ಕುದುರೆ ರೇಸ್‌ನಲ್ಲಿ ಪಾಲ್ಗೊಳ್ಳುವ 10 ಜಾಕಿಗಳಿಗೆ ಕೊರೊನಾ ಪಾಸಿಟಿವ್
ಬೆಂಗಳೂರು, ಆಗಸ್ಟ್ 19: ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂದರೆ ಅದು ಕುದುರೆ ರೇಸ್‌ನಲ್ಲಿಯೇ..
Recommended Video
ಜಾಕಿಗಳ ಮೇಲೂ ಕೂಡ ಕೊರೊನಾ ಕರಿ ನೆರಳು ಬಿದ್ದಾಗಿದೆ.ರೇಸ್‌ನಲ್ಲಿ ಪಾಲ್ಗೊಳ್ಳಲಿರುವ 10 ಜಾಕಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ನಡುವೆ ಕೆಲ ದಿನಗಳ ಹಿಂದಷ್ಟೇ 10 ಮಂದಿ ಸೋಂಕಿತ ಜಾಕಿಗಳಲ್ಲಿ ಒಬ್ಬರು ಕೆಲ ದಿನಗಳ ಹಿಂದಷ್ಟೇ ಕ್ಲಬ್‌ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ರೇಸಿಂಗ್ ಸೀಸನ್ ಆರಂಭಕ್ಕೆ ತಯಾರಿಗಳು ನಡೆಯುತ್ತಿದ್ದು, ರೇಸ್ ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಟಿಸಿಯ ಟ್ರ್ಯಾಕ್ ನಲ್ಲಿ ತರಬೇತಿ ನಡೆಸಲು ಬೆಂಗಳೂರು ಮೂಲದ 55 ಜಾಕಿಗಳು ಮುುಂದಾಗಿದ್ದರು.

ಹೀಗಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣಪತ್ರ ಸಲ್ಲಿಸುವಂತೆ ಕ್ಲಬ್ ಅಧಿಕಾರಿಗಳು ಸೂಚಿಸಿದ್ದರು. ಇದರಂತೆ ಇದೀಗ 10 ಮಂದಿ ಜಾಕಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ.
ಸೋಂಕಿತ ಜಾಕಿ ಕ್ಲಬ್‌ಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಜಾಕಿ ಕ್ಲಬ್ ಕಚೇರಿಗೆ ಪ್ರವೇಶ ಮಾಡಿದ್ದ ಹಿನ್ನೆಲೆಯಲ್ಲಿ ಎಲ್ಲ ಉದ್ಯೋಗಿಗಳಿಗೆ ಕ್ಲಬ್ ಖಾಲಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದು, ಸ್ಯಾನಿಟೈಸ್ ಮಾಡುವ ಕಾರ್ಯ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಇದೀಗ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲರಿಗೂ ಆತಂಕ ಎದುರಾಗಿದೆ, ರೇಸ್‌ಗಳನ್ನು ನಡೆಸಬೇಕೋ ಬೇಡವೋ ಎನ್ನುವ ಗೊಂದಲ ಎದುರಾಗಿದೆ. ರೇಸ್‌ಗಳನ್ನು ನಡೆಸಿದರೂ ಕೂಡ ಜನರು ಬರುವುದು ಕಷ್ಟ.












Click it and Unblock the Notifications