ಎಂ.ಬಿ.ಪಾಟೀಲ್‌ಗೆ ಟೀಚರ್ ಸ್ಥಾನದ ಆಫರ್ ಕೊಟ್ಟ ಯಡಿಯೂರಪ್ಪ!
ಬೆಳಗಾವಿ, ಮಾರ್ಚ್ 10 : 'ನನಗೆ ಕಾಮನ್ ಸೆನ್ಸ್ ಇಲ್ಲ, ಅವರೇ ನನಗೆ ಹೇಳಿಕೊಡಲಿ. ನನಗೆ ಕಾಮನ್ ಸೆನ್ಸ್ ಎಂದರೆ ಏನು ಎಂದು ತಿಳಿದಿಲ್ಲ. ಅವರೇ ಹೇಳಿಕೊಡಲಿ, ಅವರನ್ನು ಬೇಕಾದರೆ ಟೀಚರ್ ಆಗಿ ನೇಮಕ ಮಾಡಿಕೊಳ್ಳುತ್ತೇನೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಚಿಕ್ಕೋಡಿಯಲ್ಲಿ ಭಾನುವಾರ ಮಾತನಾಡಿದ ಯಡಿಯೂರಪ್ಪ ಅವರು, 'ಯಡಿಯೂರಪ್ಪ ಅವರಿಗೆ ಕಾಮನ್ ಸೆನ್ಸ್ ಇಲ್ಲ' ಎಂಬ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದರು.
'ಎಂ.ಬಿ.ಪಾಟೀಲ ಹೇಳಿದಂತೆ ನನಗೆ ಕಾಮನ್ ಸೆನ್ಸ್ ಇಲ್ಲಾ. ಆದರೆ, ಅವರೇ ನನಗೆ ಕಾಮನ್ ಸೆನ್ಸ್ ಅಂದ್ರೆ ಏನೂ ಅಂತ ಹೇಳಿ ಕೊಡಲಿ. ಅವರಿಂದಲೇ ಕಲಿಯಲು ಪ್ರಯತ್ನಿತ್ತೇನೆ' ಎಂದು ಕುಟುಕಿದರು.

'ಅವರು ನನಗೆ ಕಾಮನ್ ಸೆನ್ಸ್ ಹೇಳಿಕೊಡೋ ಟೀಚರ್ ಆಗಲಿ. ಬೇಕಾದರೆ ಅವರನ್ನು ಟೀಚರ್ ಅಂತ ನೇಮಿಸಿಕೊಳ್ಳುತ್ತೇನೆ. ಕಾಮನ್ ಸೆನ್ಸ್ ಅಂದ್ರೆ ಏನು ಅನ್ನುವ ಪಾಠ ಮಾಡಲಿ. ಅವರಿಂದ ನಾನು ಕಲಿಯುವದು ಬಹಳಷ್ಟಿದೆ' ಎಂದು ತಿಳಿಸಿದರು.
ಎಂ.ಬಿ.ಪಾಟೀಲ್ ಏನು ಹೇಳಿದ್ದರು? : ಬೆಳಗಾವಿಯಲ್ಲಿ ಮಾತನಾಡಿದ್ದ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು, 'ಯಡಿಯೂರಪ್ಪ, ಈಶ್ವರಪ್ಪ ಅವರಿಗೆ ಎಷ್ಟು ಕಾಮನ್ ಸೆನ್ಸ್ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಪುಲ್ವಮಾ ದಾಳಿ ಆದ ಮೇಲೆ ಯಡಿಯೂರಪ್ಪ 22 ಸ್ಥಾನ ಗೆಲ್ಲುವ ಬಗ್ಗೆ ಮಾತನಾಡುವ ಮೂಲಕ ಸೈನಿಕರ ಸಾವನ್ನೂ ತಮ್ಮ ರಾಜಕೀಯ ಬಳಸಿಕೊಂಡ ಅವರ ವಿವೇಕ ಎಂತಹದು' ಎಂದು ಹೇಳಿದ್ದರು.












Click it and Unblock the Notifications