ಬೆಂಗಳೂರಲ್ಲಿ 105 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕು
ಬೆಂಗಳೂರು, ಜುಲೈ 23 : ಗಂಟಲು ನೋವು ರೋಗ ಲಕ್ಷಣಗಳುಳ್ಳ ಬೆಂಗಳೂರಿನ ವ್ಯಕ್ತಿಯೊಬ್ಬರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ವಯಸ್ಸಾದ ಕೊರೊನಾ ಸೋಂಕಿತ ರೋಗಿ ಇವರಾಗಿದ್ದಾರೆ. ರೋಗಿಯ ವಯಸ್ಸು 105 ವರ್ಷ.
Recommended Video
ಬಳ್ಳಾರಿ ಮತ್ತು ಬೀದರ್‌ನಲ್ಲಿ 100 ವರ್ಷದ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಈಗ ಬೆಂಗಳೂರಿನಲ್ಲಿ 105 ವರ್ಷದ ವೃದ್ಧ ದಾಖಲಾಗುವ ಮೂಲಕ ಅತಿ ಹಿರಿಯ ರೋಗಿಯಾಗಿದ್ದಾರೆ. ಬಳ್ಳಾರಿಯಲ್ಲಿ ಬುಧವಾರ 93 ವರ್ಷದ ವೃದ್ಧೆ ಸೋಂಕಿನಿಂದ ಗುಣಮುಖರಾಗಿದ್ದರು.
ಮಂಗಳವಾರ ಬೆಂಗಳೂರು ನಗರದಲ್ಲಿ ದಾಖಲಾದ 1,714 ಹೊಸ ಕೋವಿಡ್ ಪ್ರಕರಣಗಳಲ್ಲಿ 105 ವರ್ಷದ ವೃದ್ಧರು ಸೇರಿದ್ದಾರೆ. ರೋಗಿಯ ಸಂಖ್ಯೆ 74411. ವಿಕ್ಟೋರಿಯಾ ಆಸ್ಪತ್ರೆಗೆ ಅವರು ದಾಖಲಾಗಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳಿದ್ದಾರೆ.

ಬುಧವಾರ ಬೆಂಗಳೂರು ನಗರದಲ್ಲಿ 2050 ಹೊಸ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 1067 ಪುರುಷರು ಮತ್ತು 647 ಮಹಿಳೆಯರು ಸೇರಿದ್ದಾರೆ. 44 ಮಕ್ಕಳು ಸಹ ಇದ್ದು ಇವರ ವಯಸ್ಸು 9 ವರ್ಷಕ್ಕಿಂತ ಕಡಿಮೆ ಇದೆ.
ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ ದಾಖಲಾದ ಹೊಸ ಪ್ರಕರಣಗಳಲ್ಲಿ 729 ಜನರು ಗಂಟಲು ನೋವು ರೋಗ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾದವರು. 20 ವರ್ಷದ 369 ಜನ, 30 ವರ್ಷದ 349 ಜನರಿಗೆ ಬುಧವಾರ ಸೋಂಕು ತಗುಲಿದೆ.











Click it and Unblock the Notifications