ವೈರಲ್ ವಿಡಿಯೋ : ನಡು ರಸ್ತೆಯಲ್ಲಿಯೇ ಯುವತಿಗೆ ಮಹಿಳೆಯರಿಂದ ಥಳಿತ

ಬೆಳಗಾವಿ, ಜೂನ್.17: ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಇಬ್ಬರು ಮಹಿಳೆಯರು ಸೇರಿ ಯುವತಿಗೆ ಥಳಿಸುತ್ತಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.

ನಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಬೆನ್ನತ್ತಿ ಬಂದ ಮಹಿಳೆಯರು ಸಾರ್ವಜನಿಕರೇ ಎದುರೇ ರಸ್ತೆಯಲ್ಲಿ ಹೊಡೆಯುತ್ತಾ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ ವಿಡಿಯೋ ವಾಟ್ಸಪ್ ನಲ್ಲಿ ವೈರಲ್ ಆಗಿದೆ.

ಮಹಿಳೆಯರು ವೈಯಕ್ತಿಕ ಕಾರಣಕ್ಕಾಗಿ ಯುವತಿಯನ್ನು ಥಳಿಸಿದ್ದು, ಅವಾಚ್ಯ ಪದಬಳಕೆ ಮಾಡುತ್ತ ಚಪ್ಪಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಆದರೆ ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

Two Women beat the young woman in Athani

ಸಾಮಾನ್ಯವಾಗಿ ಮಹಿಳೆ, ಯುವತಿಯರ ಮೇಲೆ ಹೆಣ್ಣು ಮಕ್ಕಳೇ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುವ ಘಟನೆ ನಮ್ಮ ರಾಜ್ಯಗಳಲ್ಲಿ ನಡೆಯುವುದು ವಿರಳ. ಹೊರ ರಾಜ್ಯಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು. ಆದರೆ ಇದೀಗ ನಮ್ಮ ರಾಜ್ಯದಲ್ಲಿಯೇ, ಅಥಣಿಯಂತಹ ಪಟ್ಟಣದಲ್ಲಿಯೇ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ.

ಮುಂದೆ ಈ ಘಟನೆ ಯಾವ ರೂಪಕ್ಕೆ ತಿರುಗುವುದೋ ಕಾದು ನೋಡಬೇಕು. ಆದರೆ ಯುವತಿ ಮೇಲೆ ಮಹಿಳೆಯರು ಹಲ್ಲೆ ನಡೆಸುತ್ತಿರುವ ಪ್ರಕರಣ ಇದೀಗ ವಾಟ್ಸ್ ಅಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯರ ನಡೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+