ಮರಾಠಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಜೈಕಾರ: ಟ್ವಿಟ್ಟಿಗರ ಧಿಕ್ಕಾರ!
ಬೆಳಗಾವಿ, ಆಗಸ್ಟ್ 31: "ಇದು ಕಾಂಗ್ರೆಸ್ ನ ಮೂರ್ಖತನದ ಪರಾಕಾಷ್ಠೆ. ಮತಕ್ಕಾಗಿ ಧರ್ಮವನ್ನೇ ಒಡೆಯುವ ಕೆಲಸ ಮಾಡಿದಿರಿ. ಈಗ ರಾಜ್ಯವನ್ನೇ ಒಡೆಯುವ ಕೆಲಸ ಮಾಡುತ್ತಿದ್ದೀರಿ. ನೀವು ಏನು ಮಾಡುತ್ತಿದ್ದೀರಿ? ಕನ್ನಡಿಗರು ಇದನ್ನೆಲ್ಲ ಗಮನಿಸುತ್ತಿದ್ದಾರೆ!"
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿವಾದಾತ್ಮಕ ಹೇಳಿಕೆಗೆ ಟ್ವಿಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ! ಬೆಳಗಾವಿಯ ಬಸರೀಕಟ್ಟೆ ಗ್ರಾಮದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ 38 ವರ್ಷದ ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ, ಮಹಾರಾಷ್ಟ್ರದ ದ್ವಜ ಹಿಡಿದು ಜೈಕಾರ ಹಾಕುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕರ್ನಾಟಕದಲ್ಲೇ ಇದ್ದುಕೊಂಡು, ಸ್ವಾಭಿಮಾನ ಮರೆತು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲಿ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಟ್ವಿಟ್ಟಿಗರು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಅತ್ತ ಮರಾಠಿ ಬಾವುಟಕ್ಕೆ ಜೈಕಾರ ಹಾಕಲು ಹೆಬ್ಬಾಳ್ಕರ್ ಉತ್ಸುಕರಾಗಿದ್ದರೆ, ಇತ್ತ ಟ್ವಿಟ್ಟಿಗರು ಅವರ ವಿರುದ್ಧ ಹೂಂಕರಿಸುತ್ತಿದ್ದಾರೆ!
|
ಕನ್ನಡಿಗರು ಗಮನಿಸುತ್ತಿದ್ದಾರೆ!
ಇದು ಕಾಂಗ್ರೆಸ್ ನ ಮೂರ್ಖತನದ ಪರಾಕಾಷ್ಠೆ. ಮತಕ್ಕಾಗಿ ಧರ್ಮವನ್ನೇ ಒಡೆಯುವ ಕೆಲಸ ಮಾಡಿದಿರಿ. ಈಗ ರಾಜ್ಯವನ್ನೇ ಒಡೆಯುವ ಕೆಲಸ ಮಾಡುತ್ತಿದ್ದೀರಿ. ನೀವು ಏನು ಮಾಡುತ್ತಿದ್ದೀರಿ? ಕನ್ನಡಿಗರು ಇದನ್ನೆಲ್ಲ ಗಮನಿಸುತ್ತಿದ್ದಾರೆ!" ಎಂದು ಪ್ರಶಾಂತ್ ಕುಮಾರ್ ಎ. ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಕರ್ನಾಟಕ ರಸವಿಲ್ಲದ ಕಬ್ಬಿನ ಜಲ್ಲೆಯೇ?
ಕರ್ನಾಟಕದ ನೆಲ ಜಲ ಬಳಸಿ ಸಕ್ಕರೆ ಕಾರ್ಖಾನೆ ನಡೆಸುವ ಈ ಮಹಿಳೆಗೆ, ಕರ್ನಾಟಕವೀಗ ರಸವಿಲ್ಲದ ಕಬ್ಬಿನ ಜಲ್ಲೆಯ ರೀತಿ ಕಂಡಿದ್ದರೆ ಆಶ್ಚರ್ಯವಿಲ್ಲ !! ಎಂಬ ಹೇಳಿಕೆ ಎಸ್ ಜೆ ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಆಗಿದೆ.
|
ತಮ್ಮ ಅಸಲಿ ಮುಖ ತೋರಿಸಿದ್ದಾರೆ!
ಕನ್ನಡ ವಿರೋಧಿ ಹೇಳಿಕೆ ನೀಡುವ ಮೂಲಕ ತಾವು ಮರಾಠರ ಪರ ಎಂಬ ತಮ್ಮ ಅಸಲಿ ಮುಖವನ್ನು ಕೊನೆಗೂ ಲಕ್ಷ್ಮಿ ಹೆಬ್ಬಾಳ್ಕರ್ ತೋರಿಸಿದ್ದಾರೆ ಎಂದು ಶ್ರೀನಿವಾಸ ಕೋದಂಡರಾಮ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಬೆಳಗಾವಿಯವನಾಗಿ ಒಂದು ಮನವಿ!
ಲಕ್ಷ್ಮಿ ಹೆಬ್ಬಾಳ್ಕರ್ ಕನ್ನಡ ದ್ರೋಹಿ, ಕಾಂಗ್ರೆಸ್ ಕನ್ನಡ ದ್ರೋಹಿ. ಬೆಳಗಾವಿಯವನಾಗಿ ನಾನು ಬೆಳಗಾವಿ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಇಂಥ ಜನರಿಗೆ ಬೆಂಬಲ ನೀಡಬೇಡಿ ಎಂದು ಎಂದು ಅಮರ್ ಕುಲಕರ್ಣಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ದಯವಿಟ್ಟು ಕರ್ನಾಟಕದಿಂದ ಹೊರಹೋಗಿ
ಮೇಡಂ, ನಿಮಗೆ ಎಲ್ಲವೂ ಕರ್ನಾಟಕದಿಂದಲೇ ಸಿಕ್ಕಿದೆ. ಆದರೂ ಮಹಾರಾಷ್ಟ್ರವನ್ನು ಬೆಂಬಲಿಸುತ್ತಿದ್ದೀರಿ. ದಯವಿಟ್ಟು ಕರ್ನಾಟಕದಿಂದ ಹೊರಹೋಗಿ ಎಂದು ಮೋಹನ್ ಎನ್.ಸಿ. ಎನ್ನುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications