ಬೆಂಗಳೂರು ವಾಹನ ದಟ್ಟಣೆ, 3,700 ಕೋಟಿಯಷ್ಟು ನಷ್ಟ

ಬೆಂಗಳೂರು, ಜನವರಿ 23: ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದ ವರ್ಷಕ್ಕೆ 3,700 ಕೋಟಿಯಷ್ಟು ನಷ್ಟ, ಹಾಗೂ 50 ಕೋಟಿ ಲೀಟರ್ ನಷ್ಟು ಇಂಧನ ವ್ಯಯವಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪರಿಷ್ಕೃತ ನಗರ ಮಹಾಯೋಜನೆ-2031 ಸಿದ್ಧಪಡಿಸಲು ನಡೆಸಿರುವ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಇನ್ನು ಒಂದು ವರ್ಷದಲ್ಲಿ ನಗರದ ಜನರು ಒಟ್ಟು 60 ಕೋಟಿ ತಾಸುಗಳನ್ನು ರಸ್ತೆಯಲ್ಲೇ ಕಳೆಯುತ್ತಾರೆ. ಈ ರೀತಿ ಮಾನವ ಶ್ರಮ ವ್ಯರ್ಥವಾಗುವುದರಿಂದ ವರ್ಷಕ್ಕೆ ಸುಮಾರು ₹ 2,350 ಕೋಟಿ ನಷ್ಟ ಉಂಟಾಗುತ್ತಿದೆ. ಜೊತೆಗೆ ಇಂಧನ ವ್ಯಯವೂಆಗುತ್ತಿದೆ ಎಂಬು ಬಿಡಿಎ ವಿವರಿಸಿದೆ.

 traffic congestion

ಬೆಂಗಳೂರಿನ ಸಂಚಾರ ದಟ್ಟಣೆಯಿಂದಾಗಿ ಆಗುವ ಟ್ರಾಫೀಕ್ ಇಷ್ಟೋಂದು ಪ್ರಮಾಣದ ನಷ್ಟವಾಗುತ್ತಿದ್ದು, ಇದು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಇದಕ್ಕೆ ಮೂಲ ಕಾರಣ ಖಾಸಗಿ ವಾಹನಗಳ ಏರಿಕೆ ಎನ್ನಲಾಗಿದ್ದು, ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.

ಪರಿಷ್ಕೃತ ಮಹಾಯೋಜನೆ ರೂಪಿಸುವ ಸಲುವಾಗಿ 500 ವಲಯಗಳನ್ನೊಳಗೊಂಡ ಸಂಚಾರ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಯೋಜನೆಗೆ ವಿವಿಧ ಮೂಲಗಳಿಂದ ದತ್ತಾಂಶ ಕಲೆಹಾಕಿ ಸಂಚಾರಿ ಮಾದರಿ ರೂಪಿಸಲಾಗಿದ್ದು, ಸಿಸಿಟಿವಿ ಬಳಸಿ ಸಂಚಾರ ದಟ್ಟಣೆ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ. ಇದರಲ್ಲಿ 15 ಸಾವಿರ ಕಿ.ಮೀ ರಸ್ತೆ ಮತ್ತು 2,300 ಮಾರ್ಗಗಳಿಗೆ ಸಂಕೇತಗಳನ್ನು ಅಳವಡಿಸಿ ಮಾಹಿತಿ ಕಲೆ ಹಾಕಲಾಗಿದೆ. ಬಿಬಿಎಂಪಿ ಎಲ್ಲಾ ವಾರ್ಡ್ ಗಳು ಹಾಗೂ ಬಿಡಿಎ ವಲಯ ವ್ಯಾಪ್ತಿಯ ಗ್ರಾಮಗಳ ಅಧ್ಯಯನಕ್ಕೆ ಒಳಪಡಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+