ಬೆಂಗಳೂರು; ಸ್ಯಾನ್ ಫ್ರಾನ್ಸಿಸ್ಕೋನಿಂದ ಬಂತು ವಿಮಾನ; ಒಬ್ಬರಿಗೆ ಸೋಂಕಿನ ಲಕ್ಷಣ

ಬೆಂಗಳೂರು, ಮೇ 15 : ವಂದೇ ಭಾರತ್ ಮಿಷನ್ ಅಡಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ 4ನೇ ವಿಮಾನ ಶುಕ್ರವಾರ ಆಗಮಿಸಿದೆ. ಒಟ್ಟು 107 ಪ್ರಯಾಣಿಕರು ಈ ವಿಮಾನದಲ್ಲಿ ದೇಶಕ್ಕೆ ವಾಪಸ್ ಆದರು.

ದೇವನಹಳ್ಳಿಯಲ್ಲಿರುವ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಬೆಳಗ್ಗೆ 4ನೇ ವಿಮಾನ ಆಗಮಿಸಿತು. ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 107 ಪ್ರಯಾಣಿಕರು ಆಗಮಿಸಿದ್ದು, ಎಲ್ಲರ ಆರೋಗ್ಯ ತಪಾಸಣೆ ಮಾಡಲಾಯಿತು.

ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದವರಲ್ಲಿ 59 ಪುರುಷ ಮತ್ತು 48 ಮಹಿಳಾ ಪ್ರಯಾಣಿಕರು ಪ್ರಯಾಣಿಕರು ಇದ್ದರು. ಒಬ್ಬರು ಗರ್ಭಿಣಿ ಹಾಗೂ 10 ವರ್ಷದೊಳಗಿನ ಒಂದು ಮಗು ಪ್ರಯಾಣಿಕರಾಗಿದ್ದರು.

107 Passengers Arrive Bengaluru From San Francisco

ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಮತ್ತು ಆರೋಗ್ಯ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಮಾರ್ಗಸೂಚಿಯ ಅನ್ವಯ ಆರೋಗ್ಯ ತಪಾಸಣೆ ಮಾಡಲಾಯಿತು. ಒಬ್ಬ ಪುರುಷ ಪ್ರಯಾಣಿಕನಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಹೃದ್ರೋಗ ಆಸ್ಪತ್ರೆಗೆ ಕಳುಹಿಸಲಾಯಿತು.

107 Passengers Arrive Bengaluru From San Francisco

ಉಳಿದ 106 ಪ್ರಯಾಣಿಕರನ್ನು ಬಿಎಂಟಿಸಿ ಬಸ್‌ಗಳ ಮೂಲಕ 14 ದಿನಗಳ ಕ್ವಾರಂಟೈನ್‌ಗಾಗಿ ಹೋಟೆಲ್‌ಗಳಿಗೆ ಕಳುಹಿಸಲಾಯಿತು. ಕ್ವಾರಂಟೈನ್ ವೆಚ್ಚವನ್ನು ಪ್ರಯಾಣಿಕರೇ ಭರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+