ಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಮದುವೆಯಾದ ಭೂಪ
ಬೆಂಗಳೂರು, ಸೆ.26: ಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಅಪಹರಿಸಿ ಮದುವೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಇದೀಗ ಪತ್ನಿಯನ್ನು ಕಳೆದುಕೊಂಡ ಪತಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ, ಕೋಗಾಕ್ ತಾಲೂಕಿನ ಮಿಡಕನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಬಸವರಾಜ ಪತ್ನಿ ಕಳೆದುಕೊಂಡವರು. ಆತ ಸ್ನೇಹಿತ ರಮೇಶ್ ಹುಕ್ಕೇರಿ ಬಸವರಾಜ್ ಕೋನನ್ನವರ ಎಂಬಾತನ ಪತ್ನಿಯನ್ನು ಅಪಹರಿಸಿ ವಿವಾಹವಾಗಿದ್ದಾರೆ, ರಮೇಶ್ ಹುಕ್ಕೇರಿ , ಬಸವರಾಜ ಮತ್ತು ಈತನ ಪತ್ನಿ ಸವಿತಾ ಒಂದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಈ ವೇಳೆ ರಮೇಶ್, ಬಸವರಾಜ ಮತ್ತು ಪತ್ನಿ ಜತೆ ಸ್ನೇಹ ಬೆಳೆಸಿದ್ದಾರೆ, ಈ ಸ್ನೇಹ ಮುಂದುವರೆದು ಹಣಕಾಸಿನ ಕೊಡು-ಕೊಳ್ಳುವಿಕೆಯೂ ನಡೆದಿದೆ. ಬಸವರಾಜ ಪತ್ನಿಗೆ ರಮೇಶ್ ಒಂದು ಮೊಬೈಲ್ ಕೊಡಿಸಿದ್ದ ಬಳಿಕ ಅದು ಬಸವರಾಜ್ ಗೆ ತಿಳಿದು ಅದನ್ನು ಒಡೆದು ಹಾಕಿದ್ದ ಹೀಗೆಯೇ ಮುಂದುವರೆದು ಬಸವರಾಜ ರಮೇಶ್ ಬಳಿ 500 ರೂ ಸಾಲ ಪಡೆದುಕೊಂಡಿದ್ದ ಅದನ್ನು ವಾಪಸ್ ನೀಡಿದ್ದಕ್ಕೆ ಅಪಹರಿಸಿ ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರ ಬಳಿ ನಡೆದ ವಿಷಯ ಎಲ್ಲವನ್ನು ಹೇಳಿದ್ದಾನೆ.ಆದರೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ತನ್ನ ಹೆಂಡತಿ ಗರ್ಭಿಣಿಯಾಗಿದ್ದು ಆಕೆ ವಿಚ್ಛೇದನ ನೀಡದೆ ರಮೇಶನ ಜತೆ ಸಂಸಾರ ನಡೆಸುತ್ತಿದ್ದಾಳೆ ಎಂದು ದೂರಿದ್ದಾನೆ.












Click it and Unblock the Notifications