ಬೆಂಗಳೂರು: ಕಾರು, ಲಾರಿ ಡಿಕ್ಕಿ, ಇಬ್ಬರು ಟೆಕ್ಕಿಗಳು ಸಾವು
ಬೆಂಗಳೂರು, ಜನವರಿ 03: ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಟೆಕ್ಕಿಗಳು ದುರ್ಮರಣ ಹೊಂದಿರುವ ದಾರುಣ ಘಟನೆ ಬುಧವಾರ ಬೆಂಗಳೂರಿನ ಕೆಂಗೇರಿಯ ನೈಸ್ ರಸ್ತೆಯಲ್ಲಿ ನಡೆದಿದೆ.
ಪ್ರಶಾಂತ್ (27) ಮತ್ತು ಅಕ್ಷಯ್ (25) ಮೃತ ದುರ್ದೈವಿ ಟೆಕ್ಕಿಗಳು. ಇವರಿಬ್ಬರು ಇಂಡಿಕಾ ಕಾರಿನಲ್ಲಿ ಬನ್ನೇರುಘಟ್ಟಕ್ಕೆ ತೆರಳುತ್ತಿದ್ದ ವೇಳೆ ಕೆಂಗೇರಿಯ ನೈಸ್ ರಸ್ತೆಯಲ್ಲಿ ಲಾರಿ ಮತ್ತು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.

ಮೃತ ಟೆಕ್ಕಿಗಳ ವಿಳಾಸದ ಬಗ್ಗೆ ಇನ್ನು ತಿಳಿಬಂದಿಲ್ಲ. ಈ ಸಂಬಂಧ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications