ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ರೇಪ್

ನೆಲಮಂಗಲ ತಾಲೂಕಿನ ಮಾಚನಹಳ್ಳಿ ಕಾಲೋನಿಯಲ್ಲಿ ಜು.2ರಂದು ಈ ಘಟನೆ ನಡೆದಿದ್ದು, ಈ ಸಂಬಂಧ ಆರೋಪಿ ಗಂಗಬೈಲಪ್ಪ(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಬಾಲಕಿಯ ಪೋಷಕರ ದಾಬಸ್ ಪೇಟೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮದುವೆ ಬಳಿಕ ರೇಪ್: ಗಂಗಬೈಲಪ್ಪ ತಾಲೂಕಿನ ಶಿವಗಂಗೆ ಗ್ರಾಮದಲ್ಲಿ ಗಾರೆ ಕೆಲಸದ ಮೇಸ್ತ್ರಿಯಾಗಿದ್ದ. ಈತನ ಬಳಿ ಕೆಲಸಕ್ಕೆ ಬಾಲಕಿ ಬರುತ್ತಿದ್ದಳು. ಈಕೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಜು.2ರಂದು ಬೈಕಿನಲ್ಲಿ ಯಡಿಯೂರಿಗೆ ಕರೆದೊಯ್ದು ಅರಿಶಿನದ ಕೊಂಬೊಂದನ್ನು ಕುತ್ತಿಗೆಗೆ ಕಟ್ಟಿ ನಿಗೂಢ ಸ್ಥಳದಲ್ಲಿಅತ್ಯಾಚಾರ ಎಸಗಿದ್ದಾನೆ.[ವಿಬ್‌ಗಯಾರ್ ಶಾಲೆಯಲ್ಲಿ ನಡೆದದ್ದು ಗ್ಯಾಂಗ್‌ರೇಪ್]
ಬಾಲಕಿಯನ್ನು ಮದುವೆಯಾದ ಬಳಿಕ ಎಲ್ಲಿ ಅತ್ಯಾಚಾರ ಎಗಿದ್ದಾನೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಪೊಲೀಸರು ಬಾಲಕಿಯನ್ನು ವಿಚಾರಣೆ ಮಾಡಿದ ಬಳಿಕ ತಿಳಿಯಬೇಕಿದೆ.
ಗಂಗಬೈಲಪ್ಪನಿಗೆ ಈಗಾಗಲೇ ಮದುವೆಯಾಗಿದ್ದು,ಇಬ್ಬರು ಮಕ್ಕಳಿದ್ದಾರೆ. ಈತ ತಾಲೂಕಿನ ಕಂಬಾಳು ಗ್ರಾಮದಲ್ಲಿ ಗಾರೆ ಕೆಲಸ ಮಾಡುವಾಗ ಬಾಲಕಿ ಪರಿಚಯವಾಗಿದೆ. ನಂತರ ಈತನ ಬಳಿಯಲ್ಲಿ ಆಕೆಯನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications