ವೈಟ್ ಫೀಲ್ಡ್ ನಲ್ಲಿ 100 ವರ್ಷ ಹಳೆಯ ಆಲದಮರ ರಾತ್ರೋರಾತ್ರಿ ಮಂಗಮಾಯ

ಬೆಂಗಳೂರು, ಮಾರ್ಚ್ 03 : ನೂರು ವರ್ಷದ ಹಳೆಯ ಆಲದ ಮರಕ್ಕೆ ಕತ್ತರಿ ಹಾಕಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ರಾತ್ರಿ ಮರಕ್ಕೆ ಕತ್ತರಿ ಹಾಕಲಾಗಿದೆ ಎಂದು ನಿವಾಸಿಗಳು ಆರೋಪ ಮಾಡುತ್ತಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್‌ ಬಡಾವಣೆಯಲ್ಲಿ ಆಲದ ಮರ ಕಾಣೆಯಾಗಿದೆ ಎಂದು ಅನಾಮಧೇಯ ವ್ಯಕ್ತಿಗಳ ವಿರುದ್ಧ ದೂರು ದಾಖಲು ಮಾಡಲಾಗಿದೆ. ಅರಣ್ಯ ಇಲಾಖೆಯವರು ಮರವನ್ನು ಕತ್ತರಿಸಿದ್ದಾರೆಯೇ? ಅಥವ ಬೇರೆಯವರು ಕತ್ತರಿಸಿದ್ದಾರೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ.

ನಿವಾಸಿಗಳು ನೀಡಿದ ದೂರಿನ ಅನ್ವಯ ವೈಟ್ ಫೀಲ್ಡ್‌ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಆಲದ ಮರದ ಬಳಿ ಕೆಲವು ಅಂಗಡಿಗಳಿದ್ದು, ಅವರು ಮರವನ್ನು ಕತ್ತರಿಸಿದ್ದಾರೆಯೇ? ಎಂದು ತನಿಖೆ ನಡೆಸಲಾಗುತ್ತಿದೆ.

100 year old banyan tree goes missing, locals register complaint

ಮರಕ್ಕೆ ಕತ್ತರಿ ಹಾಕುವಂತಹ ಇಂತಹ ಘಟನೆ ವೈಟ್‌ ಫೀಲ್ಡ್ ಬಡಾವಣೆಯಲ್ಲಿ ಮತ್ತೆ ನಡೆಯಬಾರದು ಎಂದು ಜನರು ಬಯಸುತ್ತಿದ್ದಾರೆ. ಆದ್ದರಿಂದ, ಪರಿಸರವಾದಿ ವಿಜಯ್ ನಿಶಾಂತ್ ಜೊತೆ ಸೇರಿ ನಿವಾಸಿಗಳು ಟ್ರೀ ಸೆನ್ಸಸ್ಸ್ ಮಾಡಲು ಮುಂದಾಗಿದ್ದಾರೆ.

100 ವರ್ಷದಷ್ಟು ಹಳೆಯ ಮರಕ್ಕೆ ಯಾರು ಕತ್ತರಿ ಹಾಕಿದ್ದಾರೆ? ಎಂಬುದು ಇನ್ನೂ ತಿಳಿದುಬಂದಿಲ್ಲ. ಆದ್ದರಿಂದ, ಜನರು ಅನಾಮಧೇಯ ವ್ಯಕ್ತಿಯ ವಿರುದ್ಧ ದೂರು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+