ಕೂಡ್ಲಿಗಿಯಲ್ಲಿ ಕೂಲ್ ಆಗಿ ಶೆಣೈ ಕೇಳಿದ ಪ್ರಶ್ನೆ 'ಫೇಸ್ಬುಕ್ ಎಂದ್ರೇನು?'

By: ವಿಕಾಸ್ ನಂಜಪ್ಪ
Subscribe to Oneindia Kannada

ಕೂಡ್ಲಿಗಿ, ಜೂನ್ 09: ಕೂಡ್ಲಿಗಿ ಉಪವಿಭಾಗ ಡಿವೈಎಸ್ಪಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಅನುಪಮಾ ಶೆಣೈ ಅವರು ಕೂಡ್ಲಿಗಿಗೆ ಮರಳಿದ್ದಾರೆ. ಎದುರಿಗೆ ಸಿಕ್ಕ ಸುದ್ದಿಗಾರರು ಫೇಸ್ ಬುಕ್ ಸ್ಟೇಟಸ್ ಬಗ್ಗೆ ಕೇಳಿದ ಪ್ರಶ್ನೆಗೆ ಕೂಲ್ ಆಗಿ ಉತ್ತರಿಸಿದ ಅನುಪಮಾ, ಫೇಸ್ ಬುಕ್ ಎಂದರೇನು? ಎಂದು ಮರು ಪ್ರಶ್ನೆ ಹಾಕಿದ್ದಾರೆ.[ಅನುಪಮಾ ವರ್ಸಸ್ ಪರಮೇಶ್ವರ್ : ಇದುವರೆಗಿನ ಕಥೆಗಳು]

ಶನಿವಾರ (ಜೂನ್ 04) ರಂದು ರಾಜೀನಾಮೆ ಇತ್ತ ಬಳಿಕ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಅನುಪಮಾ ಶೆಣೈ ಅವರ ಫ್ರೊಫೈಲ್ ಹೆಚ್ಚು ಸಕ್ರಿಯವಾಗಿತ್ತು. ಶೆಣೈ ಅವರು ಎಲ್ಲಿದ್ದಾರೆ ಎಂಬ ಕುತೂಹಲದ ಪ್ರಶ್ನೆಯ ಜೊತೆಗೆ ಅವರು ನೆಕ್ಸ್ಟ್ ಏನು ಸ್ಟೇಟಸ್ ಹಾಕುತ್ತಾರೆ ಎಂಬ ಸಹಜ ಕುತೂಹಲ ಈ ಕ್ಷಣದ ತನಕ ಇದ್ದೇ ಇದೆ.['ರೆಬೆಲ್' ಕಾಪ್ ಅನುಪಮಾ ವ್ಯಕ್ತಿಚಿತ್ರ]

Anupama Shenoy

ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ್ ಅವರ ವಿರುದ್ಧ ಸಮರ ಸಾರುವ ಸ್ಟೇಟಸ್ ಬಂದ ಮೇಲಂತೂ ರೋಚಕತೆ ಹೆಚ್ಚಾಯಿತು. ಅನುಪಮಾ ಅವರ ಮನವೊಲಿಸಿ ಕರೆದುಕೊಂಡು ಬರಲು ಪೊಲೀಸರ ತಂಡ ಬರುತ್ತಿದ್ದಂತೆ, ಅನುಪಮಾ ಅವರು ಉತ್ತರ ಕನ್ನಡ ಜಿಲ್ಲೆ ತೊರೆದು ಬಳ್ಳಾರಿ ಜಿಲ್ಲೆಗೆ ಗುರುವಾರ ಬೆಳಗ್ಗೆ ಬಂದಿದ್ದಾರೆ.[ಫೇಸ್ ಬುಕ್ ಖಾತೆ ಹ್ಯಾಕ್ ಆಗಿರಬಹುದು']


ಬೆಳ್ಳಂಬೆಳ್ಳಗೆ ಅನುಪಮಾ ಅವರನ್ನು ಎದುರುಗೊಂಡ ಪತ್ರಕರ್ತರು ಕೇಳಿದ ಪ್ರಶ್ನೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡದ ಅನುಪಮಾ, ಫೇಸ್ ಬುಕ್ ಎಂದರೇನು? ನನಗೆ ಯಾವ ಫೇಸ್ ಬುಕ್ ಗೊತ್ತಿಲ್ಲ. ವಿಡಿಯೋ ನೋಡಿ:


ನನ್ನ ಹೆಸರಿನಲ್ಲಿ ಬೇರೆ ಯಾರೋ ಪೋಸ್ಟ್ ಹಾಕುತ್ತಿರಬಹುದು. ನನ್ನ ಪ್ರೊಫೈಲ್ ಹ್ಯಾಕ್ ಆಗಿರುವ ಸಾಧ್ಯತೆಯಿದೆ ಎಂದಿದ್ದಾರೆ. ಡಿವೈಎಸ್ಪಿ ಅನುಪಮಾ ಅವರು ಸದ್ಯದಲ್ಲೇ ಎಸ್ ಪಿ ಚೇತನ್ ಅವರನ್ನು ಭೇಟಿ ಮಾಡಿ ಮುಂದಿನ ನಡೆ ಇಡಲಿದ್ದಾರೆ.ಅನುಪಮಾ ಅವರೇ, [ಆತ್ಮರಕ್ಷಣೆಗಾಗಿ ಪಿಸ್ತೂಲು ಇಟ್ಟುಕೊಳ್ಳಿ!] (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After remaining untraceable for several days, Anupama Shenoy, the DSP has returned home and claims that her facebook account has been hacked.When asked about her facebook account, she hit back at the media, "What is Facebook? I do not know what Facebook is.
Please Wait while comments are loading...