Greater Bengaluru Election: 369 ವಾರ್ಡ್ ಗಳಿಗೆ ಕರಡು ಮೀಸಲಾತಿ ಪ್ರಕಟ, 174 ಸೀಟು ಮಹಿಳೆಯರಿಗೆ ಮೀಸಲು!

ಬೆಂಗಳೂರು: ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆಗಳಿಗೆ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರ ಹಿಂದುಳಿದ ವರ್ಗ (ಒಬಿಸಿ) ಎ, ಬಿ, ಮಹಿಳೆಯರು ಮತ್ತು ಸಾಮಾನ್ಯ ವರ್ಗಗಳ ವಾರ್ಡ್‌ಗಳಿಗೆ ಮೀಸಲಾತಿ ನೀಡುವ ಕರಡು ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಕುತೂಹಲಕಾರಿ ವಿಚಾರವೆಂದರೆ 369 ವಾರ್ಡ್ ಗಳ ಪೈಕಿ 174 ಸೀಟುಗಳನ್ನು ವಿವಿಧ ವರ್ಗಗಳ ಅಡಿಯಲ್ಲಿ ಮಹಿಳೆಯರಿಗೆ ಮೀಸಲಿಡಲಾಗಿದೆ.

ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಮೀಸಲಾತಿಯನ್ನು ಘೋಷಿಸಲು 2011 ರ ಜನಗಣತಿಯನ್ನು ಪರಿಗಣಿಸಿದೆ. ಸಾರ್ವಜನಿಕರು 15 ದಿನಗಳೊಳಗೆ ಅಧಿಸೂಚನೆಗೆ ಸಲಹೆ, ಆಕ್ಷೇಪಣೆ ಸಲ್ಲಿಸಬಹುದು. ಜನವರಿ 23 ರೊಳಗೆ ವಿಕಾಸ ಸೌಧದ 4 ನೇ ಮಹಡಿಯಲ್ಲಿರುವ ನಗರಾಭಿವೃದ್ಧಿ ಇಲಾಖೆ ಕೊಠಡಿ ಸಂಖ್ಯೆ 436ರಲ್ಲಿ ಸಂಜೆ 5-30ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಕರಡು ಅಧಿಸೂಚನೆಯೊಂದಿಗೆ ಬೆಂಗಳೂರು ಚುನಾವಣೆ ವದಂತಿ ಮತ್ತಷ್ಟು ಹೆಚ್ಚಾಗಿದೆ. ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

174 out of 369 seats in Greater Bengaluru Authority reserved for women

ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ನಲ್ಲಿ ಆರು ವಿಧಾನಸಭಾ ಕ್ಷೇತ್ರಗಳಾದ ಶಿವಾಜಿನಗರ (8 ವಾರ್ಡ್), ಸಿವಿ ರಾಮನ್ ನಗರ (13), ಶಾಂತಿನಗರ (10), ಚಿಕ್ಕಪೇಟೆ (12), ಚಾಮರಾಜಪೇಟೆ (10) ಮತ್ತು ಗಾಂಧಿನಗರ (10) ಗಳಲ್ಲಿ 63 ವಾರ್ಡ್‌ಗಳನ್ನು ಹೊಂದಿದೆ. ಇಲ್ಲಿ ಸರ್ಕಾರವು 11 ಸ್ಥಾನಗಳನ್ನು ಪರಿಶಿಷ್ಟ ಜಾತಿಗೆ, ಒಂದು ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ 15 ಸೀಟುಗಳನ್ನು ಒಬಿಸಿ (A) ನಾಲ್ಕು (OBC) (B) ಮತ್ತು 32 ಸ್ಥಾನಗಳನ್ನು ಸಾಮಾನ್ಯ ವರ್ಗ ಮತ್ತು 29 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ 72 ವಾರ್ಡ್‌ಗಳಲ್ಲಿ 33 ಮಹಿಳೆಯರಿಗೆ ಮೀಸಲಾಗಿದೆ. ಇದರಲ್ಲಿ ಏಳು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಯಲಹಂಕ 7, ಬ್ಯಾಟರಾಯನಪುರ 14, ಸರ್ವಜ್ಞನಗರ 16, ಪುಲಕೇಶಿನಗರ 11 ಹೆಬ್ಬಾಳ 11, ಆರ್‌ಆರ್ ನಗರ 5 ಮತ್ತು ದಾಸರಹಳ್ಳಿ 8 ವಾರ್ಡ್ ಗಳಿಗೆ. ಇಲ್ಲಿ ಒಂಬತ್ತು ಸೀಟುಗಳನ್ನು ಪರಿಶಿಷ್ಟ ಜಾತಿಗೆ, ಎರಡು ST, 19 ಒಬಿಸಿ ಎಗೆ 19, ಒಬಿಸಿ ಬಿಗೆ ಮೂರು ಮತ್ತು 32 ಸಾಮಾನ್ಯ ವರ್ಗಕ್ಕೆ ಮತ್ತು 25 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ.

