ಟೈಂ ಬರ್ಲಿ ಅವರನ್ನೆಲ್ಲ ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗೋಣ-ಸತೀಶ್ ಜಾರಕಿಹೊಳಿ ಹೀಗೆ ಹೇಳಿದ್ದೇಕೆ?
ಬೆಳಗಾವಿ, ನವೆಂಬರ್, 26: ಟೈಂ ಬಂದಾಗ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗೋಣ ಎಂದು ವಿದೇಶ ಪ್ರವಾಸದಿಂದ ವಾಪಸ್ ಆದ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಹೇಳಿದರು. ಅವರು ಹೀಗೆ ಹೇಳಿದ್ದೇಕೆ? ಇದರ ಹಿಂದಿರುವ ಉದ್ದೇಶವೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿದೇಶ ಪ್ರವಾಸ ಸ್ವಂತ ಮತ್ತು ಖಾಸಗಿ ಪ್ರವಾಸವಾಗಿದೆ. ಬೇರೆ ಬೇರೆ ಕೆಲಸವಿತ್ತು, ಅದಕ್ಕೆ ಪ್ರವಾಸಕ್ಕೆ ಹೋಗಿದ್ದೆ. ಅದರಲ್ಲಿ ಏನು ವಿಶೇಷವಿಲ್ಲ ಎಂದರು. ಇನ್ನು ಹಾಲಿ ಮತ್ತು ಮಾಜಿ ಶಾಸಕರನ್ನು ಬಿಟ್ಟು ಹೋಗಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನೋಡೋಣ ಟೈಮ್ ಬಂದಾಗ ಅವರನ್ನು ಕರೆದುಕೊಂಡು ಹೋಗೋಣ ಎಂದು ನಗುತ್ತಲೇ ಉತ್ತರಿಸಿದರು.

ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಮರ್ಜ್ ಮಾಡುತ್ತಿರುವ ವಿಚಾರಕ್ಕೆ ಪ್ರಕ್ರಿಯಿಸಿ, 10 ವರ್ಷಗಳ ಹಿಂದೆ ಒಂದು ರಿಪೋರ್ಟ್ ಕೊಟ್ಟಿದ್ದಾರೆ. ಆ ರಿಫೋರ್ಟ್ ಆಧಾರದ ಮೇಲೆ ಮರ್ಜ್ ಮಾಡುತ್ತಾರೆ. ಇಲಾಖೆಗಳ ವಿಲೀನಕ್ಕೂ ಗ್ಯಾರಂಟಿ ಯೋಜನೆಗಳಿಗೂ ಸಂಬಂಧವಿಲ್ಲ ಎಂದರು.
ಕಾಂತರಾಜ್ ವರದಿ ಅಂಗೀಕಾರ ಮಾಡಿದರೆ ಕಾಂಗ್ರೆಸ್‌ಗೆ ಎಫೆಕ್ಟ್ ಆಗುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇನ್ನೂ ಕಾಂತರಾಜ್ ವರದಿ ನಮಗೆ ಕೊಡಬೇಕು. ಆ ವರದಿ ಚರ್ಚೆ ಆಗಬೇಕು, ಆಮೇಲೆ ಒಪ್ಪಿಕೊಳ್ಳುವ ಪ್ರಶ್ನೆ ಬರುತ್ತದೆ.
ಇನ್ನೂ ಕಾಂತರಾಜ್ ವರದಿ ಪ್ರಕ್ರಿಯೆಗೆ ಲಾಂಗ್ ಟೈಮ್ ಇದೆ. ಎರಡು ತಿಂಗಳು ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಕಾಂತರಾಜ್ ವರದಿ ಕೊಟ್ಟ ಬಳಿಕ ಸರ್ಕಾರವಿದೆ. ಸಿಎಂ, ಡಿಸಿಎಂ ಅವರು ಚರ್ಚೆ ಮಾಡುತ್ತಾರೆ ಎಂದರು.
