ಮಾದಕ ದ್ರವ್ಯ ಮಾರುತ್ತಿದ್ದ ನೈಜಿರಿಯಾ ಪ್ರಜೆಗಳ ಬಂಧನ
ಬೆಂಗಳೂರು, ನವೆಂಬರ್ 30 : ಮಾದಕ ದ್ರವ್ಯ ಜಾಲದ ಬೆನ್ನು ಬಿದ್ದಿರುವ ಬೆಂಗಳೂರು ಪೊಲೀಸರು ಮಾದಕ ದ್ರವ್ಯ ಮಾರಾಟಗಾರರ ಜನ್ಮ ಜಾಲಾಡುತ್ತಿದ್ದಾರೆ. ಮಾದಕ ದ್ರವ್ಯ ಜಾಲ ತಡೆಗೆಂದು ವಿಶೇಷ ಘಟಕ ತೆರೆದಿರುವ ಬೆಂಗಳೂರು ಪೊಲೀಸರು ನಗರದ ಹಲವೆಡೆ ಎಡಬಿಡದೆ ದಾಳಿಗಳನ್ನು ನಡೆಸುತ್ತಿದ್ದಾರೆ.
ಇದೀಗ ಕೋರಮಂಗಲ ಮತ್ತು ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ನೈಜಿರಿಯಾದ ಒಕೊಂಕೋ ಬಸಿಲ್ ನೊಬೆಸಿ, ಅಬ್ಬಾಸ್ ಮುಸ್ತಾನ್ ಬಂಧಿತ ಆರೋಪಿಗಳು, ಬಂಧಿತರಿಂದ 4 ಕೆಜಿ ಗಾಂಜಾ, 120 ಗ್ರಾಂ ಚರಸ್, 5 ಗ್ರಾಂ ಕೊಕೇನ್ ವಶ ಪಡಿಸಿಕೊಳ್ಳಲಾಗಿದೆ.
ಹೊರ ರಾಜ್ಯ ಮತ್ತು ದೇಶಗಳ ಮೂಲಕ ಕಳ್ಳದಾರಿಯಲ್ಲಿ ಮಾದಕ ದ್ರವ್ಯವನ್ನು ತರಿಸುತ್ತಿದ್ದ ಇವರು ನಗರದ ಸಾಪ್ಟ್ ವೇರ್ ಎಂಜಿನಿಯರ್‌ಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಮಾರುತ್ತಿದ್ದರು.












Click it and Unblock the Notifications