ ಉದ್ಯಾನನಗರಿಯವನ್ನು ನೋಡಿಕೊಳ್ಳಲು 21,720 ಸಿಬ್ಬಂದಿ ಅಗತ್ಯವಿದೆ. ಆದರೆ ರಾಜಧಾನಿಯಲ್ಲಿ ಪ್ರಸ್ತುತ 15,475 ಪೊಲೀಸರು ಮತ್ತು ಅಧಿಕಾರಿಗಳು ಇದ್ದಾರೆ.

3 800 Vacancies in Bengaluru city police

ಡಿಸಿಪಿಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಮತ್ತು ವಿಶೇಷ ಘಟಕಗಳ ಎಸಿಪಿಗಳನ್ನು ಲೆಕ್ಕಾ ಹಾಕಿದರೆ ಸಿಬ್ಬಂದಿ ಸಾಮರ್ಥ್ಯ ಮತ್ತು ಆದರ್ಶ ಸಂಖ್ಯೆಗಳ ನಡುವಿನ ಗಣನೀಯ ಅಂತರವನ್ನು ಕಾಣಬಹುದು. ತಂತ್ರಜ್ಞಾನದ ಹೆಚ್ಚಳದ ಜೊತೆಗೆ ಮಾನವ ಸಂಪನ್ಮೂಲದ ಅಗತ್ಯ ಕೂಡ ಬೇಕು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ಉದಾಹರಣೆಗೆ, ಹೊಯ್ಸಳ ಮತ್ತು ಚೀತಾಗಳಂತಹ ಗಸ್ತು ವಾಹನಗಳು ಹೆಚ್ಚುತ್ತಿರುವಾಗ, ಅವುಗಳನ್ನು ನಿರ್ವಹಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯ ಅವಶ್ಯಕತೆಯಿದೆ. ಪೊಲೀಸ್ ಪಡೆಗಳಲ್ಲಿ ಸಿವಿಲ್ ಕಾನ್‌ಸ್ಟೆಬಲ್‌ಗಳು, ಸಶಸ್ತ್ರ ಮೀಸಲು ಮುಂತಾದ ಅನೇಕ ಸಿಬ್ಬಂದಿಗಳಿರುವುದರಿಂದ ನೇಮಕಾತಿ ಎಂಬುದು ನಿರಂತರ ಚಕ್ರವಾಗಿರಬೇಕು ಎಂದಿದ್ದಾರೆ.

ಅಪರಾಧ, ಜನಸಂಖ್ಯೆ, ಕೈಗಾರಿಕಾ ಮತ್ತು ವಿದ್ಯಾರ್ಥಿಗಳ ಚಟುವಟಿಕೆಗಳು ಮತ್ತು ವಾಹನ ದಟ್ಟಣೆ ಪ್ರತಿದಿನ ಹೆಚ್ಚುತ್ತಿರುವ ಕಾರಣ ಪೊಲೀಸ್ ಬಲವನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಸರ್ಕಾರಕ್ಕೆ ಅನೇಕ ಪ್ರಸ್ತಾವನೆಗಳನ್ನು ಕಳುಹಿಸಿರಬೇಕು. ಬಜೆಟ್ ನಿರ್ಬಂಧಗಳಿಂದಾಗಿ ಪೊಲೀಸ್ ಬಲವನ್ನು ಹೆಚ್ಚಿಸುವಲ್ಲಿ ಸರ್ಕಾರ ನಿಧಾನವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+