ಬೆಂಗಳೂರು: ವೈದ್ಯಕೀಯ ಸಂಸ್ಥೆ ಮೇಲೆ ಐಟಿ ದಾಳಿ, ಅಪಾರ ಸಂಪತ್ತು ಪತ್ತೆ
ಬೆಂಗಳೂರು, ಡಿಸೆಂಬರ್ 2: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನವೆಂಬರ್ 29ರಂದು ಬೆಂಗಳೂರಿನ ನಗರದ ಪ್ರಮುಖ ಆರೋಗ್ಯ ಸಂಸ್ಥೆಗಳ ಮೇಲೆ ನಡೆಸಿದ್ದ ದಾಳಿಯಲ್ಲಿ ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿದೆ.
#Karnataka: Over 1.4 crores cash, foreign currencies, jewellery & bullion exceeding 3.5 kgs recovered in Income Tax raids at 2 IVF clinics & 5 medical Diagnostic centers in Bengaluru pic.twitter.com/XO2U7MriWh
— ANI (@ANI) December 2, 2017
ನಗರದ ಪ್ರಮುಖ ಔಷಧಿ ವಿತರಕರ ಕಚೇರಿಗಳು, ಚಿಕ್ಕಪೇಟೆ ಮತ್ತು ಕಾಟನ್ ಪೇಟೆಯ ಫಾರ್ಮಾಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ 1.4 ಕೋಟಿ ನಗದು ಹಣ, ವಿದೇಶಿ ಕರೆನ್ಸಿ ಹಾಗೂ 3.5 ಕೆ.ಜಿ ಚಿನ್ನ ಮತ್ತು ಬೆಳ್ಳಿಯ ಗಟ್ಟಿಗಳು ಪತ್ತೆಯಾಗಿವೆ.

ಸ್ತ್ರೀ ರೋಗ ತಜ್ಞೆ ಡಾ. ಕಾಮಿನಿ ರಾವ್ ಒಡೆತನದ ಮಿಲನ್ ಆಸ್ಪತ್ರೆ ಸೇರಿದಂತೆ ಎರಡು ಐವಿಎಫ್ ಸೆಂಟರ್ ಮತ್ತು ಐದು ಮೆಡಿಕಲ್ ಡಯಾಗ್ನಾಸ್ಟಿಕ್ ಮೇಲೆ ನವೆಂಬರ್ 29ರದು ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು.












Click it and Unblock the Notifications