₹150 ಕೋಟಿ ಬೆಂಗಳೂರಿನ 5 ಹೊಸ ಪಾಲಿಕೆಗೆ ವೆಚ್ಚವಾಗಲಿದೆಯೇ: ಬಿಬಿಎಂಪಿ ಹೇಳಿದ್ದೇನು

Greater Bangalore Authority: ಇಂದಿನಿಂದ (ಸೆಪ್ಟೆಂಬರ್ 01) ಬೆಂಗಳೂರಿನ ಮಟ್ಟಿಗೆ ಮಹತ್ವದ ದಿನವಾಗಿದೆ. ಇಂದಿನಿಂದ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವರೂಪ ಬದಲಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ. ಬೆಂಗಳೂರಿನಲ್ಲಿ ಹೊಸ ಪಾಲಿಕೆಗಳ ರಚನೆಯಿಂದಾಗಿ ಅಂದಾಜು 135 ಕೋಟಿಯಿಂದ 150 ಕೋಟಿ ರೂಪಾಯಿಯ ವರೆಗೆ ವಾರ್ಷಿಕವಾಗಿ ಹೆಚ್ಚುವರಿ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.

ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳ ಆಧಾರದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಹೊಸ 5 ನಗರ ಪಾಲಿಕೆಗಳನ್ನು ಸರ್ಕಾರ ಅಧಿಸೂಚಿಸಿದರೂ, ಹಾಲಿ ಇರುವ ವಾರ್ಡ್‌ಗಳೇ ಮುಂದುವರೆಯಲಿವೆ. ಪ್ರಸ್ತುತ, ಬಿಬಿಎಂಪಿ ಹೊಸ ನಗರ ಪಾಲಿಕೆಗಳ ಕಾರ್ಯಾಚರಣೆಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಆಡಳಿತ ವೆಚ್ಚವನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.

150 Crore for 5 New Municipalities in Bengaluru Here s BBMP Clarified Greater Bangalore Authority

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಯಡಿಯಲ್ಲಿ, 5 ನಗರ ಪಾಲಿಕೆಗಳ ಅಧಿಸೂಚನೆಯ ನಂತರ ಸರ್ಕಾರವು ವಾರ್ಡ್ ಮರುವಿಂಗಡನೆಗೆ ಆಯೋಗವನ್ನು (Delimitation Commission) ನೇಮಕ ಮಾಡಲಿದೆ. ಆ ಆಯೋಗವು ಪ್ರತಿ ನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ, ಗಡಿಗಳು ಹಾಗೂ ಇತರೆ ವಿವರಗಳನ್ನು ನಿರ್ಧರಿಸಲಿದೆ. ಹೀಗಾಗಿ ಯಾವುದೇ ರೀತಿಯ ಮಹತ್ವದ ಬದಲಾವಣೆ ಅಥವಾ ವೆಚ್ಚದ ಬಗ್ಗೆ ಈಗ ಚರ್ಚೆ ಆಗಿಲ್ಲ / ಊಹಾಪೋಹಗಳಿಗೆ ಕಿವಿಗೊಡಬೇಡಿ. ಈ ಕುರಿತು ಮುಂದಿನ ದಿನಗಳಲ್ಲಿ ನಿಖರವಾದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಆಡಳಿತ ವಿಕೇಂದ್ರೀಕರಣ, ಸುಗಮ ಆಡಳಿತ ಮತ್ತು ಬೆಂಗಳೂರು ಅಭಿವೃದ್ಧಿಯ ದೃಷ್ಟಿಯಿಂದ ಈಗ ಇರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಹೊಸ ಐದು ಪಾಲಿಕೆಗಳನ್ನು ರಚನೆ ಮಾಡಲಾಗುತ್ತಿದೆ. ಈ ರೀತಿ ಹೊಸ ಪಾಲಿಕೆಗಳನ್ನು ರಚನೆ ಮಾಡುವುದರಿಂದ ಭಾರೀ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು.

ಇನ್ನು ಹೊಸ ಪಾಲಿಕೆ ರಚನೆಗೆ ಸಾರ್ವಜನಿಕ ವಲಯ ಹಾಗೂ ಬಿಬಿಎಂಪಿಯ ಮಾಜಿ ಬಿಜೆಪಿ ಕೌನ್ಸಿಲರ್‌ಗಳು ಹಾಗೂ ವಿರೋಧ ಪಕ್ಷದ ನಾಯಕರಿಂದಲೂ ವಿರೋಧ ವ್ಯಕ್ತವಾಗಿದೆ. ಇನ್ನು ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್‌ಗಳಲ್ಲೂ ಈ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಆದರೆ ಯಾರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಿರಲಿಲ್ಲ.

ಕಳೆದ ಆರು ವರ್ಷಗಳಿಂದಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದೆ ಇರುವುದರಿಂದ ಹೊಸ ಐದು ಪಾಲಿಕೆಗಳ ಚುನಾವಣೆ ವಿಚಾರವು ಭಾರೀ ಕಾವು ಪಡೆದುಕೊಂಡಿದೆ. ಆದರೆ ಹೊಸ ಪಾಲಿಕೆಗಳ ರಚನೆಯಿಂದ ಹೆಚ್ಚುವರಿ ವೆಚ್ಚವಾಗುವುದಿಲ್ಲ ಎಂದು ಬಿಬಿಎಂಪಿ ಹೇಳುತ್ತಿದೆಯಾದರೂ ಹೊಸ ಪಾಲಿಕೆಗಳಿಗೆ ಕಟ್ಟಡ, ಮೂಲಸೌಕರ್ಯ ಹಾಗೂ ಸಿಬ್ಬಂದಿ ಸೇರಿದಂತೆ ಹಲವು ವಿಚಾರಗಳಿಗೆ ವೆಚ್ಚ ಆಗಲಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಸೆಪ್ಟೆಂಬರ್ 02ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕೃತವಾಗಿ ಜಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+