ಬೆಳಗಾವಿ: ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ

ಬೆಳಗಾವಿ, ಆಗಸ್ಟ್ 17: ಕರ್ನಾಟಕ ಮತ್ತು ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪ್ರಸಿದ್ಧ ಗೋಕಾಕ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.

ಭಾರತದ ನಯಾಗರಾ ಖ್ಯಾತಿಯ ಗೋಕಾಕ್ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 40 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಹೀಗಾಗಿ ಗೋಕಾಕ ಜಲಪಾತದ ನಯನ ಮನೋಹರ ದೃಶ್ಯ ನೋಡುಗರನ್ನು ಆಕರ್ಷಿಸುತ್ತಿದೆ.

ಗೋಕಾಕ ಹೊರವಲಯದ ಲೋಳಸೂರ ಸೇತುವೆ ಕೂಡಾ ಮುಳುಗಡೆ ಆಗಿದೆ. ಪ್ರಾಣ ಭಯದಲ್ಲೇ ಬೈಕ್, ವಾಹನ ಸವಾರರು ಸೇತುವೆ ದಾಟುತ್ತಿದ್ದಾರೆ. ಅದೇ ರೀತಿ ಘಟಪ್ರಭಾ ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

Belagavi: Water Overflows In Gokak Falls Due To Heavy Rain

ಬೆಳಗಾವಿ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಗೂ ನುಗ್ಗಿದ ನೀರು

ಬೆಳಗಾವಿ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ ಜಿಲ್ಲೆಯ ಸಪ್ತನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ನದಿ ಪಾತ್ರದ ದೇವಸ್ಥಾನಗಳು ಕೂಡ ಮುಳುಗಡೆ ಆಗಿವೆ.

Belagavi: Water Overflows In Gokak Falls Due To Heavy Rain

ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಸಮೀಪದ ಗಂಗಾಂಬಿಕೆ ಐಕ್ಯ ಸ್ಥಳವೂ ಮಲಪ್ರಭಾ ನದಿಯಿಂದ ಮುಳುಗಡೆ ಆಗಿದೆ. ಘಟಪ್ರಭಾ ನದಿಯ ಒಳಹರಿವು ಹೆಚ್ಚಳದಿಂದ ಹುಕ್ಕೇರಿ ತಾಲ್ಲೂಕಿನ ಕೊಟಬಾಗಿ ಗ್ರಾಮದ ದುರ್ಗಾದೇವಿ ದೇವಸ್ಥಾನ ಜಲಾವೃತಗೊಂಡಿವೆ.

Belagavi: Water Overflows In Gokak Falls Due To Heavy Rain

ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಚಿಕ್ಕೋಡಿ ‌ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಮುಳುಗಡೆಯಾಗಿದೆ. ರಾಮದುರ್ಗ ತಾಲೂಕಿನ ಕಿಲ್ಲಾತೋರಗಲ್ಲ ಬಳಿಯ ದೇವಸ್ಥಾನ ಕೂಡಾ ಮುಳುಗಡೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+