• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕ

|

ಬೆಂಗಳೂರು, ಡಿಸೆಂಬರ್ 24: ಪಿಕ್ ಪಾಕೆಟ್, ಪರ್ಸ್, ಮೊಬೈಲ್ ಕದ್ದು ಪರಾರಿಯಾಗುವುದು ರೈಲಿನಲ್ಲಿ ಸಾಮಾನ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರೈಲ್ವೆ ದರೋಡೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ : ಜೋಡಿಹಳಿ ಕಾಮಗಾರಿಗಾಗಿ ಹಲವು ರೈಲು ಸಂಚಾರ ರದ್ದು

ಬೆಂಗಳೂರು ಹಾಗೂ ಮೈಸೂರು ಮಾರ್ಗದಲ್ಲಿ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ರಾತ್ರಿ 12.30ರ ಸುಮಾರಿಗೆ ದರೋಡೆ ನಡೆದಿದ್ದು, ಇಬ್ಬರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಿದ್ದಾರೆ.

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ಇದೇ ತಿಂಗಳಲ್ಲಿ ಇದು ಎರಡನೆಯ ಘಟನೆಯಾಗಿದೆ. ಡಿಸೆಂಬರ್ 20ರಂದು ರಾತ್ರಿ ಮೈಸೂರು-ತಾಳಗುಪ್ಪ ರೈಲಿನಲ್ಲೂ ದರೋಡೆ ನಡೆದಿದ್ದು ದರೋಡೆ ತಂಡ ಆರು ಜನರನ್ನು ಬೆದರಿಸಿ ಹಣ, ಆಭರಣ ದರೋಡೆ ಮಾಡಿತ್ತು.

ಬೆಂಗಳೂರು-ಮೈಸೂರು ಮಾರ್ಗದಲ್ಲಿ ದರೋಡೆಕೋರರ ಹಾವಳಿ ಮುಂದುವರೆದಿದೆ. ರಾತ್ರಿ 12.30ರ ಸುಮಾರಿಗೆ ರಾಮನಗರ-ಚನ್ನಪಟ್ಟಣ ರೈಲು ನಿಲ್ದಾಣದ ಬಳಿ ನಡೆದಿದೆ.

ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು

ಹಲ್ಲೆಗೊಳಗಾದ ಇಬ್ಬರು ಕೋಲಾರದ ಮಾಲೂರಿನ ನಾಗರಾಜು, ಮತ್ತು ಎಚ್‌ಡಿ ಕೋಟೆಯ ರಾಮೇಗೌಡ ಎಂದು ಗೊತ್ತಾಗಿದೆ.

English summary
In the last four days, there have been two rain robberies in the Bengaluru mysuru route,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X