Get Updates
Get notified of breaking news, exclusive insights, and must-see stories!

Sports City in Bengaluru: ಬೆಂಗಳೂರಿನ ಯಲಹಂಕ ಬಳಿ ಬರಲಿದೆ 100 ಎಕರೆಯ ಸ್ಪೋರ್ಟ್ಸ್‌ ಸಿಟಿ- ಮಾಹಿತಿ, ವಿವರ

ಬೆಂಗಳೂರು, ಫೆಬ್ರವರಿ 15: ಬೆಂಗಳೂರಿನ ಯಲಹಂಕ ಸಮೀಪದ ಮಾವಳ್ಳಿಪುರದಲ್ಲಿ 100 ಎಕರೆ ಪ್ರದೇಶದಲ್ಲಿ ಕರ್ನಾಟಕ ಸರ್ಕಾರ ಸ್ಪೋರ್ಟ್ಸ್ ಸಿಟಿ ನಿರ್ಮಿಸಲಿದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ವಿಧಾನಸಭೆಗೆ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಯಲಹಂಕ ಶಾಸಕ ಎಸ್‌.ಆರ್ ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಂದ್ರ, ಬೆಂಗಳೂರಿನಲ್ಲಿಯೇ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಸ್ಪೋರ್ಟ್ಸ್ ಸಿಟಿ ನಿರ್ಮಿಸುವುದಾಗಿ ಹೇಳಿದರು.

 100-Acre Sports City To Come Up Near Yelahanka Soon Says Minister Nagendra

ಈ ವೇಳೆ ಅಧಿವೇಶನದಲ್ಲಿ ಸ್ಪೋರ್ಟ್ಸ್ ಸಿಟಿಗೆ ಬಂದರೆ ಸಚಿವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡುವುದಾಗಿ ಶಾಸಕ ಎಸ್‌.ಆರ್ ವಿಶ್ವನಾಥ್ ಹೇಳಿದ್ದು, ಕಾಂಗ್ರೆಸ್‌ ಸರ್ಕಾರ ಸ್ಪೋರ್ಟ್ಸ್ ಸಿಟಿ ಮಾಡಲಿದೆ, ಅದರ ಉದ್ಘಾಟನೆಯ ದಿನ ಕಬಡ್ಡಿ ಆಡೋಣ ಎಂದು ಸಚಿವ ನಾಗೇಂದ್ರ ಪ್ರತಿಕ್ರಿಯಿಸಿದ್ದಾರೆ. ಈ ಚರ್ಚೆಯು ಅಧಿವೇಶನವನ್ನು ನಗೆಗಡಲಲ್ಲಿ ತೇಲಿಸಿತು.

ಇನ್ನು ಬೆಂಗಳೂರಿನಲ್ಲಿ ಸ್ಪೋರ್ಟ್ಸ್ ಸಿಟಿಯ ರಚನೆ ಬಗ್ಗೆ ವಿವರಿಸಿದ ಸಚಿವ ನಾಗೇಂದ್ರ, ಮಾವಳ್ಳಿಪುರದಲ್ಲಿ 60 ಎಕರೆಯಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಿಸಲು ಆರಂಭಿಕ ಪ್ರಸ್ತಾವನೆ ಇದೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಕಂದಾಯ ಇಲಾಖೆಗೆ ಇನ್ನೂ 40 ಎಕರೆ ಭೂಮಿಗೆ ಮನವಿ ಮಾಡಿದೆ. ಭೂಮಿ ದೊರೆತ ನಂತರ ಮತ್ತು ರಾಜ್ಯ ಸಚಿವ ಸಂಪುಟವು ಪ್ರಸ್ತಾವನೆಯನ್ನು ತೆರವುಗೊಳಿಸಿದ ನಂತರ ಇದರ ಕೆಲಸ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಿಸಲು ರಾಜ್ಯ ಕಂದಾಯ ಇಲಾಖೆಯಿಂದ ಭೂಮಿ ಹಸ್ತಾಂತರಿಸಬೇಕಾಗಿದೆ. ಇದನ್ನು ಸರ್ಕಾರದಿಂದ ಅಥವಾ ಖಾಸಗಿಯವರ ನೆರವಿನಿಂದ ನಿರ್ಮಿಸಲಾಗುತ್ತದೆ, ಸ್ಪೋರ್ಟ್ಸ್ ಸಿಟಿಯಲ್ಲಿ ಒಂದೇ ಸೂರಿನಡಿ ಕ್ರೀಡಾ ಚಟುವಟಿಕೆಗಳಿಗೆ ಎಲ್ಲಾ ಸೌಕರ್ಯಗಳನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ಇನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿಯೂ ಕ್ರೀಡಾಂಗಣ ನಿರ್ಮಿಸಲು ಸರ್ಕಾರ ಗಮನಹರಿಸುತ್ತಿದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+