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ಆಗಿದೆ. ಡಿಸಿ, ಕಮಿಷನರ್ ಎಲ್ಲರೂ ಅಗತ್ಯ ತಯಾರಿ ಮಾಡಿದ್ದಾರೆ. ಪ್ರತಿಭಟನೆ ಮಾಡುವವರಿಗೆ ಬೇಡ ಅನ್ನೋದಕ್ಕೆ ಆಗುವುದಿಲ್ಲ. ಅವರು ಬಂದು ಸರ್ಕಾರಕ್ಕೆ ತಮ್ಮ ಸಮಸ್ಯೆಗಳನ್ನು ಹೇಳಲಿ ಎಂದ ಅವರು, ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರೆ ಕೊಂಚ ಸಮಾಧಾನ ಆಗುತ್ತಾರೆ. ಲೋಕಸಭೆ ಚುನಾವಣೆಗೆ ಸಿದ್ಧತೆ ಬಗ್ಗೆ ಅಧಿವೇಶನ ವೇಳೆ ಸಭೆ ಮಾಡುತ್ತೇವೆ ಎಂದು ಹೇಳಿದರು.
ಡಿ.ಕೆ.ಶಿ ಮೇಲಿನ ಪ್ರಕರಣ ವಾಪಸ್ ಸ್ವಾಗತಾರ್ಹ
ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನ ರಾಜಕೀಯ ವಿರೋಧಿಗಳನ್ನು ಹಣಿಯಲಿಕ್ಕೆ ಉಪಯೋಗಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಗಂಭೀರ ಸ್ವರೂಪದ ಆರೋಪ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲಿನ ಅಕ್ರಮ ಪ್ರಕರಣ ವಾಪಾಸ್ ಪಡೆಯಲು ಸಚಿವ ಸಂಪುಟದ ಒಪ್ಪಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂದು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದರು.
ಡಿ.ಕೆ.ಶಿವಕುಮಾರ್ ಮೇಲಿನ ಪ್ರಕರಣವನ್ನು ಸಿಬಿಐಗೆ ಕೊಟ್ಟವರು ಯಾರು? ಅಂದು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಇದ್ದರು. ಅವರೇ ಈ ಪ್ರಕರಣ ಸಿಬಿಐಗೆ ಕೊಟ್ಟವರು. ಇಂದು ಕಾಂಗ್ರೆಸ್ ಸರ್ಕಾರದ ಬಂದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಸಹಜವಾಗಿಯೇ ಡಿಸಿಎಂ ಶಿವಕುಮಾರ್ ಮೇಲಿನ ಪ್ರಕರಣ ವಾಪಾಸ್ ಪಡೆದರೆ ಇದನ್ನು ನಾನು ಸ್ವಾಗತ ಮಾಡುವೆ ಎಂದರು.
ಈ ಕುರಿತು ಮಾತನಾಡಲು ಯಾರಿಗೂ ನೈತಿಕತೆ ಇಲ್ಲ. ಪಾರ್ಲಿಮೆಂಟ್‌ನಲ್ಲಿ ಆದಾನಿ ವಿರುದ್ಧ ಮಾತಾಡಿದರೆ ನೋಟಿಸ್ ಕೊಡುತ್ತಾರೆ. ಯಾವ ಆಧಾರದ ಮೇಲೆ ಕೊಡುತ್ತಾರೆ. ಯಾವುದೇ ಪ್ರಕರಣ, ದೂರು ದಾಖಲು ಮಾಡದೇ ನೋಟಿಸ್ ಕೊಡುವುದು ತಪ್ಪು. ಈ ನಿಟ್ಟಿನಲ್ಲಿ ನನಗೆ ಕಾನೂನು ಬಗ್ಗೆ ಮಾಹಿತಿ ಇದೆ ಅಂತಾ ಮಾತಾನಾಡುವೆ. ಒಬ್ಬ ವ್ಯಕ್ತಿ ಮೇಲೆ ದೂರು ದಾಖಲು ಮಾಡಿದ ನಂತರ ನೋಟಿಸ್, ವಿಚಾರಣೆ ಮಾಡಬೇಕು ಎಂದರು.












Click it and Unblock the Notifications