ಸರ್ಕಾರ ಯು-ಟರ್ನ್: 2020ರವರೆಗೆ ಟು ಸ್ಟ್ರೋಕ್ ಆಟೋ ಓಡಿಸಬಹುದು
ಬೆಂಗಳೂರು, ನವೆಂಬರ್ 19: ಟು ಸ್ಟ್ರೋಕ್ ಎಂಜಿನ್ ಆಟೋಗಳು ಹೆಚ್ಚು ಮಾಲಿನ್ಯವನ್ನು ಉಂಟುಮಾಡುತ್ತವೆ ಎಂದು ಆಟೋಗಳನ್ನು ಗುಜರಿಗೆ ಹಾಕಲು ಸಾರಿಗೆ ಇಲಾಖೆ ನಿರ್ಧರಿಸಿತ್ತು. 2020ರವರೆಗೆ ಗುಣಮಟ್ಟ ದೃಢೀಕರಣ ಪತ್ರವನ್ನು ಪಡೆಯಲು ಅವಕಾಶ ನೀಡಲಾಗಿದೆ.
ಈ ವರ್ಷದ ಏಪ್ರಿಲ್ ತಿಂಗಳಿನಿಂದ ಟು ಸ್ಟ್ರೋಕ್ ಆಟೋಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು, ಹೊಸ ಆಟೋವನ್ನು ಕೊಳ್ಳಲು ಸರ್ಕಾರ 30 ಸಾವಿರ ರೂ ನೋಡುವುದಾಗಿ ತಿಳಿಸಿತ್ತು ಆದರೆ ಯಾವುದೇ ಆಟೋಗಳು ಸಾರಿಗೆ ಇಲಾಖೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳದ ಪರಿಣಾಮ ಇನ್ನು ಎರಡು ವರ್ಷ ಗಡುವು ನೀಡಿದೆ.
ಒಂದೊಮ್ಮೆ ಏಕಾಏಕಿ ಈ ಆಟೋಗಳನ್ನು ನಿಷೇಧಿಸಿದರೆ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುತ್ತವೆ, ಸಾರಿಗೆ ಇಲಾಖೆ ವರದಿ ಪ್ರಕಾರ ಬೆಂಗಳೂರಲ್ಲಿ 1.8 ಲಕ್ಷ ಆಟೋಗಳಿವೆ.

ಅದರಲ್ಲಿ 30 ಸಾವಿರಕ್ಕೂ ಹೆಚ್ಚು ಟು ಸ್ಟ್ರೋಕ್ ಆಟೋಗಳಿವೆ. ಈ ಕುಟುಂಬಗಳಿಗೆ ನಾಲ್ಕು ಸ್ಟ್ರೋಕ್ ಆಟೋ ರಿಕ್ಷಾಗಳನ್ನು ಕೊಳ್ಳಲು 30 ಸಾವಿರ ಸಬ್ಸಿಡಿ ನೀಡುವುದಾಗಿ ತಿಳಿಸಿತ್ತು. ಆದರೆ ಆಟೋ ರಿಕ್ಷಾ ಚಾಲಕರ ಸಂಘ ಅವಧಿಯನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿತ್ತು.ಅಷ್ಟೇ ಅಲ್ಲದೆ 50 ಸಾವಿರ ರೂ ಸಬ್ಸಿಡಿ ಈಡುವಂತೆಯೂ ಕೇಳಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ 2020ರವರೆಗೆ ಅವಕಾಶವನ್ನು ನೀಡಿದೆ. ಟು ಸ್ಟ್ರೋಕ್ ನೋಂದಣಿ ರದ್ದು: ಟು ಸ್ಟ್ರೋಕ್ ಆಟೋಗಳ ನೋಂದಣಿಯನ್ನು ರದ್ದು ಮಾಡಲಾಗಿದೆ. 2017-18ರ ಬಜೆಟ್ ನಲ್ಲಿ ಟು ಸ್ಟ್ರೋಕ್ ಆಟೋ ಮಾಲಿಕರಿಗೆ ಸಬ್ಸಿಡಿ ನೀಡಲು 30 ಕೋಟಿ ರೂ ಮೀಸಲಿಡಲಾಗಿತ್ತು. ಒಂದು ಆಟೋ ಖರೀದಿಗೆ 1.7 ಲಕ್ಷ ರೂ ಪಾವತಿಸಬೇಕಾಗುತ್ತದೆ.












Click it and Unblock the Notifications