ಕೆಆರ್ ಪುರಂ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ (BWCC) 50 ವಾರ್ಡ್‌ಗಳನ್ನು ಹೊಂದಿದ್ದು, ಇದರಲ್ಲಿ 23 ಮಹಿಳೆಯರಿಗೆ, ಏಳು ಎಸ್‌ಸಿ, 1 ಎಸ್‌ಟಿ, 14 ಒಬಿಸಿ ಎ, 3 ಒಬಿಸಿ ಬಿ ಮತ್ತು 25 ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯಲ್ಲಿ (BWCC)ಒಟ್ಟು 112 ಸ್ಥಾನಗಳಲ್ಲಿ 55 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇದರಲ್ಲಿ SC - 9, ST- 2, BC (A) - 30, OBC (B) - 7, ಸಾಮಾನ್ಯ ವರ್ಗ 64 ಸ್ಥಾನಗಳನ್ನು ಮೀಸಲಿಡಲಾಗಿದೆ. 10 ವಿಧಾನಸಭಾ ಕ್ಷೇತ್ರಗಳ ಪೈಕಿ ದಾಸರಹಳ್ಳಿ-10, ಯಶವಂತಪುರ-14, RRಲಕ್ಷ್ಮೀ-14 ಮಲ್ಲೇಶ್ವರಂ-10, ರಾಜಾಜಿನಗರ-11, ಗೋವಿಂದರಾಜನಗರ-13, ವಿಜಯನಗರ-13, ಬಸವನಗುಡಿ-10 ಮತ್ತು ಪದ್ಮನಾಭನಗರ-7 ವಾರ್ಡ್ ಗಳನ್ನು ಹೊಂದಿವೆ.

ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ (BSCC) ಮಹಿಳೆಯರಿಗೆ 34, ಎಸ್‌ಸಿಗೆ ಏಳು, ಎಸ್‌ಟಿಗೆ ಒಂದು, ಒಬಿಸಿ ಎಗೆ 14, ಒಬಿಸಿ ಬಿಗೆ ಮೂರು ಮತ್ತು ಸಾಮಾನ್ಯ ವರ್ಗಕ್ಕೆ 13 ಸ್ಥಾನಗಳನ್ನು ಮೀಸಲಿಡಲಾಗಿದೆ. ಈ ಪಾಲಿಕೆ ವ್ಯಾಪ್ತಿಯಲ್ಲಿ ಪದ್ಮನಾಭ ನಗರ-6, ಜಯನಗರ-10, ಬಿಟಿಎಂ-ಲೇಔಟ್-14, ಮಹದೇವಪುರ-1, ಆನೇಕಲ್-1, ಯಶವಂತಪುರ-1, ಬೆಂಗಳೂರು ದಕ್ಷಿಣ-19 ಮತ್ತು ಬೊಮ್ಮನಹಳ್ಳಿ-20 ವಾರ್ಡ್ ಗಳಿವೆ. ಬೃಹತ್ ಬೆಂಗಳೂರು ಆಡಳಿತ ಕಾಯಿದೆ 2024 ರ ಸೆಕ್ಷನ್ 29 ರ ಅಡಿಯಲ್ಲಿ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಮೀಸಲಾತಿಗೆ ವಿರೋಧ ಪಕ್ಷಗಳ ಆಕ್ಷೇಪ

ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬದ ಬಗ್ಗೆ ತಾವು ಸೇರಿದಂತೆ ಆರು ಬಿಜೆಪಿ ನಾಯಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಮಾಜಿ ಕಾರ್ಪೊರೇಟರ್ ಮತ್ತು ಬಿಜೆಪಿ ನಾಯಕ ಎನ್.ಆರ್. ರಮೇಶ್ ಹೇಳಿದ್ದಾರೆ.

ಜನವರಿ 12 ರೊಳಗೆ ಪ್ರಕಟಿಸಬೇಕಾದ ಮೀಸಲಾತಿ ಪಟ್ಟಿಯ ವಿಚಾರಣೆ ಬಾಕಿ ಇದ್ದರೂ, ಕಾಂಗ್ರೆಸ್ ಸರ್ಕಾರ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದು ಅವೈಜ್ಞಾನಿಕವಾಗಿದೆ. ಕರಡು ಅಧಿಸೂಚನೆಯ ಪ್ರಕಾರ, ಮಹಿಳೆಯರಿಗೆ 11 ಸ್ಥಾನಗಳನ್ನು ಕಡಿಮೆ ಮಾಡಲಾಗಿದೆ, ಆದರೆ ಒಬಿಸಿ ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾಗಿರುವ 15 ಸ್ಥಾನಗಳನ್ನು ತೆಗೆದುಹಾಕಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಮತ್ತು ಚುನಾವಣೆಯನ್ನು ವಿಳಂಬಗೊಳಿಸಲು ಸರ್ಕಾರ ಉದ್ದೇಶಪೂರ್ವಕವಾಗಿ ಇದನ್ನು ಮಾಡಿದೆ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+