ಬೆಂಗಳೂರಿನಲ್ಲಿ ಒಬ್ಬ ಕಾರ್ಮಿಕನಿಂದ 14 ಮಂದಿಗೆ ಕೊರೊನಾ ವೈರಸ್!
ಬೆಂಗಳೂರು, ಏಪ್ರಿಲ್.23: ಕೊರೊನಾ ವೈರಸ್ ಸೋಂಕು ಬೆಂಗಳೂರಿಗೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಒಬ್ಬನೇ ಒಬ್ಬ ಕೊರೊನಾ ವೈರಸ್ ಸೋಂಕಿತನಿಂದ 14 ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿರುವುದು ಪತ್ತೆಯಾಗಿದೆ.
ಬಿಹಾರಿ ಮೂಲದ ಕಾರ್ಮಿಕರೇ ಹೆಚ್ಚಾಗಿ ನೆಲೆಸಿರುವ ಬೆಂಗಳೂರಿನ ಹೊಂಗಸಂದ್ರದಲ್ಲಿ ಮೊದಲು ಒಬ್ಬ ಬಿಹಾರಿ ಕಾರ್ಮಿಕನಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಸಾಲು ಸಾಲಾಗಿ ಸೋಂಕಿತ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಗುರುವಾರ ಒಂದೇ ದಿನ ಬಿಹಾರ ಮೂಲದ ಕಾರ್ಮಿಕನಿಂದಲೇ ಆರಂಭದಲ್ಲಿ 9 ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಹೊಂಗಸಂದ್ರ ಟು ವಿದ್ಯಾಜ್ಯೋತಿ ನಗರಕ್ಕೆ ಸೋಂಕು:
ಬಿಹಾರ ಮೂಲದ ಕಾರ್ಮಿಕರು ಹೊಂಗಸಂದ್ರವಷ್ಟೇ ಅಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಸಂಚರಿಸಿದ್ದರು. ಇದಕ್ಕೆ ಸಾಕ್ಷಿ ಎನ್ನುವಂತಾ ಆಘಾತಕಾರಿ ಅಂಶವೊಂದು ಹೊರ ಬಿದ್ದಿದೆ. ಒಬ್ಬ ಕಾರ್ಮಿಕನಿಂದ ಹೊಂಗಸಂದ್ರದಲ್ಲಿ 9 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಅದೇ ಬಿಹಾರಿ ಕಾರ್ಮಿಕನಿಂದ ಪಕ್ಕದ ಏರಿಯಾ ವಿದ್ಯಾಜ್ಯೋತಿ ನಗರದಲ್ಲಿ ಇರುವ ಐವರಿಗೆ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಎಂದು ತಿಳಿದು ಬಂದಿದೆ.
ಒಬ್ಬ ಬಿಹಾರಿ ಕಾರ್ಮಿಕನಿಂದಲೇ ಒಟ್ಟು 14 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಪತ್ತೆಯಾಗಿದೆ. ಇದರ ನಡುವೆ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 106ಕ್ಕೆ ಏರಿಕೆಯಾಗಿದೆ.












Click it and Unblock the Notifications