Get Updates
Get notified of breaking news, exclusive insights, and must-see stories!

ಕರೆದಲ್ಲಿಗೆ ಬಾರದ, ಬಂದರೂ ಹೆಚ್ಚು ವಸೂಲಿ ಮಾಡಿದ 1,116 ಆಟೋ ಚಾಲಕರ ವಿರುದ್ಧ ಕೇಸ್

ಬೆಂಗಳೂರು, ಅಕ್ಟೋಬರ್ 25: ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಹಾಗೂ ಕರೆದಲ್ಲಿಗೆ ಬಾರದೆ ಪ್ರಯಾಣ ನಿರಾಕರಿಸುವ ಆಟೋ ಚಾಲಕರ ವಿರುದ್ಧ ಬೆಂಗಳೂರು ನಗರ ಸಂಚಾರ ಪೊಲೀಸರು ಸಮರ ಸಾರಿದ್ದಾರೆ. ವಿಶೇಷ ಕಾರ್ಯಾಚರಣೆ ಮೂಲಕ 1,116 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಬೆಂಗಳೂರು ನಾಗರಿಕರಿಂದ ಸಲ್ಲಿಕೆಯಾದ ದೂರಿನ ಮೇರೆಗೆ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ. ಆರ್.ರವಿಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನಾದ್ಯಂತ ಸಂಚಾರ ಪೊಲೀಸರು ಮಂಗಳವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪ್ರಯಾಣಿಕರ ಮೇಲೆ ಹೆಚ್ಚುವರಿ ಪ್ರಯಾಣ ಶುಲ್ಕ ವಿಧಿಸುವ ಹಾಗೂ ಕರೆದಲ್ಲಿಗೆ ಬಾರದ ಸವಾರಿಯನ್ನು ತಿರಸ್ಕರಿಸುವ ಆಟೋಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಸಮರ್ಪಕ ಸೇವೆ ನೀಡದೇ ತಪ್ಪೆಸಗಿದ ಆಟೋ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಂಡು, 1,000 ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಒಟ್ಟು 312 ಆಟೋಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಚಾಲಕರು ದಂಡ ಪಾವತಿಸಿದ ಬಳಿಕ 307 ವಾಹನಗಳನ್ನು ಬಿಟ್ಟು ಕಳುಹಿಸಲಾಗಿದೆ.

1,116 case filed against Bengaluru autorickshaw driver for overcharging and refusing ride

ಕಾರ್ಯಾಚರಣೆ ವೇಳೆ ಸಂಚಾರ ಪೊಲೀಸರು ಚಾಲಕರು ಸವಾರಿ ನಿರಾಕರಿಸಿದಕ್ಕೆ 270 ಆಟೋಗಳು ಮತ್ತು ಸುಮಾರು 312 ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕ ವಿಧಿಸಿದ್ದ ಆರೋಪ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಮಫ್ತಿಯಲ್ಲಿ ಕಾರ್ಯಾಚರಣೆ !

ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್.ರವಿಕಾಂತೇಗೌಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಾರ್ವಜನಿಕರಿಂದ ವಿಶೇಷವಾಗಿ ಹಿರಿಯ ನಾಗರಿಕರಿಂದ ಆಟೋ ಚಾಲಕರು ಮಾಡುವ ತಪ್ಪುಗಳ ಬಗ್ಗೆ ದೂರುಗಳು ಬಂದಿದ್ದವು. ಅದರ ಆಧಾರದಲ್ಲಿ ವಿಶೇಷ ಕಾರ್ಯಾಚರಣೆ ಮಾಡಲಾಗಿದೆ.

ನಮ್ಮ ಟ್ರಾಫಿಕ್ ಪೊಲೀಸರು ಮಫ್ತಿಯಲ್ಲಿ ಪ್ರಯಾಣಿಕರಂತೆ ಆಟೋಗಳಲ್ಲಿ ಪ್ರಯಾಣಿಸಿದ್ದಾರೆ. ಪ್ರಯಾಣದ ನಂತರ ಆಟೋ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಹಾಗೂ ಸವಾರಿ ತಿರಸ್ಕರಿಸಿದ ಚಾಲಕರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಹಲವು ಚಾಲಕರ ಸಮವಸ್ತ್ರ ಧರಿಸದೇ ಸೇವೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಜೊತೆಗೆ ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳ ಬಳಕೆ, ದೋಷಯುಕ್ತ ನಂಬರ್ ಪ್ಲೇಟ್‌ಗಳು ಸೇರಿದಂತೆ ಇನ್ನಿತರ ಕಾರಣಗಳಿಗೂ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+