ಬೆಂಗಳೂರು-ಮೈಸೂರು 10 ಪಥದ ರಸ್ತೆ; ಎಷ್ಟು ಟೋಲ್ ಕಟ್ಟಬೇಕು?

ಬೆಂಗಳೂರು ಜೂ.10: ಬೆಂಗಳೂರು-ಮೈಸೂರು ನಗರಗಳನ್ನು ಸಂಪರ್ಕಿಸುವ ಬಹುನಿರೀಕ್ಷಿತ 10 ಪಥದ ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಾಣ ಕಾಮಗಾರಿ ಇದೇ ವರ್ಷದ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತವಾದ ಬಳಿಕ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಎಷ್ಟು ಟೋಲ್ ಕಟ್ಟಬೇಕು?. ಸದ್ಯದ ಮಾಹಿತಿ ಪ್ರಕಾರ 200 ರಿಂದ 250 ರೂ. ದರ ನಿಗದಿ ಮಾಡುವ ಸಾಧ್ಯತೆ ಇದೆ.

ರಸ್ತೆ ನಿರ್ಮಾಣ ಪೂರ್ಣಗೊಂಡ ಬಳಿಕ ಬೆಂಗಳೂರು-ಮೈಸೂರು ಸಂಚಾರದ ಅವಧಿ ಮೂರು ಗಂಟೆಯ ಸಮಯ75 ನಿಮಿಷಕ್ಕೆ ಇಳಿಕೆಯಾಗಲಿದೆ ಎಂಬ ನಿರೀಕ್ಷೆ ಇದೆ. ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಸಂಚಾರ ನಡೆಸಲು ವಾಹನ ಸವಾರರು ಟೋಲ್ ಕಟ್ಟಬೇಕು.

10 Lane Bengaluru Mysuru Road Moterist To Pay Toll Fee Rs 200 To 250

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳ ಪ್ರಕಾರ ಪ್ರತಿ 60 ಕಿ. ಮೀ.ಗೆ ಒಂದು ಟೋಲ್ ನಿರ್ಮಿಸಲಾಗಿದೆ. ಬೆಂಗಳೂರು ಸಮೀಪದ ಕುಂಬಳಗೋಡು ಹತ್ತಿರದ ಕಣಮಿಣಿಕೆ ಬಳಿ ಹಾಗೂ ಶ್ರೀರಂಗಪಟ್ಟಣದ ಗಣಂಗೊರು ಸಮೀಪ ಸೇರಿ ಒಟ್ಟು ಎರಡು ಟೋಲ್ ಬೂತ್‌ ಸ್ಥಾಪಿಸಲಾಗಿದೆ.

ಅಲ್ಲದೇ ಪ್ರಾಧಿಕಾರದ ನಿಯಮದಂತೆ ಪ್ರತಿ 1.5 ಕಿ.ಮೀ.ಗೆ 2 ರೂ. ಶುಲ್ಕ ನಿಗದಿಪಡಿಸಿದೆ ಎಂಬ ಮಾಹಿತಿ ಇದೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸಭೆ ನಡೆಸಿ, ಟೋಲ್ ಶುಲ್ಕ ಅಂತಿಮಗೊಳಿಸಲಾಗುತ್ತದೆ.

ಸಮಯ ಉಳಿತಾಯ: ಬೆಂಗಳೂರು- ಮೈಸೂರು ಕಾರಿಡಾರ್‌ನಿಂದ ವಾಹನ ಸವಾರರ ಸಮಯ ಉಳಿತಾಯವಾಗುತ್ತದೆ. ಬೆಂಗಳೂರಿನಿಂದ ಮೈಸೂರಿಗೆ ತಲುಪಲು ಹಾಲಿ ಸುಮಾರು ಮೂರು ಗಂಟೆ ಸಮಯ ಹಿಡಿಯುತ್ತಿದೆ. ಈ ನೂತನ ಹೆದ್ದಾರಿಯಿಂದ ಕೇವಲ 75 ನಿಮಿಷದಲ್ಲಿ ತಲುಪಬಹುದಾಗಿದೆ.

10 Lane Bengaluru Mysuru Road Moterist To Pay Toll Fee Rs 200 To 250

ಮೈಸೂರಿನ ಕೈಗಾರಿಕಾ ಚಟುವಟಿಕೆ, ಕಚ್ಚಾವಸ್ತುಗಳ ಸಾಗಾಟಕ್ಕೂ ಅನುಕೂಲವಾಗಲಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. 10 ಪಥದ ಈ ಕಾರಿಡಾರ್‌ನಿಂದ ಉಭಯ ನಗರಗಳಿಗೂ ಅನುಕೂಲವಾಗಲಿದೆ.

ಟೋಲ್ ಶುಲ್ಕ ನಿಗದಿ ಹೇಗೆ?; ಹೆದ್ದಾರಿಯ ಸೇತುವೆ, ಅಂಡರ್‌ಪಾಸ್‌ಗಳ ಆಧಾರದಲ್ಲಿ ಟೋಲ್ ಶುಲ್ಕ ನಿಗದಿಪಡಿಸಲಾಗುತ್ತದೆ. ಈ ರಸ್ತೆಯಲ್ಲಿ 9 ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆ ಹಾಗೂ 4 ರೈಲ್ವೆ ಮೇಲ್ಸೇತುವೆಗಳು ಬರುತ್ತವೆ. ಕಾಮಗಾರಿ ಇನ್ನೂ ನಡೆಯುತ್ತಿದ್ದು, ಸಂಚಾರ ಆರಂಭಕ್ಕೆ ಅವಕಾಶ ನೀಡಿದ ಬಳಿಕ ಟೋಲ್ ಶುಲ್ಕದ ನಿಖರ ಮಾಹಿತಿ ತಿಳಿಯಲಿದೆ.

Recommended Video

      ದಿನೇಶ್ ಕಾರ್ತಿಕ್ ಜೊತೆ ಮೈದಾನದಲ್ಲೇ ಹಾರ್ದಿಕ್ ಪಾಂಡ್ಯ ನಡೆದುಕೊಂಡ ರೀತಿಗೆ ಭಾರಿ ವಿರೋಧ | OneIndia Kannada

      ನಿಗದಿತ ವೇಳಾಪಟ್ಟಿಯಂತೆ ಮದ್ದೂರಿನ ನಿಡಘಟ್ಟವರೆಗಿನ ಹೆದ್ದಾರಿಯನ್ನು ಜುಲೈನಲ್ಲಿ ಹಾಗೂ ಉಳಿದ ರಸ್ತೆಯನ್ನು ಅಕ್ಟೋಬರ್‌ನಲ್ಲಿ ತೆರೆಯಬೇಕಿದ. ಕಾಮಗಾರಿ ಆರಂಭದಲ್ಲಿ 2014ರಲ್ಲಿ ಒಟ್ಟು ಯೋಜನೆ ವೆಚ್ಚ 4100 ಕೋಟಿ ರೂ. ಎಂದು ಅಂದಾಜಿಲಾಗಿತ್ತು. ಕಾರಿಡಾರ್ ಪೂರ್ಣಗೊಳ್ಳುವ ಹೊತ್ತಿಗೆ ನಿರ್ಮಾಣ ವೆಚ್ಚ ದುಪ್ಪಟ್ಟಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+